-ಸಮಯ-ಕಾಪಾಡದ-ಅಸಮಾಧಾನದಲ್ಲಿ-ಮುಗಿದ-ಸಾಂಸ್ಕøತಿಕ-ಸಂಜೆ...
ಮಡಿಕೇರಿ, ಅ. 9: ನವರಾತ್ರಿ ಉತ್ಸವಕ್ಕೆ ವಿಶೇಷ ಮೆರುಗು ನೀಡುವದರೊಂದಿಗೆ ದಸರಾ ಉತ್ಸವವನ್ನು ಜನೋತ್ಸವವನ್ನಾಗಿ ಆಚರಿಸುವ ನಿಟ್ಟಿನಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಚರಿಸಿ ಕೊಂಡು ಬರಲಾಗುತ್ತಿದೆ. ಬಹಳ ಹಿಂದೆ ವಿಜಯ ದಶಮಿಯಂದು ಮಾತ್ರ ನಗರದ ಹಳೆ ಖಾಸಗಿ ಬಸ್ ನಿಲ್ದಾಣದಲ್ಲಿ ತಾತ್ಕಾಲಿಕ ವೇದಿಕೆ ಯಲ್ಲಿ ಸಾಂಸ್ಕøತಿಕ ಕಾರ್ಯಕ್ರಮ ಹಾಗೂ ಸಂಗೀತ ರಸಮಂಜರಿ ರಂಜಿಸುತ್ತಿತ್ತು. ನಂತರದಲ್ಲಿ ಕಿಷ್ಕಿಂಧೆ, ಜನ ದಟ್ಟಣೆಯ ಹಿನ್ನೆಲೆಯಲ್ಲಿ ವೇದಿಕೆಯನ್ನು ಗಾಂಧಿ ಮೈದಾನಕ್ಕೆ ಸ್ಥಳಾಂತರಿಸಲಾಯಿತು.
ಈ ನಡುವೆ ಒಂಭತ್ತು ದಿನಗಳ ಕಾಲ ಸಾಂಸ್ಕøತಿಕ ಕಾರ್ಯಕ್ರಮ ಗಳನ್ನು ಆಯೋಜನೆ ಮಾಡುವ ಉದ್ದೇಶದೊಂದಿಗೆ ಕಾವೇರಿ ಕಲಾಕ್ಷೇತ್ರದಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬರಲಾಗುತ್ತಿತ್ತು. ಈ ನಾಡಿನ, ಭಾರತೀಯ ಸಂಸ್ಕøತಿಯ ಪರಿಚಯ -ವಿನಿಮಯ ಇಲ್ಲಿ ಆಗುತ್ತಿತ್ತು. ವರ್ಷಗಳುರುಳಿದಂತೆ ಜನಮನ್ನಣೆ ಗಳಿಸುತ್ತಾ ಬಂದ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಬೇಡಿಕೆ ಯೊಂದಿಗೆ ಪೈಪೋಟಿ ಕೂಡ ಕಾಣಬರಲಾರಂಭಿಸಿತು. ತದನಂತರದಲ್ಲಿ 6 ದಿನಗಳ ಕಾಲ ಕಾವೇರಿ ಕಲಾಕ್ಷೇತ್ರ, ಇನ್ನುಳಿದ ಮೂರು ದಿನಗಳ ಕಾಲ ಗಾಂಧಿ ಮೈದಾನದಲ್ಲಿ ಕಾರ್ಯಕ್ರಮ ನಡೆಯುತ್ತಿತ್ತು. ಇದೀಗ 9 ದಿನಗಳ ಕಾಲ ಗಾಂಧಿ ಮೈದಾನದ ವಿಶಾಲ ವೇದಿಕೆಯಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯುತ್ತಿವೆ.
ನಾಡಿನ ಸಂಸ್ಕøತಿಯನ್ನು ಬಿಂಬಿಸುವ ಸಾಂಸ್ಕøತಿಕ ಕಾರ್ಯಕ್ರಮಗಳು ಈ ಹಿಂದಿನಿಂದಲೂ ಸಮಯದ ಮಿತಿಯೊಳಗಡೆ ನಡೆಯುತ್ತಿತ್ತು. ಕಾರ್ಯಕ್ರಮದ ಆರಂಭದಿಂದ ಮುಕ್ತಾಯದವರೆಗೆ ಸಮಯ ಪಾಲನೆ ಆಗುತ್ತಿತ್ತು. ವಿಜಯದಶಮಿಯಂದು ರಾತ್ರಿ 9ರ ತನಕ ಸಾಂಸ್ಕøತಿಕ ಕಾರ್ಯಕ್ರಮ ನಡೆದು ನಂತರ ರಸಮಂಜರಿಗೆ ವೇದಿಕೆ ಬಿಟ್ಟು ಕೊಡಲಾಗುತ್ತಿತ್ತು. ಆದರೆ ಈ ಬಾರಿ ‘ಸಮಯ ಪಾಲನೆ’ ಏನೆಂಬದೆಂಬನ್ನೇ ಮರೆತಂತಿದೆ.
ಕಾರ್ಯಕ್ರಮ ಆರಂಭದ ದಿನದಿಂದ ಹಿಡಿದು ಕೊನೆಯ ದಿನದವರೆಗೆ ಒಂದು ದಿನ ಕೂಡ ನಿಗದಿತ ಸಮಯಕ್ಕೆ ಆರಂಭವಾಗಲೇ ಇಲ್ಲ. ಪ್ರತಿನಿತ್ಯ ಅತಿಥಿಗಳಿಗಾಗಿ ಕಾಯುವ ಪರಿಪಾಠ, ಅತಿಥಿಗಳ ತಡ ಆಗಮನ, ಕಾರ್ಯಕ್ರಮ ವಿಳಂಬ, ಕೊನೆಗೆ ಅವಕಾಶ ಕಳೆದುಕೊಂಡ ಕಲಾವಿದರು, ಕಾದೂ ಕಾದೂ ಕೊನೆ ಘಳಿಗೆಯಲ್ಲಿ ಪ್ರದರ್ಶನ ಮಾಡಿದರೂ ನೋಡಿ ಪ್ರೋತ್ಸಾಹಿಸಲು ಪ್ರೇಕ್ಷಕರಿಲ್ಲದೆ ಖಾಲಿ ಕುರ್ಚಿಗಳು ಮಾತ್ರ...! ಇದರೊಂದಿಗೆ ದುಬಾರಿ ಹಣ ನೀಡಿ ಹೊರಗಿನಿಂದ ಕರೆಸಿಕೊಂಡ ಕಲಾವಿದರಿಗೆ ಹೆಚ್ಚಿನ ಆದ್ಯತೆ, ಒಂದೆರಡು ಹಾಡು, ಎರಡು ಕುಣಿತಕ್ಕೆ ಅವರುಗಳಿಗೆ ಕೇಳಿದಷ್ಟು ಹಣ, ಇಲ್ಲಿನ ಸಂಸ್ಕøತಿಯನ್ನು ಬಿಂಬಿಸುವ ಸ್ಥಳೀಯ ಕಲಾವಿದರಿಗೆ ಮಾತ್ರ 2 ರಿಂದ 3 ಸಾವಿರ ಮಾತ್ರ.
‘ಸಿಡಿ ಹಾಕಿ, ಕರೋಕೆ ಬಳಸಿ ಕೊಂಡು ಪ್ರದರ್ಶನ ನೀಡುವವರಿಗೆ ಮಣೆ ಹಾಕ್ತಾರೆ. ನಾವು ಕಷ್ಟಪಟ್ಟು ಕಲಿತು ಪ್ರದರ್ಶನ ಮಾಡಿದರೆ ಸಮಯಾವಕಾಶನೂ ನೀಡಲ್ಲ, ಸಂಭಾವನೆಯೂ ಕೊಡಲ್ಲ, ನಾವೂ ಕಲಾವಿದರೆ, ನಾವುಗಳು ಮಕ್ಕಳು, ಮರಿಯೊಂದಿಗೆ ದೂರದೂರಿನಿಂದ ಬಂದಿರುತ್ತೇವೆ ಎಂಬ ಜ್ಞಾನ ಕೂಡ ಸಮಿತಿವರಿಗಿಲ್ಲ... ಇದು ಸ್ಥಳೀಯ ಕಲಾವಿದರ ಮನದಾಳದ ನೋವು.
ಈ ಬಾರಿಯ ಕಾರ್ಯಕ್ರಮ ದಲ್ಲಿ ಸಾಂಸ್ಕøತಿಕ ಸಮಿತಿ ಅಧ್ಯಕ್ಷರೂ ‘ಡಮ್ಮಿ’ಯಂತೆ ಕಂಡು ಬಂದರು. ಅತಿಯಾದ ಮೈಕ್ ಪ್ರೇಮಕ್ಕೆ ಪ್ರತಿ ಸಮಾರಂಭದಲ್ಲೂ ಸಾಂಸ್ಕøತಿಕ ಸಮಿತಿ ಅಧ್ಯಕ್ಷರು ವೇದಿಕೆಯಲ್ಲಿ ಆಸೀನರಾಗಿ ನಂತರ ಕಾಣಿಸಿಕೊಳ್ಳದ್ದ ರಿಂದ ಹಿಂದಿನ ಸಾಲಿನ ಅಧ್ಯಕ್ಷರೇ ನಿರೂಪಣೆ ಮಾಡುವ ಅನಿವಾರ್ಯತೆ ಕಂಡುಬಂತು.
ದಸರಾದಂದು ಸಭಾ ಕಾರ್ಯಕ್ರಮ ಆರಂಭವಾದದ್ದು ರಾತ್ರಿ 8 ಗಂಟೆ ವೇಳೆಗೆ ಮೊದಲ ಸಾಂಸ್ಕøತಿಕ ಕಾರ್ಯಕ್ರಮ ಶುರುವಾದದ್ದು 8.30ರ ನಂತರ. ಸಮಯ ಪಾಲನೆಗೆ ಬೆಲೆ ನೀಡದಿದ್ದಲ್ಲಿ ಕಲಾವಿದರಾಗಿ ಬರುವ ಪುಟಾಣಿಗಳ ಸಹಿತ ಎಲ್ಲರಿಗೂ ಹಿಂಸೆ, ಕಲಾಭಿಮಾನಿ ಗಳಿಗೂ ನಿರಾಶೆ. ಮುಂದಿನ ಬಾರಿ ಇದನ್ನು ಸರಿ ಮಾಡಿಕೊಳ್ಳಬೇಕಿದೆ. 
 

Home    About us    Contact