ಸಂಪಾಜೆ, ಸೆ. 25: ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸಂಘದ ಮುಖ್ಯ ಕಚೇರಿಯ ಸಹಕಾರ ಸದನದಲ್ಲಿ ಸಂಘದ ಅಧ್ಯಕ್ಷ ಬಾಲಚಂದ್ರ ಕಳಗಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.ಈ ಬಾರಿ ಸಂಘದ ಅತ್ಯುತ್ತಮ ಆಡಳಿತ ಮತ್ತು ಕಾರ್ಯ ನಿರ್ವಹಣೆಗಾಗಿ ಕೊಡಗು ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕಿನಿಂದ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ಲಭಿಸಿರುತ್ತದೆ. ಸಂಘದಲ್ಲಿ 3733 ಜನ ಸದಸ್ಯರಿದ್ದು ಪಾಲು ಬಂಡವಾಳ ರೂ. 247.61 ಲಕ್ಷಗಳು, ಈ ಪೈಕಿ ಸರಕಾರದ ಪಾಲು ಬಂಡವಾಳ ರೂ. 4.46 ಲಕ್ಷಗಳಿರುತ್ತದೆ. ಸದಸ್ಯರು ಹಾಗೂ ಸಾರ್ವಜನಿಕರಿಂದ ಸಂಗ್ರಹವಾದ ಠೇವಣಿ ಮೊತ್ತ ರೂ. 1624.27 ಲಕ್ಷ ಇದ್ದು, ಸಂಘ 2015-16 ನೇ ಸಾಲಿನಲ್ಲಿ ರೂ. 176.56 ಕೋಟಿಗಳಿಗೂ ಮೀರಿ ವ್ಯವಹಾರ ಮಾಡಿದ್ದು. ರೂ. 12,16,471 ಲಾಭದಲ್ಲಿದೆ. ಸಂಘದ ಆಡಿಟ್ ವರ್ಗೀಕರಣ “ಎ” ತರಗತಿಯಲ್ಲಿದ್ದು, ಸದಸ್ಯರಿಗೆ ಶೇ. 3 ರ ಡಿವಿಡೆಂಟ್ ನೀಡಲಿದೆ ಎಂದರು.
ಸಂಘದ ವ್ಯಾಪ್ತಿಯ ಶಾಲೆಗಳ ವಿದ್ಯಾರ್ಥಿಗಳಿಗೆÀ ಸಹಕಾರ ಸಪ್ತಾಹ ದಿನದಂದು ಪ್ರತಿಭಾ ಪುರಸ್ಕಾರ, ಸಂಪಾಜೆ ಸಹಕಾರ ಸದನ ದುರಸ್ತಿ ಮಾಡುವ ಯೋಜನೆ, ಉಚಿತ ಆರೋಗ್ಯ ಶಿಬಿರವನ್ನು ಈ ಸಾಲಿನಲ್ಲಿ ನಡೆಸಲಾಗುವದು. ಸರಕಾರದ ಯೋಜನೆಗಳಾದ ಯಶಸ್ವಿನಿ ಆರೋಗ್ಯ ವಿಮೆ, ಕೆ.ಸಿ.ಸಿ. ಸಾಲದ ಅಪಘಾತ ವಿಮೆ ಮತ್ತು ಸಂಘದಲ್ಲಿ ಸದಸ್ಯರ ಮರಣ ನಿಧಿ ಸೌಲಭ್ಯದ ವಿವರಗಳನ್ನು ಅಧ್ಯಕ್ಷರು ತಿಳಿಸಿದರು.
ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಪಾಲ್ಗೊಂಡಿದ್ದರು. ಸಂಘದ ಉಪಾಧ್ಯಕ್ಷ ಹೊನ್ನಪ್ಪ ಅಮೆಚೂರು ವಂದಿಸಿದರು. ಆಡಳಿತ ಮಂಡಳಿ ನಿರ್ದೇಶಕರುಗಳಾದ ಅನಂತ ಎನ್.ಸಿ, ಮೋನಪ್ಪ ಮಾಸ್ತರ್, ತೀರ್ಥಪ್ರಸಾದ್ ಕೋಲ್ಚಾರ್, ದಯಾನಂದ ಪನೆಡ್ಕ, ಆದಂಕುಂಞÂ ಸಂಟ್ಯಾರ್, ರೇಣುಕಾ ಕುಂದಲ್ಪಾಡಿ, ಮನೋರಮಾ ಬಿ.ಎಸ್., ಪಕೀರ ಹರಿಜನ,