ಸಿದ್ದಾಪುರ, ಜ. 16: ವೀರಾಜಪೇಟೆ ತಾಲೂಕು ಪ್ರೌಢಶಾಲಾ ಮಕ್ಕಳಿಗೆ ನಾಗರಹೊಳೆ ಯಲ್ಲಿ ಅರಣ್ಯ ಇಲಾಖೆಯ ವತಿಯಿಂದ ‘ಚಿನ್ನರ ವನ ದರ್ಶನ’ ಕಾರ್ಯಕ್ರಮ ನಾಗರಹೊಳೆಯಲ್ಲಿ ನಡೆಯಿತು. ಅರಣ್ಯ ಇಲಾಖೆಯ ವತಿಯಿಂದ ಪ್ರೌಢಶಾಲೆಯ ಮಕ್ಕಳಿಗೆ ಪ್ರಕೃತಿ ಹಾಗೂ ವನ್ಯಜೀವಿ ಸಂರಕ್ಷಣೆ ಕುರಿತು ಮಾಹಿತಿ ಶಿಬಿರವನ್ನು ನಾಗರ ಹೊಳೆಯ ಅಭಯಾರಣ್ಯ ದಲ್ಲಿ ಹಮ್ಮಿಕೊಳ್ಳಲಾಗಿತ್ತು. ಒಂದು ದಿನದ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ಅರಣ್ಯ ರಕ್ಷಣೆ, ವನ್ಯಜೀವಿಗಳು ಮತ್ತು ಅದರ ರಕ್ಷಣೆಯ ಮಹತ್ವ ಮುಂತಾದವುಗಳನ್ನು ತಿಳಿಸಿ ಕೊಡಲಾಯಿತು.

ಡಿ.ಎಫ್.ಓ. ಸೂರ್ಯಸೇನಾ ನೇತೃತ್ವದಲ್ಲಿ ವಲಯ ಅರಣ್ಯಾಧಿಕಾರಿ ಗೋಪಾಲ್, ಉಪ ವಲಯ ಅರಣ್ಯಾಧಿಕಾರಿ ಕೆ.ಎಂ. ದೇವಯ್ಯ, ತಾ.ಪಂ. ಸದಸ್ಯ ರಾಣ ಭೀಮಯ್ಯ, ಅಮ್ಮತ್ತಿ ಶಾಲಾ ಮುಖ್ಯ ಶಿಕ್ಷಕ ಸದಾನಂದ ಇದ್ದರು.