ದುಬಾರೆಯಲ್ಲಿ-ಇಂದಿನಿಂದ-ರ್ಯಾಫ್ಟಿಂಗ್

 ಗುಡ್ಡೆಹೊಸೂರು, ಆ. 13: ಕಳೆದ 5 ದಿನಗಳಿಂದ ಕಾವೇರಿ ನದಿಯಲ್ಲಿ ಪ್ರವಾಹ ಹೆಚ್ಚಾದ ಕಾರಣ ಮತ್ತು ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಿದ್ದ ಹಿನ್ನೆಲೆಯಲ್ಲಿ ದುಬಾರೆ ವ್ಯಾಪ್ತಿಯಲ್ಲಿ ರ್ಯಾಫ್ಟಿಂಗನ್ನು ನಿಲ್ಲಿಸಲಾಗಿತ್ತು. ಇದೀಗ ಮತ್ತೆ ನೀರಿನ ಹರಿವು ಕಡಿಮೆಯಾದ ಹಿನ್ನೆಲೆಯಲ್ಲಿ ತಾ. 14ರಿಂದ (ಇಂದಿನಿಂದ) ರ್ಯಾಫ್ಟಿಂಗ್ ಪುನರಾರಂಭಗೊಳ್ಳಲಿದೆ. ಕಳೆದ 7 ದಿನಗಳಿಂದ ಕಾವೇರಿ ನದಿಯಲ್ಲಿ ಪ್ರವಾಹ ಬಂದ ಸಂದÀರ್ಭ ರ್ಯಾಫ್ಟ್ ಮಾಲೀಕರು ಸ್ವಇಚ್ಚೆಯಿಂದ ತಮ್ಮ ಸ್ವಂತ ಖರ್ಚಿನಿಂದ ಹಲವಾರು ಮಂದಿಯನ್ನು ರಕ್ಷಿಸಿದ್ದಾರೆ ಎಂದು ರ್ಯಾಫ್ಟಿಂಗ್ ಸಂಸ್ಥೆಯ ಪ್ರಮುಖರು ತಿಳಿಸಿದ್ದಾರೆ. -ಗಣೇಶ್ ಕುಡೆಕ್ಕಲ್


Home    About us    Contact