-ಅಕ್ರಮ-ಬಿಪಿಎಲ್-ಪತ್ತೆಗೆ-ಆರ್‍ಟಿಓ-ನೆರವು
ಆಹಾರ ಇಲಾಖೆಯಿಂದ ಕ್ರಮ
ಬೆಂಗಳೂರು, ಅ. 9 : ಅಕ್ರಮವಾಗಿ ಬಿಪಿಎಲ್ ಕಾರ್ಡ್ ದುರುಪಯೋಗ ಪಡಿಸಿಕೊಂಡು, ಪಡಿತರ ಧಾನ್ಯ ಪಡೆಯುತ್ತಿರುವವರ ವಿರುದ್ಧ ಕ್ರಮಕ್ಕೆ ಮುಂದಾಗಿರುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಇದೀಗ ಅಕ್ರಮ ಬಿಪಿಎಲ್ ಕಾರ್ಡ್ ದಾರರ ಪತ್ತೆಗೆ ಪ್ರಾದೇಶಿಕ ಸಾರಿಗೆ ಕಚೇರಿಯ ನೆರವು ಪಡೆಯಲು ಮುಂದಾಗಿದೆ ಎನ್ನಲಾಗಿದೆ.
ಪ್ರಾದೇಶಿಕ ಸಾರಿಗೆ ಕಚೇರಿಯಿಂದ ಚತುಷ್ಟಕ್ರ ವಾಹನ ಮಾಲೀಕರ ಪಟ್ಟಿ ಮಾಡಿ ಅಕ್ರಮ ಬಿಪಿಎಲ್ ಕಾರ್ಡ್ ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಉದ್ದೇಶಿಸಿದೆ.
ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ ಆಧಾರ್ ಲಿಂಕ್ ಕಡ್ಡಾಯವಿರುವದರಿಂದ ಆ ವ್ಯಕ್ತಿಯ ಎಲ್ಲ ಮಾಹಿತಿ ಪಡೆಯುವದಕ್ಕೆ ಸಾಧ್ಯವಾಗುತ್ತದೆ. ಖಾಸಗಿ ಚತುಷ್ಟಕ್ರ ವಾಹನ ಮಾಲೀಕರ ಮಾಹಿತಿಯನ್ನು ಆರ್‍ಟಿಒ ದಿಂದ ಪಡೆದುಕೊಂಡರೆ ಅದರಿಂದ ಅವರು ಬಿಪಿಎಲ್ ಅಥವಾ ಎಪಿಎಲ್ ಕಾರ್ಡುದಾರರೇ ಎಂಬದನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಗುತ್ತದೆ.

Home    About us    Contact