ಮಡಿಕೇರಿ, ಜೂ. 8: 2016-17ನೇ ಸಾಲಿನ ಎಸ್.ಎಸ್.ಎಲ್.ಸಿ. ಕೋರ್ಸ್‍ಗಳ ಪ್ರಥಮ ಡಿಪ್ಲೋಮಾ ಪ್ರವೇಶಕ್ಕೆ ಸಂಬಂಧಿಸಿದಂತೆ ಪ್ರವೇಶ ಅರ್ಜಿಗಳನ್ನು ನೀಡುವ ಹಾಗೂ ಸ್ವೀಕರಿಸುವ ಸಂಬಂಧ ಮೇ, 30 ಕೊನೆಯ ದಿನವೆಂದು ನಿಗದಿಪಡಿಸಲಾಗಿತ್ತು, ಪ್ರವೇಶ ಪ್ರಕ್ರಿಯೆಗಳ ವಿವಿಧ ಹಂತಗಳ ತಾತ್ಕಾಲಿಕ ವೇಳಾಪಟ್ಟಿಯನ್ನು ಸಹ ಪ್ರಕಟಿಸಲಾಗಿತ್ತು. ಆದರೆ ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಸಾರ್ವಜನಿಕರ ಹಿತದೃಷ್ಟಿಯ ಮೇರೆಗೆ 2016-17ನೇ ಸಾಲಿನ ಪ್ರಥಮ ಡಿಪ್ಲೋಮಾ ಪ್ರವೇಶಕ್ಕೆ “ದಾಖಲೆ ಪರಿಶೀಲನೆ ಹಾಗೂ ಆನ್‍ಲೈನ್ ಅರ್ಜಿ ಸಲ್ಲಿಕೆ/ಆಪ್ಷನ್ ಎಂಟ್ರಿ ಸಹಾಯ ಕೇಂದ್ರ”ಗಳ ಮೂಲಕ ಅರ್ಹ ಅಭ್ಯರ್ಥಿಗಳು ವೆಬ್‍ಸೈಟ್‍ನಿಂದ ಅರ್ಜಿ ಪಡೆಯಲು, ಭರ್ತಿ ಮಾಡಿದ ಅರ್ಜಿಯನ್ನು ಆನ್‍ಲೈನ್‍ನಲ್ಲಿ ಸಲ್ಲಿಸಲು, ಆನ್‍ಲೈನ್‍ನಲ್ಲಿ ಆಪ್ಷನ್ ಎಂಟ್ರಿ ದಾಖಲಿಸಲು ಹಾಗೂ ಮೂಲ ದಾಖಲೆಗಳನ್ನು ಪರಿಶೀಲಿಸಲು ತಾ. 10ರ ಸಂಜೆ 5 ಗಂಟೆವರೆಗೆ ವಿಸ್ತರಿಸಲಾಗಿದೆ ಎಂದು ಕುಶಾಲನಗರದ ಸರ್ಕಾರಿ ಪಾಲಿಟೆಕ್ನಿಕ್‍ನ ಪ್ರಾಂಶುಪಾಲರು ತಿಳಿಸಿದ್ದಾರೆ.