ಅಭ್ಯತ್‍ಮಂಗಲದಲ್ಲಿ-ಕಾಡಾನೆ-ಕಾರ್ಯಾಚರಣೆ

 ಸಿದ್ದಾಪುರ, ಮೇ 14: ಅಭ್ಯತ್‍ಮಂಗಲ ವ್ಯಾಪ್ತಿಯಲ್ಲಿ ಬೀಡುಬಿಟ್ಟಿದ್ದ ಕಾಡಾನೆ ಹಿಂಡನ್ನು ಕಾರ್ಯಾಚರಣೆ ನಡೆಸಿ ದುಬಾರೆ ಮೀಸಲು ಅರಣ್ಯಕ್ಕೆ ಅಟ್ಟುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.ಅಭ್ಯತ್‍ಮಂಗಲ ಗ್ರಾಮದಲ್ಲಿ ಕಳೆದ ಕೆಲವು ದಿನಗಳಿಂದ ಬೀಡುಬಿಟ್ಟಿದ್ದ ಮರಿ ಆನೆ ಹಾಗೂ 3 ಸಲಗ ಸೇರಿದಂತೆ ಒಟ್ಟು 13 ಕಾಡಾನೆಗಳ ಹಿಂಡನ್ನು ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ, ಪಟಾಕಿ ಸಿಡಿಸಿ ದುಬಾರೆ ಮೀಸಲು ಅರಣ್ಯಕ್ಕೆ ಅಟ್ಟಿದೆ. ಕಾರ್ಯಾಚರಣೆಯಲ್ಲಿ ಆರ್.ಎಫ್.ಓ ಅರುಣ ಮಾರ್ಗದರ್ಶನದಲ್ಲಿ ಉಪ ವಲಯ ಅರಣ್ಯಾಧಿಕಾರಿ ವಿಲಾಸ್ ಗೌಡ, ಅರಣ್ಯ ರಕ್ಷಕ ಚರಣ್, ಸಿಬ್ಬಂದಿಗಳಾದ ಧರ್ಮಪಾಲ್, ಜಗದೀಶ್, ಆಲ್ಬರ್ಟ್, ವಾಸುದೇವ, ಆರ್.ಆರ್.ಟಿ. ತಂಡದ ಆಶಿಕ್, ಸುಬ್ರಮಣ್ಯ ಸೇರಿದಂತೆ ಇನ್ನಿತರರು ಇದ್ದರು.ಕಳೆದ ಕೆಲವು ದಿನಗಳ ಹಿಂದೆ ವಾಲ್ನೂರು ಗ್ರಾಮದಲ್ಲಿ 23 ಕಾಡಾನೆಗಳು ಬೀಡುಬಿಟ್ಟಿದ್ದವು. ಆ ಸಂದರ್ಭ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ಆನೆಗಳನ್ನು ದುಬಾರೆ ಮೀಸಲು ಅರಣ್ಯಕ್ಕೆ ಅಟ್ಟಿತ್ತು. ಆದರೆ ಕಾಡಿಗೆ ಅಟ್ಟಲಾದ ಕಾಡಾನೆಗಳು ಮರಳಿ ನಾಡಿಗೆ ಬರುತ್ತಿವೆ. ಮತ್ತೆ ಕಾಫಿ ತೋಟಗಳಲ್ಲಿ ದಾಂಧಲೆ ನಡೆಸುತ್ತಿವೆ. ಇದರಿಂದಾಗಿ ಗ್ರಾಮಸ್ಥರು ಆತಂಕಕ್ಕೆ ಸಿಲುಕಿದ್ದಾರೆ.


Home    About us    Contact