ಮಡಿಕೇರಿ, ಜೂ. 19: ಕಡಗದಾಳು ಗ್ರಾಮ ಪಂಚಾಯಿತಿಯ 2015-16ನೇ ಸಾಲಿನ 2ನೇ ಹಂತದ ಸಾಮಾಜಿಕ ಲೆಕ್ಕ ಪರಿಶೋಧನೆ ತಾ. 20 ರಂದು (ಇಂದು) ಪೂರ್ವಾಹ್ನ 10.30 ಗಂಟೆಗೆ ನೋಡೆಲ್ ಅಧಿಕಾರಿಯವರ ಅಧ್ಯಕ್ಷತೆಯಲ್ಲಿ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರ ಸಮ್ಮುಖದಲ್ಲಿ ಪಂಚಾಯಿತಿ ಆವರಣದಲ್ಲಿ ನಡೆಯಲಿದೆ.