35.60-ಕೋಟಿ-ರೂಪಾಯಿ-ಪರಿಹಾರ

 ಮಡಿಕೇರಿ, ಮೇ 20: ಕಳೆದ ವರ್ಷದ ಮುಂಗಾರುವಿನ ವೇಳೆಯಲ್ಲಿ ಮಳೆಯ ತೀವ್ರತೆ ನಡುವೆ ಜಿಲ್ಲೆಯ ಕೆಲವೆಡೆ ಕಂಡು ಕೇಳರಿಯದ ಪ್ರಾಕೃತಿಕ ವಿಕೋಪದಿಂದ ಸಂಭವಿಸಿರುವ ಹಾನಿಯಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರು, ಬೆಳೆಗಾರರಿಗೆ ಇದುವರೆಗೆ ರೂ.35.60 ಕೋಟಿಯಷ್ಟು ಮೊತ್ತದ ನೇರ ಪರಿಹಾರವನ್ನು ಸಂಬಂಧಪಟ್ಟವರ ಬ್ಯಾಂಕ್ ಉಳಿತಾಯ ಖಾತೆಗಳಿಗೆ ಸಂದಾಯ ಮಾಡಲಾಗಿದೆ. ಜಿಲ್ಲಾಡಳಿತದಿಂದ ಲಭಿಸಿರುವ  ಅಧಿಕೃತ ಮಾಹಿತಿ ಪ್ರಕಾರ ಇದುವರೆಗೆ ಒಟ್ಟು 33,734 ಮಂದಿ ರೈತ ಫಲಾನುಭವಿಗಳಿಗೆ ರೂ. 35,60,37,023 ಮೊತ್ತವನ್ನು ಪರಿಹಾರ ರೂಪದಲ್ಲಿ ಹಂಚಿಕೆ ಮಾಡಲಾಗಿದೆ.ಈ ಪೈಕಿ ಜಲ ಪ್ರವಾಹದಿಂದ ಹಾನಿಗೊಂಡಿರುವ ಆಸ್ತಿ ಪಾಸ್ತಿಗೆ ಸಂಬಂಧಪಟ್ಟಂತೆ 32,198 ಮಂದಿ ಫಲಾನುಭವಿಗಳಿಗೆ ಒಟ್ಟು ಮೊತ್ತ ಮೂವತ್ತೆರಡು ಕೋಟಿ ನಲವತ್ತೆರಡು ಲಕ್ಷದ ಐವತ್ತೊಂದು ಸಾವಿರದ ಹದಿನೈದು ರೂಪಾಯಿಗಳನ್ನು ಸಂಬಂಧಪಟ್ಟವರ ಖಾತೆಗಳಿಗೆ ಜಮಾಗೊಳಿಸಲಾಗಿದೆ. ಈ ಪ್ರಕಾರ ಮೊದಲನೇಯ ಹಂತದಲ್ಲಿ ಹದಿನೇಳು ಮಂದಿಗೆ ರೂ. ತೊಂಬತ್ತೊಂದು ಸಾವಿರದ ಆರುನೂರ ಇಪ್ಪತ್ತನಾಲ್ಕರಷ್ಟು ಮೊತ್ತವನ್ನು ವಿತರಣೆ ಮಾಡಲಾಗಿದೆ. ದ್ವಿತೀಯ ಹಂತದಲ್ಲಿ 1260 ಮಂದಿಗೆ ರೂಪಾಯಿ ಎಪ್ಪತ್ತಮೂರು ಲಕ್ಷದ ಹದಿಮೂರು ಸಾವಿರದ ಎಂಟನೂರ ಮೂವತ್ತಾರರಷ್ಟು ಮೊತ್ತ ಕಲ್ಪಿಸಲಾಗಿದೆ.

 ಮೂರನೆಯ ಹಂತದಲ್ಲಿ ಹತ್ತು ಸಾವಿರದ ಏಳುನೂರ ಐವತ್ತು ಮಂದಿ ರೈತರಿಗೆ ರೂ. ಎಂಟು ಕೋಟಿ ನಲವತ್ತೊಂದು ಲಕ್ಷದ ಐವತ್ತಮೂರು ಸಾವಿರದ ಒಂಬೈನೂರ ಏಳರಷ್ಟು ಮೊತ್ತದ ಹಣವನ್ನು ಒದಗಿಸಲಾಗಿದೆ. ಅಂತೆಯೇ ನಾಲ್ಕನೆಯ ಹಂತದಲ್ಲಿ ಆರು ಸಾವಿರದ ಆರು ಮಂದಿಗೆ ರೂ. ಐದು ಕೋಟಿ ಇಪ್ಪತ್ತಮೂರು ಲಕ್ಷದ ನಲವತ್ತನಾಲ್ಕು ಸಾವಿರದ ಇನ್ನೂರರಷ್ಟು ಹಣ ಅವರವರ ಖಾತೆಗೆ ಹಂಚಲಾಗಿದೆ.
ಮುಂದುವರಿದು ಐದನೆಯ ಹಂತದಲ್ಲಿ 2369 ಮಂದಿ ರೈತ ಫಲಾನುಭವಿಗಳ ನಷ್ಟದ ಬಾಬ್ತು ರೂ. 2 ಕೋಟಿ ಎಪ್ಪತ್ತೈದು ಲಕ್ಷ ಅರವತ್ತೆರಡು ಸಾವಿರದ ಇನ್ನೂರ ನಲವತ್ತರಷ್ಟು ಮೊತ್ತ ಹಂಚಿಕೆ ಮಾಡಲಾಗಿದೆ. ಹಾಗೆಯೇ ಆರನೆಯ ಹಂತದಲ್ಲಿ 4274 ಮಂದಿ ಸಂಕಷ್ಟಕ್ಕೆ ಸಿಲುಕಿದ ರೈತರಿಗೆ ಐದು ಕೋಟಿ ಎಂಬತ್ತೇಳು ಲಕ್ಷದ ಮೂವತ್ತೊಂದು  ಸಾವಿರದ ಇನ್ನೂರ ಇಪ್ಪತ್ತು ರೂಪಾಯಿ ಹಂಚಲಾಗಿದೆ. ಮಾತ್ರವಲ್ಲದೆ ಏಳನೆಯ ಹಂತದಲ್ಲಿ 6520 ಮಂದಿ ಕೃಷಿಕರ ನಷ್ಟದ ಬಾಬ್ತು ರೂ. 7 ಕೋಟಿ ಎಪ್ಪತ್ತೆಂಟು ಲಕ್ಷ ಮೂವತ್ತಾ ಮೂರು ಸಾವಿರದ ಒಂಬೈನೂರ ಏಳರಷ್ಟು ಮೊತ್ತವನ್ನು ಸಂಬಂಧಪಟ್ಟವರ ಖಾತೆಗಳಿಗೆ ವಿತರಿಸಲಾಗಿದೆ.ಉಳಿದಂತೆ ಎಂಟನೆಯ ಹಂತದಲ್ಲಿ ಒಂದು ಸಾವಿರದ ಎರಡು ಮಂದಿ ಫಲಾನುಭವಿಗಳಿಗೆ ಒಂದು ಕೋಟಿ ಅರವತ್ತೆರಡು ಲಕ್ಷ ಇಪ್ಪತ್ತು ಸಾವಿರದ ಎಂಬತ್ತೊಂದು ರೂ.ಗಳನ್ನು ನೆರವಿನ ರೂಪದಲ್ಲಿ ವಿತರಣೆ ಮಾಡಲಾಗಿದೆ.
ಭೂಕುಸಿತ : ಭೂಕುಸಿತದಿಂದ ಹಾನಿಗೊಂಡಿರುವ ಫಸಲು ಹಾನಿ, ನಷ್ಟದ ಬಾಬ್ತು ಮೊದಲನೆಯ ಹಂತದಲ್ಲಿ 765 ಮಂದಿಗೆ ರೂ. ಒಂದು ಕೋಟಿ ಎಪ್ಪತೈದು ಲಕ್ಷದ ಮೂರು ಸಾವಿರದ ಒಂದುನೂರ ಇಪ್ಪತೈದÀರಷ್ಟು ಮೊತ್ತವನ್ನು ಹಂಚಿಕೆ ಮಾಡಲಾಗಿದೆ. ಈ ಸಂಬಂಧ ದ್ವಿತೀಯ ಹಂತದಲ್ಲಿ ನಾಲ್ಕುನೂರ ಇಪ್ಪತ್ತು ಮಂದಿ ಭೂ ಮಾಲೀಕರಿಗೆ ಒಂದು ಕೋಟಿ ಇಪ್ಪತ್ತೊಂದು ಲಕ್ಷದ ತೊಂಬತ್ತು ಸಾವಿರದ ಐದುನೂರ ನಲವತ್ತು ರೂಪಾಯಿ ಪೂರೈಸಲಾಗಿದೆ. ಹೀಗೆ ಭೂಕುಸಿತದಿಂದ ತೊಂದರೆಗೆ ಸಿಲುಕಿರುವ ಒಂದು ಸಾವಿರದ ಒಂದುನೂರ ಎಂಬತೈದು ಮಂದಿಗೆ ಒಟ್ಟು ರೂ. ಎರಡು ಕೋಟಿ ತೊಂಬ್ಬತ್ತಾರು ಲಕ್ಷ ತೊಂಬತ್ತ ಮೂರು ಸಾವಿರದ ಆರುನೂರ ಅರವತೈದರಷ್ಟು ಮೊತ್ತವನ್ನು ಖಾತೆಗಳಿಗೆ ಬಿಡುಗಡೆ ಮಾಡಲಾಗಿದೆ.
ಇನ್ನೊಂದೆಡೆ ಮುನ್ನೂರ ಐವತ್ತೊಂದು ಮಂದಿ ರೈತರಿಗೆ ಭೂಮಿಯ ಹೂಳೆತ್ತುವ ಸಲುವಾಗಿ ನಷ್ಟ ಪರಿಹಾರ ರೂಪದಲ್ಲಿ ಮುನ್ನೂರ ಐವತ್ತೊಂದು ಮಂದಿಗೆ ಒಟ್ಟು ರೂ. 20 ಲಕ್ಷದ ತೊಂಬತ್ತೆರಡು ಸಾವಿರದ ಮುನ್ನೂರ ನಲವತ್ತೆರಡರಷ್ಟು  ಮೊತ್ತ ಹಂಚಿಕೆಯಾಗಿದೆ.              -ಶ್ರೀಸುತ
 

Home    About us    Contact