ಆಲೂರು-ಸಿದ್ದಾಪುರ, ಅ. 1: ಶನಿವಾರಸಂತೆ ಭಾರತಿ ಪ್ರಥಮ ದರ್ಜೆ ಕಾಲೇಜಿನ ಪೋಷಕರ ಮತ್ತು ಶಿಕ್ಷಕರ ಸಂಘದ ಸಭೆ ಕಾಲೇಜಿನ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಹಾಗೂ ಕಾಲೇಜಿನ ಪ್ರಾಂಶುಪಾಲ ಎಸ್.ಎಂ. ಉಮಾಶಂಕರ್ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಕಾಲೇಜಿನ ಅಭಿವೃದ್ಧಿ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ, ವಿದ್ಯಾರ್ಥಿ ಗಳಲ್ಲಿರಬೇಕಾದ ಶಿಸ್ತು, ಬದ್ಧತೆ, ಕಾಲೇಜಿನಲ್ಲಿ ವಿದ್ಯಾರ್ಥಿಗಳ ನಡತೆ ಮತ್ತು ವರ್ತನೆ, ವಿದ್ಯಾಸಂಸ್ಥೆಯಲ್ಲಿರುವ ಸೇವೆ-ಸೌಲಭ್ಯಗಳು, ನ್ಯೂನತೆಗಳು, ವಿದ್ಯಾಸಂಸ್ಥೆಯಲ್ಲಿನ ಲೋಪ-ದೋಷಗಳು ಸೇರಿದಂತೆ ವಿದ್ಯಾ ಸಂಸ್ಥೆಯ ಸರ್ವೋತೋಮುಖ ಬೆಳವಣಿಗಳ ಬಗ್ಗೆ ಪೋಷಕ ಸದಸ್ಯರು ಹಾಗೂ ಶಿಕ್ಷಕ ಸದಸ್ಯರು ಸಭೆಯಲ್ಲಿ ಸಮಗ್ರವಾಗಿ ಚರ್ಚಿಸಿದರು. ಕಾಲೇಜು ಪ್ರಾಂಶುಪಾಲ ಎಸ್.ಎಂ. ಉಮಾ ಶಂಕರ್ ಕಾಲೇಜಿನ ಸರ್ವೋತ್ತೋ ಮುಖ ಬೆಳವಣಿಗೆಗೆ ವಿದ್ಯಾರ್ಥಿ-ಪೋಷಕರ ಸಹಕಾರ ಮುಖ್ಯವಾಗಿರುತ್ತದೆ. ವಿದ್ಯಾರ್ಥಿಗಳು ಕಾಲೇಜಿನಲ್ಲಿ ಯಾವ ರೀತಿ ವರ್ತಿಸುತ್ತಾರೆ. ಶೈಕ್ಷಣಿಕ ಪ್ರಗತಿಯ ಮಟ್ಟ. ವಿದ್ಯಾರ್ಥಿಗಳಿಗೆ ಕಾಲೇಜಿನಿಂದ ಯಾವ ರೀತಿಯಲ್ಲಿ ಸೇವೆ ಸೌಲಭ್ಯಗಳನ್ನು ಪಡೆದು ಕೊಳ್ಳುತ್ತಿದ್ದಾರೆ.

ಅದೇ ರೀತಿಯಲ್ಲಿ ವಿದ್ಯಾರ್ಥಿಗಳು ಪೋಷಕರೊಂದಿಗೆ ಯಾವ ರೀತಿ ನಡೆದುಕೊಳ್ಳುತ್ತಾರೆ. ಇನ್ನೂ ಮುಂತಾದ ವಿದ್ಯಾರ್ಥಿ-ಪೋಷಕ ಮತ್ತು ಶಿಕ್ಷಕರ ಸಂಬಂಧಗಳ ಕುರಿತಾಗಿ ಚಿಂತನೆ ಮಾಡುವ ಉದ್ದೇಶದಿಂದ ಕಾಲೇಜಿನಲ್ಲಿ ಪೋಷಕ ಮತ್ತು ಶಿಕ್ಷಕರ ಸಂಘವನ್ನು ತೆರೆಯಲಾಗಿದೆ ಎಂದರು.

ಸಂಘದ ಕಾರ್ಯದರ್ಶಿ, ಉಪನ್ಯಾಸಕ ಚಂದ್ರಕಾಂತ್ ಮಾತನಾಡಿ, ವಿದ್ಯಾಸಂಸ್ಥೆಯೊಂದರ ಅಭಿವೃದ್ಧಿ ಪೋಷಕರ ಸಲಹೆ ಮತ್ತು ಸಹಕಾರದಲ್ಲಿ ಅಡಗಿದೆ.

ಈ ನಿಟ್ಟಿನಲ್ಲಿ ಪೋಷಕರು ತಪ್ಪದೆ ಸಂಘದ ವತಿಯಿಂದ ನಡೆಯುವ ಸಭೆಗೆ ಹಾಜರಾಗಿ ಶಿಕ್ಷಕರಿಗೆ ಸಲಹೆ-ಸೂಚನೆಯನ್ನು ನೀಡಬೇಕೆಂದರು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಪೋಷಕ ರಾಜಪ್ಪ, ಪೋಷಕ ಸದಸ್ಯರಾದ ಶಿವಪ್ಪ, ಮಂಜುಳ, ಸುರೇಖ ಉಪನ್ಯಾಸಕರಾದ ಸುರೇಂದ್ರ, ಹರೀಶ್, ಶೋಭ, ಶ್ರುತಿ, ನಯನ ಹಾಗೂ ಪೋಷಕರು ಹಾಜರಿದ್ದರು.