ತಾ.-24-ರಿಂದ-ಸುಂಟಿಕೊಪ್ಪದಲ್ಲಿ-ಫುಟ್ಬಾಲ್-ಹಬ್ಬ

 ಮಡಿಕೇರಿ, ಮೇ 20: ಸುಂಟಿಕೊಪ್ಪದ ಪ್ರಾಥಮಿಕ ಸರ್ಕಾರಿ ಶಾಲಾ ಮೈದಾನದಲ್ಲಿ ತಾ. 24 ರಿಂದ ಜೂನ್ 2 ರವರೆಗೆ ಬ್ಲೂಬಾಯ್ಸ್ ಯುವಕ ಸಂಘದ ವತಿಯಿಂದ ಡಿ. ಶಿವಪ್ಪ ಸ್ಮಾರಕ ರಾಜ್ಯಮಟ್ಟದ ಗೋಲ್ಡ್ ಕಪ್‍ನ 24ನೇ ವರ್ಷದ ಪಂದ್ಯಾವಳಿ ಜರುಗಲಿದ್ದು, ರಾಜ್ಯವ್ಯಾಪಿಯ 22 ತಂಡಗಳು ಪಾಲ್ಗೊಳ್ಳಲಿದೆ.

ಈ ಬಗ್ಗೆ ನಗರದ ಪತ್ರಿಕಾ ಭವನದಲ್ಲಿ ಮಾಹಿತಿ ನೀಡಿದ ಬ್ಲೂಬಾಯ್ಸ್ ಯುವಕ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಕೆ. ಪ್ರಶಾಂತ್, ಕೊಡಗಿನ ಕೊಲ್ಕೋತ್ತಾ ಎಂದೇ ಖ್ಯಾತವಾದ ಸುಂಟಿಕೊಪ್ಪದಲ್ಲಿ  ಫುಟ್ಬಾಲ್ ಆಟಗಾರರನ್ನು ಪೆÇ್ರೀತ್ಸಾಹಿಸುವ ನಿಟ್ಟಿನಿಂದಲೇ 37 ವರ್ಷದ ಹಿಂದೆ ಸುಂಟಿಕೊಪ್ಪದಲ್ಲಿ ಸ್ಥಾಪನೆಯಾದ ಬ್ಲೂಬಾಯ್ಸ್ ಯುವಕ ಸಂಘ ಇದೀಗ ಸಾಕಷ್ಟು ಸಾಧನೆಗಳೊಂದಿಗೆ ಮತ್ತೊಂದು ರಾಜ್ಯಮಟ್ಟದ ಫುಟ್ಬಾಲ್ ಪಂದ್ಯಾವಳಿಗೆ ಸಜ್ಜುಗೊಂಡಿದೆ. ಸುಂಟಿಕೊಪ್ಪದಲ್ಲಿ ಫುಟ್ಬಾಲ್ ಪಂದ್ಯಾಟಕ್ಕೆ 64 ವರ್ಷಗಳ ಸುದೀರ್ಘ ಇತಿಹಾಸವಿದ್ದು ಕೊಡಗಿನಲ್ಲಿ ಇಷ್ಟೊಂದು ಸುದೀರ್ಘ ಇತಿಹಾಸದ ಫುಟ್ಬಾಲ್ ಪಂದ್ಯಾಟ ಬೇರೆ ಯಾವದೂ ಇಲ್ಲ ಎಂಬುದೇ ಸುಂಟಿಕೊಪ್ಪದ ಹೆಗ್ಗಳಿಕೆಯಾಗಿದೆ ಎಂದರು. 
ಸುಂಟಿಕೊಪ್ಪದಲ್ಲಿ ಫುಟ್ಬಾಲ್ ಪಂದ್ಯಾಟಕ್ಕೆ ಪೆÇ್ರೀತ್ಸಾಹ ನೀಡಿದವರಲ್ಲಿ ಬೆಟ್ಟಗೇರಿ ಎಸ್ಟೇಟ್  ಮಾಲೀಕ ದೊಡ್ಡಮನೆ ಶಿವಪ್ಪ ಪ್ರಮುಖ ರಾಗಿದ್ದರು. ಅವರ ಕಾಲಾನಂತರ ಶಿವಪ್ಪ ಅವರ ಪುತ್ರ ವಿನೋದ್ ಶಿವಪ್ಪ ತನ್ನ ತಂದೆ 
(ಮೊದಲ ಪುಟದಿಂದ) ಡಿ.ಶಿವಪ್ಪ ಸ್ಮರಣಾರ್ಥ ಬ್ಲೂಬಾಯ್ಸ್ ಯುವಕ ಸಂಘಕ್ಕೆ ಪ್ರತೀವರ್ಷ ಟ್ರೋಫಿ, ನಗದು ಬಹುಮಾನ ನೀಡುವ ಮೂಲಕ ಫುಟ್ಬಾಲ್ ಪಂದ್ಯಾವಳಿಗೆ ಬೆಂಬಲ ನೀಡುತ್ತಾ ಬಂದಿದ್ದಾರೆ.  ಅಂತೆಯೇ ಸುಂಟಿಕೊಪ್ಪ ವ್ಯಾಪ್ತಿಯ ಅನೇಕ ದಾನಿಗಳು ಫುಟ್ಬಾಲ್ ಪಂದ್ಯಾಟಕ್ಕೆ ಸಹಕಾರ ನೀಡುತ್ತಾ ಕ್ರೀಡಾ ಪಂದ್ಯಾವಳಿಯ ನಿರಂತರತೆಗೆ ಪೆÇ್ರೀತ್ಸಾಹ ನೀಡುತ್ತಿದ್ದಾರೆ ಎಂದು  ಪ್ರಶಾಂತ್ ಸ್ಮರಿಸಿದರು. 
1996 ರಿಂದ ಸುಂಟಿಕೊಪ್ಪದಲ್ಲಿ ಡಿ.ಶಿವಪ್ಪ ಸ್ಮಾರಕ ಫುಟ್ಬಾಲ್ ಪಂದ್ಯಾವಳಿಯಲ್ಲಿ ಈ ವರ್ಷವೂ ರಾಜ್ಯವ್ಯಾಪಿಯ ಹಲವಾರು ತಂಡಗಳು ಪಾಲ್ಗೊಳ್ಳುತ್ತಿವೆ.  ರಾಷ್ಟ್ರಮಟ್ಟದಲ್ಲಿ ಪಾಲ್ಗೊಂಡಿರುವ ಅನೇಕ ಖ್ಯಾತ ಫುಟ್ಬಾಲ್ ತಂಡಗಳೂ, ಅನೇಕ ಖ್ಯಾತನಾಮ ಆಟಗಾರರು ಭಾಗವಹಿಸಲಿದ್ದಾರೆ. ತಾ. 24 ರಂದು ಮಧ್ಯಾಹ್ನ 3 ಗಂಟೆಗೆ ಪಂದ್ಯಾವಳಿಯನ್ನು  ಬೆಂಗಳೂರಿನಲ್ಲಿರುವ ಕಾಫಿ ಉದ್ಯಮಿ ವಿಶಾಲ್ ಶಿವಪ್ಪ ಉದ್ಘಾಟಿಸಲಿದ್ದು,  ಹಾಸನ ಗ್ರಾಹಕರ ವೇದಿಕೆಯ ಅಧ್ಯಕ್ಷ ಎ. ಲೋಕೇಶ್ ಕುಮಾರ್, ಕುಶಾಲನಗರದ ಪೆÇಲೀಸ್ ಉಪ ಅಧೀಕ್ಷಕ ದಿನಕರ ಶೆಟ್ಟಿ, ದಾನಿಗಳಾದ ಡಿ.ವಿನೋದ್ ಶಿವಪ್ಪ  ಸೇರಿದಂತೆ ಹಲವಾರು ಗಣ್ಯರು ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರಥಮ ಪಂದ್ಯಾಟವು ಆತಿಥೇಯ ಬ್ಲೂಬಾಯ್ಸ್  ಯುವಕ ಸಂಘ ಮತ್ತು ಪನ್ಯ ತಂಡಗಳ ನಡುವೆ ಜರುಗಲಿದೆ ಎಂದು ಪ್ರಶಾಂತ್  ತಿಳಿಸಿದರು.  
ಪಂದ್ಯಾವಳಿಯ ಪ್ರಥಮ ವಿಜೇತ ತಂಡಕ್ಕೆ ಡಿ.ವಿನೋದ್ ಶಿವಪ್ಪ ಅವರು ಡಿ.ಶಿವಪ್ಪ ಸ್ಮಾರಣಾರ್ಥವಾಗಿ ರೂ. 30 ಸಾವಿರ ನಗದು, ಟ್ರೋಫಿ ಮತ್ತು ದ್ವಿತೀಯ ಬಹುಮಾನವಾಗಿ ರೂ. 20 ಸಾವಿರ ನಗದು, ಟ್ರೋಫಿ. ಹಾಗೂ ವೈಯಕ್ತಿಕ ಬಹುಮಾನಗಳನ್ನು ನೀಡಲಿದ್ದಾರೆ ಎಂದರು.
ಈ ಬಾರಿ ಪಂದ್ಯಾವಳಿಯಲ್ಲಿ ಬೆಂಗಳೂರಿನ 2, ಮಂಡ್ಯದ 2, ಮೈಸೂರಿನ 4, ಕೇರಳದ ಕ್ಯಾಲಿಕಟ್, ಕೂತುಪರಂಬ, ಕುಂಬಳ, ಉಪ್ಪಳ, ನಂಜನಗೂಡು, ಹಾಸನ, ಕೆಜಿಎಫ್‍ನ ವಾರಿಯರ್ಸ್ ಫುಟ್ಬಾಲ್ ಕ್ಲಬ್, ಕೊಡಗು ಇಲವೆನ್, ಕೊಡಗರಹಳ್ಳಿಯ ನೇತಾಜಿ ಯುವಕ ಸಂಘ, ಗದ್ದೆಹಳ್ಳದ ಓಮಿಟಿ ತಂಡ ಸೇರಿದಂತೆ ಆತಿಥೇಯ ಸುಂಟಿಕೊಪ್ಪದ ಬ್ಲೂಬಾಯ್ಸ್ ಯೂತ್ ಕ್ಲಬ್ ತಂಡವೂ ಸೇರಿದಂತೆ ಸುಮಾರು 22 ತಂಡಗಳು ಪಾಲ್ಗೊಳ್ಳುತ್ತಿದೆ ಎಂದು ಮಾಹಿತಿ ನೀಡಿದ  ಬ್ಲೂಬಾಯ್ಸ್ ಯುವಕ ಸಂಘದ ಗೌರವಾಧ್ಯಕ್ಷ ಟಿ.ವಿ. ಪ್ರಸನ್ನ, ಪ್ರತೀ ನಿತ್ಯ 2 ಪಂದ್ಯಾಟ ನಡೆಯಲಿದ್ದು ಭಾನುವಾರ 3 ಪಂದ್ಯಾಟ ಆಯೋಜಿತವಾಗಿದೆ. ಪ್ರತೀ ನಿತ್ಯ ಮಧ್ಯಾಹ್ನ 3 ಗಂಟೆಯಿಂದ ಪಂದ್ಯ ನಡೆಯಲಿದ್ದು, ಜೂನ್ 1 ರಂದು ಸೆಮಿಫೈನಲ್ ಪಂದ್ಯ ಜರುಗಲಿದೆ ಎಂದು  ತಿಳಿಸಿದರು. 
ಸುದ್ದಿಗೋಷ್ಠಿಯಲ್ಲಿ ಬ್ಲೂಬಾಯ್ಸ್ ಯುವಕ ಸಂಘದ ಅಧ್ಯಕ್ಷ ಎನ್.ಎಸ್. ಆದಿಶೇಷ,  ಖಜಾಂಚಿ ಕೆ.ಕೆ. ವಾಸುದೇವ್. ಕ್ರೀಡಾ ಕಾರ್ಯದರ್ಶಿ ಅನಿಲ್     ಉಪಸ್ಥಿತರಿದ್ದರು.

Home    About us    Contact