ವೀರಾಜಪೇಟೆ, ಜು. 1: ಕೊಡಗು ಜಿಲ್ಲಾ ನೂತನ ಉಸ್ತುವಾರಿ ಸಚಿವರಾಗಿ ನೇಮP Àಗೊಂಡು ಪ್ರಥಮ ಬಾರಿಗೆ ಜಿಲ್ಲೆಗೆ ಆಗಮಿಸಿದ ಸಚಿವರಿಗೆ ಆರಂಭದಲ್ಲೇ ಮಾನವನ ಮೇಲೆ ಆನೆ ಧಾಳಿಯ ಸ್ವಾಗತ ಸಿಕ್ಕಿದಂತಾಗಿದೆ ಎಂದು ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಹೇಳಿದ್ದಾರೆ.

ಸಚಿವರು ಜಿಲ್ಲೆಗೆ ಭೇಟಿ ನೀಡುವ ಮೊದಲೇ ಪಾಲಂಗಾಲದಲ್ಲಿ ಬೆಳೆಗಾರರ ಮೇಲೆ ಆನೆ ಧಾಳಿ ಮಾಡಿದ್ದು, ಇದರಿಂದಲಾದರೂ ಸಚಿವರುಗಳಿಗೆ ಜಿಲ್ಲೆಯಲ್ಲಿನ ಕಾಡಾನೆ ಹಾವಳಿ ಸಮಸ್ಯೆ ಬಗ್ಗೆ ಮನವರಿಕೆಯಾಗಿರಬಹುದೇನೋ ಎಂದು ಅಭಿಪ್ರಾಯಿಸಿ ದ್ದಾರೆ. ಕೊಡಗು ಪುಟ್ಟ ಜಿಲ್ಲೆ. ಇಬ್ಬರೇ ಶಾಸP Àರುಗಳು ಇರುವ ಕಾರಣಕ್ಕಾಗಿ ಉಸ್ತುವಾರಿ ಗಳಾಗಿ ನೇಮಕ ವಾಗುವವರಿಗೆ ಸೇವೆ ಸಲ್ಲಿಸಲು ಇಷ್ಟವಿಲ್ಲವೇ ಎಂದು ಪ್ರಶ್ನಿಸಿರುವ ಅವರು, ಕಾಡಾನೆ ಹಾವಳಿ ಬಗ್ಗೆ ಸರಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡುವ ಸಂಬಂಧ ನಾಲ್ಕು ದಿನಗಳಿಂದ ಪ್ರಯತ್ನಿಸುತ್ತಿದ್ದೇವೆ. ಮುಖ್ಯಮಂತ್ರಿಗಳ ಆಪ್ತ ಸಹಾಯಕರು ದಿನಾಂಕ ನಿಗದಿ ಮಾಡಿಕೊಡುವದಾಗಿ ಹೇಳಿದ್ದು, ಇದುವರೆಗೆ ದಿನಾಂಕ ನಿಗದಿ ಮಾಡಿಕೊಟ್ಟಿಲ್ಲ. ಇದೇ ರೀತಿಯ ನಿರ್ಲಕ್ಷ್ಯ ಮುಂದುವರಿದರೆ ತಾ. 13ರಂದು ಉಪವಾಸ ಸತ್ಯಾಗ್ರಹ ಮಾಡುವದಾಗಿ ಎಚ್ಚರಿಸಿದ್ದಾರೆ. ಕಾಡಾನೆ ಹಾವಳಿಯಿಂದ 20 ಮಂದಿ ಸಾವನ್ನಪ್ಪಿ ಸಾಕಷ್ಟು ನಷ್ಟಗಳಾಗಿವೆ. ಇದೇ ರೀತಿಯ ತೊಂದರೆ ಮುಖ್ಯಮಂತ್ರಿಗಳ ವರುಣಾ ಕ್ಷೇತ್ರ, ಅರಣ್ಯ ಸಚಿವರ ಬಂಟ್ವಾಳ ಕ್ಷೇತ್ರ ಉಡುಪಿಯಲ್ಲಿ ಆಗಿದ್ದರೆ ಸುಮ್ಮನಿರುತ್ತಿದ್ದರೇ ಎಂದು ಪ್ರಶ್ನಿಸಿರುವ ಅವರು, ಮಂಡ್ಯ ಜಿಲ್ಲೆಯ ಕಬ್ಬಿನ ಗದ್ದೆಗಳಿಗೆ ಈ ರೀತಿಯ ಹಾನಿಯಾಗಿದಿದ್ದರೆ ವಿಧಾನ ಸೌಧದೆದುರು ಪ್ರತಿಭಟಿಸುತ್ತಿದ್ದರು. ಕೊಡಗಿನ ಜನರು ಶಾಂತಿಪ್ರಿಯರೆಂದು ಅವರ ತಾಳ್ಮೆಯನ್ನು ಕೆದಕುವದು ಸರಿಯಲ್ಲವೆಂದು ಹೇಳಿದ್ದಾರೆ. ಈ ಬಾರಿಯಾದರೂ ಉಸ್ತುವಾರಿ ಸಚಿವರನ್ನು ಎರಡು ವರ್ಷದವರೆಗೆ ಮುಂದುವರೆಸುವಂತೆ ಮನವಿ ಮಾಡಿದ್ದಾರೆ.