ಮಡಿಕೇರಿ, ಆ. 9: ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಅವರು ವೀರಾಜಪೇಟೆ ತಾಲೂಕಿನ ದೇವಣಗೇರಿಯ ಬಿ.ಸಿ.ಪ್ರೌಢ ಶಾಲೆಗೆ ಭೇಟಿ ನೀಡಿ, ವಿದ್ಯಾರ್ಥಿ ಸಂಘದ ಉದ್ಘಾಟನೆ ಮಾಡಿದರು. ನಂತರ ಮಾತನಾಡಿದ ಅವರು ಈ ಪ್ರೌಢ ಶಾಲೆಯು ಹಿಂದಿ ನಿಂದಲೂ ಉತ್ತಮ ಶಿಕ್ಷಣವನ್ನು ನೀಡುತ್ತಾ ಬಂದಿರುವ ಶಿಕ್ಷಣ ಸಂಸ್ಥೆಯಾಗಿದೆ. ಈ ಸಂಸ್ಥೆಯಲ್ಲಿ ಹಲವಾರು ವಿದ್ಯಾರ್ಥಿಗಳು ಓದಿ, ತಮ್ಮ ಜೀವನವನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಂಡಿದ್ದಾರೆ. ತಾನೂ ಕೂಡ ಈ ಶಾಲೆಯ ಹಳೆಯ ವಿದ್ಯಾರ್ಥಿ. ಈ ಶಾಲೆಯು ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿರುವದರಿಂದಲೇ ಶೇ. 100 ರಷ್ಟು ಫಲಿತಾಂಶ ಬರುತ್ತಿದೆ. ಈ ಶ್ರಮದ ಹಿಂದೆ ಸಾರ್ವಜನಿಕರ ಪೆÇ್ರೀತ್ಸಾಹ, ಆಡಳಿತ ಮಂಡಳಿಯ ಉತ್ತಮ ಕಾರ್ಯ ಚಟುವಟಿಕೆ, ಶಿಕ್ಷಕರ ಹಾಗೂ ನೌಕರರ ಪರಿಶ್ರಮ, ಹಾಗೂ ಮಕ್ಕಳ ಉತ್ತಮ ಕಲಿಕಾ ಸಾಮಥ್ರ್ಯ ಅಡಗಿದೆ. ಈ ಹಿಂದೆ ಇದೇ ಶಾಲೆಯಲ್ಲಿ ಓದುತ್ತಿದ್ದಾಗ ವಿದ್ಯಾರ್ಥಿ ಸಂಘದಲ್ಲಿ ಆರೋಗ್ಯ ಮಂತ್ರಿಯಾಗಿ ಸಂಘದಲ್ಲಿದ್ದೆ ಎಂಬದನ್ನು ನೆನಪಿಸಿಕೊಂಡರು.

ಮಕ್ಕಳು ತಮ್ಮ ಪ್ರತಿಭೆಯಿಂದ ಹಲವು ಕ್ಷೇತ್ರದಲ್ಲಿ ಸಾಧನೆ ಮಾಡಿ ದೇಶದ ಉತ್ತಮ ಆಸ್ತಿಯಾಗಲು ಶ್ರಮಿಸಬೇಕು. ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಹೆಚ್ಚಿನ ಸಾಧನೆ ಮಾಡಿ ಹೊರ ದೇಶಗಳಲ್ಲಿ ಸೇವೆ ಮಾಡುತ್ತಿದ್ದಾರೆ. ಇದು ಹೆಮ್ಮೆಯ ವಿಚಾರವಾಗಿದ್ದರೂ ಅವರ ಸೇವೆ ನಮ್ಮ ದೇಶಕ್ಕೆ ಲಭಿಸುವಂತಾದರೆ ನಮ್ಮ ದೇಶ ವಿಶ್ವ ಮಟ್ಟದಲ್ಲಿ ಕೀರ್ತಿಯನ್ನು ಗಳಿಸಲು ಸಾಧ್ಯ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಶಿಕ್ಷಣ ಪಡೆಯಲು ಹಲವು ಸಮಸ್ಯೆಗಳಿದ್ದರೂ ಅವುಗಳನ್ನು ಮೆಟ್ಟಿ ನಿಂತು ಉನ್ನತ ಸಾಧನೆ ತೋರುವಲ್ಲಿ ಮಕ್ಕಳು ಆಸಕ್ತಿ ತೋರಬೇಕು ಎಂದರು. ಇದೇ ಸಂದರ್ಭದಲ್ಲಿ ಈ ಶಾಲೆಯ ಹಳೆಯ ವಿದ್ಯಾರ್ಥಿ ಯಾಗಿದ್ದು, ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಅವರನ್ನು ಶಾಲಾ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮ ದಲ್ಲಿ ಶಾಲಾ ಮುಖ್ಯ ಶಿಕ್ಷಕ ಲೋಕೇಶ್ ಸ್ವಾಗತಿಸಿದರು, ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಸುನಿಲ್ ನಾಣಯ್ಯ, ಉಪಾಧ್ಯಕ್ಷ ಪೆÇನ್ನಪ್ಪ, ಸದಸ್ಯರಾದ ಉತ್ತಪ್ಪ, ಕುಟ್ಟಪ್ಪ, ಪೂಣಚ್ಚ, ಕರ್ನಂಡ ಬೊಳ್ಳಮ್ಮ ಶಾಲಾ ಆಡಳಿತಾಧಿಕಾರಿ ಲಕ್ಷ್ಮೀನಾರಾಯಣ, ಜಿ. ಪಂ. ಸದಸ್ಯ ಶಶಿ ಸುಬ್ರಮಣಿ, ಗಾ. ಪಂ. ಅಧ್ಯಕ್ಷ ನಾಣಯ್ಯ, ಶಾಲಾ ಭೋದಕ ಬೋಧಕೇತರ ನೌಕರರು