ಮಾಂದಲ್‍ಪಟ್ಟಿಗೆ-ಮೇಲುಸ್ತುವಾರಿ-ಸಮಿತಿ

 ಮಡಿಕೇರಿ, ನ. 7: ಮಾಂದಲ್‍ಪಟ್ಟಿಗೆ ಪ್ರವಾಸಿಗರನ್ನು ಕರೆದೊಯ್ಯುವ ಜೀಪುಗಳ ಹಾಗೂ ಮಾಂದಲ್‍ಪಟ್ಟಿ ನಿರ್ವಹಣೆಗೆ ಮೇಲುಸ್ತುವಾರಿ ಸಮಿತಿ ರಚಿಸಲಾಗಿದೆ.

ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖಾಧಿಕಾರಿಗಳು ಜೀಪು ಚಾಲಕರು, ಗ್ರಾಮಸ್ಥರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಪ್ರವಾಸಿಗರಿಗೆ ಯಾವದೇ ವಿಧದಲ್ಲೂ ಅನಾನುಕೂಲ ಉಂಟಾಗದಂತೆ ಜೀಪು ಚಾಲಕರು ಗಮನಹರಿಸಬೇಕು. ಮಾಂದಲ್‍ಪಟ್ಟಿ ನಿರ್ವಹಣೆ ಮತ್ತು ಮೇಲುಸ್ತುವಾರಿ ಮಾಡಲು ಪ್ರವಾಸೋದ್ಯಮ ಇಲಾಖೆಯು ಗ್ರಾ.ಪಂ.ನಿಂದ ಇಬ್ಬರು ಸದಸ್ಯರು, ವಾಹನ ಮಾಲೀಕರ ಸಂಘದಿಂದ ಇಬ್ಬರು ಸದಸ್ಯರು ಹಾಗೂ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಲು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಸೂಚನೆ ನೀಡಿದರು. ಜೀಪ್‍ಗಳ ದರ ವಿವರ ಮಾಂದಲ್‍ಪಟ್ಟಿಗೆ ಪ್ರವಾಸಿಗರನ್ನು ಕರೆದೊಯ್ಯುವ ಎಂಟು ಆಸನ ಸಾಮಥ್ರ್ಯ ಮೀರದ ರಹದಾರಿ ಹೊಂದಿರುವ ಸಾರಿಗೆ ಜೀಪ್ (ಹಳದಿ ಫಲಕ) ವಾಹನಗಳಿಗೆ ವಾಪಾಸ್ ಪ್ರಯಾಣ ದರ ಒಳಗೊಂಡಂತೆ ದರ ನಿಗದಿಪಡಿಸಲಾಗಿದ್ದು, ದರದ ವಿವರ ಇಂತಿದೆ.ಮಡಿಕೇರಿ ಬಸ್ ನಿಲ್ದಾಣದಿಂದ ಮಾಂದಲ್‍ಪಟ್ಟಿಯ ಪ್ರವೇಶ ದ್ವಾರದವರೆಗೆವಯಾ ರಾಜಾಸೀಟು-ಕೆ ನಿಡುಗಣೆ ರೂ. 800, ಮಡಿಕೇರಿ ಬಸ್ ನಿಲ್ದಾಣದಿಂದ ಮಾಂದಲ್ ಪಟ್ಟಿಯ ಪ್ರವೇಶ ದ್ವಾರದವರೆಗೆ ವಯಾ ರಾಜಾಸೀಟು-ಎಪ್.ಎಂ.ಕೆ. ಎಂ.ಸಿ. ಕಾಲೇಜು-ಕೋಳಿಗೂಡು-ಕಾಲೂರು ರೂ. 800, ಮಾಂದಲ್ ಪಟ್ಟಿಯ 
(ಮೊದಲ ಪುಟದಿಂದ)  ಪ್ರವೇಶದ್ವಾರದಿಂದ ಮಾಂದಲ್ ಪಟ್ಟಿಯ ಪ್ರೇಕ್ಷಣಿಯ ಸ್ಥಳದವರೆಗೆ ರೂ. 300., ಮಡಿಕೇರಿ ಬಸ್ ನಿಲ್ದಾಣದಿಂದ ಅಬ್ಬಿಫಾಲ್ಸ್‍ವರೆಗೆ ವಯಾ ರಾಜಾಸೀಟು-ಕೆ ನಿಡುಗಣೆ ರೂ. 400. ಮಡಿಕೇರಿ ಬಸ್ ನಿಲ್ದಾಣದಿಂದ ಮಾಂದಲ್‍ಪಟ್ಟಿಯ ಪ್ರವೇಶದ್ವಾರದವರೆಗೆ ವಯಾ ರಾಜಾಸೀಟು-ಕೆ.ನಿಡುಗಣೆ-ಅಬ್ಬಿಫಾಲ್ಸ್ ರೂ. 1000. ಮಡಿಕೇರಿ ಬಸ್ ನಿಲ್ದಾಣದಿಂದ ಮಾಂದಲ್‍ಪಟ್ಟಿಯ ಪ್ರೇಕ್ಷಣಿಯ ಸ್ಥಳದವರೆಗೆ ವಯಾ ರಾಜಾಸೀಟು-ಕೆ.ನಿಡುಗಣೆ ರೂ. 1100, ಮಡಿಕೇರಿ ಬಸ್ ನಿಲ್ದಾಣದಿಂದ ಮಾಂದಲ್‍ಪಟ್ಟಿ ಪ್ರೇಕ್ಷಣೀಯ ಸ್ಥಳದವರೆಗೆ ವಯಾ ರಾಜಾಸೀಟು-ಕೆ.ನಿಡುಗಣೆ-ಅಬ್ಬಿಫಾಲ್ಸ್ ರೂ. 1300.
ಒಂದು ವೇಳೆ ಕಾನೂನು ಬಾಹಿರವಾಗಿ ವಾಹನಗಳ ಚಾಲಕರು, ಮಾಲೀಕರು ದರ ವಸೂಲಿ ಮಾಡುವದು ಅಥವಾ ದುರ್ನಡತೆ ಕಂಡುಬಂದಲ್ಲಿ ಮೋಟಾರು ವಾಹನ ಕಾಯ್ದೆಯಡಿ ನೋಂದಣಿ 
ಪುಸ್ತಕ ರದ್ಧತಿ ಹಾಗೂ ಚಾಲಕರ ಲೈಸನ್ಸ್ ಅಮಾನತ್ತುಪಡಿಸಲು 
ಸೂಕ್ತ ಕಾನೂನು ಕ್ರಮವನ್ನು ಜರುಗಿಸಲು ಪ್ರಾಧಿಕಾರದ ಕಾರ್ಯದರ್ಶಿಯವರಿಗೆ ನಿರ್ದೇಶನ ನೀಡಲಾಗಿದೆ. ಈ ದರವು 
ಮುಂದಿನ ಆದೇಶದವರೆಗೆ ಜಾರಿಯಲ್ಲಿರುತ್ತದೆ.
ಸಭೆಯಲ್ಲಿ ಲೋಕೋಪ ಯೋಗಿ ಇಲಾಖೆಯ ಇಇ ಇಬ್ರಾಹಿಂ, ಪ್ರಾದೇಶಿಕ ಸಾರಿಗೆ ಅಧಿಕಾರಿ ಮಂಜುನಾಥ, ಉಪ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್‍ಕುಮಾರ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ರಾಘವೇಂದ್ರ,  ಅರಣ್ಯ ಇಲಾಖೆ ಅಧಿಕಾರಿಗಳು ಇತರರು ಇದ್ದರು.

Home    About us    Contact