ಮಡಿಕೇರಿ, ಸೆ. 4: ಕೊಡಗಿನ ಸಾಂಪ್ರದಾಯಿಕ ಹಬ್ಬಗಳಲ್ಲೊಂದಾದ ಕೈಲ್ ಮುಹೂರ್ತ ಹಬ್ಬವನ್ನು ಜಿಲ್ಲೆಯಾದ್ಯಂತ ಜನತೆ ಸಂಭ್ರಮದಿಂದ ಆಚರಿಸಿದರು. ಸಾಂಪ್ರದಾಯಿಕ ಪೂಜೆಯ ಬಳಿಕ ಹಬ್ಬದ ವಿಶೇಷ ಅಡುಗೆ ಮಾಡಿ ಸಹಭೋಜನ ದೊಂದಿಗೆ ಸಂಭ್ರಮಿಸಿದರು.ಕೃಷಿ ಚಟುವಟಿಕೆಯ ಬಳಿಕ ಆಚರಿಸಲ್ಪಡುವ ಹಬ್ಬ ಕೈಲ್ ಮುಹೂರ್ತವಾಗಿದ್ದು, ಕೃಷಿ ಪರಿಕರಗಳು, ಜಾನುವಾರುಗಳಿಗೆ ಪೂಜೆ ಸಲ್ಲಿಸಿ ಹಬ್ಬದ ವಿಶೇಷ ತಿನಿಸುಗಳಾದ ಹಂದಿಮಾಂಸ, ಕಡುಬು ಇನ್ನಿತರ ಖಾದ್ಯಗಳನ್ನು ತಯಾರಿಸಿ ಸವಿದು ಸಂಭ್ರಮಿಸಿದರು. ಗ್ರಾಮಗಳಲ್ಲಿ ಸಾಂಪ್ರದಾಯಿಕ ತೆಂಗಿನಕಾಯಿಗೆ ಕಲ್ಲು ಹೊಡೆಯುವದು, ಗುಂಡು ಹೊಡೆಯುವ ಸ್ಪರ್ಧೆಗಳನ್ನು ಆಯೋಜಿಸಿ ಮನರಂಜನೆ ಪಡೆದರು.