ಸೋಮವಾರಪೇಟೆ, ಸೆ. 21: ತಾಲೂಕಿನ ಶನಿವಾರಸಂತೆ ಮತ್ತು ಕೊಡ್ಲಿಪೇಟೆ ವ್ಯಾಪ್ತಿಯಲ್ಲಿ ವಿವಿಧ ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದ ಕಾರ್ಯಕರ್ತರು ಶಾಸಕ ಅಪ್ಪಚ್ಚು ರಂಜನ್ ಸಮ್ಮುಖದಲ್ಲಿ ಭಾರತೀಯ ಜನತಾ ಪಾರ್ಟಿಗೆ ಸೇರ್ಪಡೆಗೊಂಡರು.
ಇಲ್ಲಿನ ಶಾಸಕರ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಾರ್ಯಕರ್ತರನ್ನು ಪಕ್ಷಕ್ಕೆ ಬರಮಾಡಿಕೊಂಡ ಶಾಸಕ ರಂಜನ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿ ಕಾರ್ಯ ಮೆಚ್ಚಿ ಹಲವು ಮಂದಿ ಕಾರ್ಯಕರ್ತರು ಹಾಗೂ ಮುಖಂಡರು ವಿವಿಧ ಪಕ್ಷಗಳನ್ನು ತೊರೆದು ಬಿಜೆಪಿ ಸೇರ್ಪಡೆಗೊಳ್ಳುತ್ತಿದ್ದಾರೆ ಎಂದರು.
ಈ ಸಂದರ್ಭ ಬಿಜೆಪಿ ನಿಡ್ತ ಸ್ಥಾನೀಯ ಸಮಿತಿ ಅಧ್ಯಕ್ಷ ಅಶೋಕ್, ಜಿ.ಪಂ. ಸದಸ್ಯೆ ಸರೋಜಮ್ಮ ಹಾಗೂ ಮಾಲಂಬಿ ಗಂಗಾಧರ್ ನೇತೃತ್ವದಲ್ಲಿ ಗಂಗಾವರ, ಗೋಪಾಲಪುರ, ಸಿಡಿಗಳಲೆ, ಶನಿವಾರಸಂತೆ, ದೊಡ್ಡಳ್ಳಿ, ಅವರೆದಾಳು, ದೊಡ್ಡಮಳ್ತೆ ಗ್ರಾಮಗಳ ಮೋಹನ್, ಮಾರಯ್ಯ, ವಿರೂಪಾಕ್ಷ, ದೇವರಾಜು, ಶೇಖರ್, ರಾಜೇಶ್, ದೇವರಾಜು, ಗುರು, ಜಯಪ್ಪ, ಉಮೇಶ್, ಈರಣ್ಣಯ್ಯ, ರುದ್ರಯ್ಯ, ಬಸವರಾಜು, ಜಗದೀಶ್ ಸೇರಿದಂತೆ ಸುಮಾರು 25ಕ್ಕೂ ಅಧಿಕ ಮಂದಿ ಕಾರ್ಯಕರ್ತರು ಬಿಜೆಪಿ ಸೇರ್ಪಡೆಗೊಂಡರು.