-ಶ್ರೀ-ದಂಡಿನಮ್ಮ-ದೇವಿಯ-ಪೂಜೋತ್ಸವ
ಕೂಡಿಗೆ, ಮೇ 14: ಕೂಡಿಗೆ-ಕೊಪ್ಪಲು, ಹೆಗ್ಗಡಳ್ಳಿ ಶ್ರೀ ದಂಡಿನಮ್ಮ ಮತ್ತು ಶ್ರೀ ಬಸವೇಶ್ವರ ಹಾಗೂ ಶ್ರೀ ಮುತ್ತತ್‍ರಾಯ ಮತ್ತು ಗ್ರಾಮಗಳ ಸೇವಾ ಸಮಿತಿ ವತಿಯಿಂದ ಜೂ. 1 ರಂದು ಗ್ರಾಮ ದೇವತೆ ಶ್ರೀ ದಂಡಿನಮ್ಮ ತಾಯಿಯವರ 26ನೇ ವರ್ಷದ ವಾರ್ಷಿಕ ಪೂಜೆ ಮತ್ತು ಜಾತ್ರೋತ್ಸವ-2018 ನಡೆಯಲಿದೆ. 
ಹಬ್ಬದ ಅಂಗವಾಗಿ ತಾ. 28 ರಂದು ಸಂಜೆ ಬಸವೇಶ್ವರ ದೇವರ ಮೆರವಣಿಗೆ, ತಾ. 31 ರಂದು ಬೆಳಿಗ್ಗೆ ಪುಣ್ಯಾಹ ಮತ್ತು ದಿಗ್ಭಂದನ ಕಾರ್ಯಕ್ರಮ ಮತ್ತು ಅಷ್ಟ ದಿಗ್ಬಂದನೆ ಹಾಗೂ ವಿವಿಧ ಪೂಜಾ ಕಾರ್ಯಗಳು ನಡೆಯಲಿವೆ. ಜೂ. 1 ರಂದು ಬೆಳಗ್ಗಿನಿಂದ ಗಣಪತಿ ಹೋಮ, ನವಗ್ರಹ ಶಾಂತಿ ಹೋಮ, ದುರ್ಗಿ ಶಾಂತಿ ಹೋಮ, ದೇವಿಗೆ ಅಭಿಷೇಕ ಮತ್ತು 12.30ಕ್ಕೆ ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ, ಸಂಜೆ 7.30ರಿಂದ ಕೊಂಡಾ ಪೂಜಾ ಕಾರ್ಯಕ್ರಮ, ಹಣ್ಣಾಡಗೆ ಉತ್ಸವ, ಕೊಂಡೋತ್ಸವ ಮತ್ತು ಉಯ್ಯಾಲೆ ಮಹೋತ್ಸವ ನಡೆಯಲಿದೆ. 
ಜೂನ್ 2 ರಂದು ಬೆಳಗ್ಗೆ 8 ಗಂಟೆಯಿಂದ ಶ್ರೀ ದಂಡಿನಮ್ಮ ತಾಯಿಗೆ ವಿವಿಧ ಪೂಜಾ ಕಾರ್ಯಗಳು ನಡೆಯಲಿವೆ. ಜೂ. 3 ರಂದು ಶ್ರೀ ಮುತ್ತತ್‍ರಾಯ ದೇವರಿಗೆ ಬಲಿ ಪೂಜೆ ಮತ್ತು ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗ ನಡೆಯುತ್ತದೆ ಎಂದು ದೇವಾಲಯ ಸಮಿತಿಯ ಅಧ್ಯಕ್ಷ ಪ್ರಕಟಣೆಯಲ್ಲಿ ತಿಳಿಸಿದೆ.

Home    About us    Contact