ಮಡಿಕೇರಿ, ಜೂ. 23 : ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಯುವ ಬರಹಗಾರರ ಸಮಾವೇಶ ಇದೇ ತಾ. 28 ರಿಂದ 30 ರವರೆಗೆ ಕಾವೇರಿ ನಿಸರ್ಗಧಾಮದಲ್ಲಿ ನಡೆಯಲಿದೆ. ಪ್ರತಿ ಜಿಲ್ಲೆಯಿಂದ ಇಬ್ಬರಂತೆ ಒಟ್ಟು 60 ಮಂದಿ ಶಿಬಿರಾರ್ಥಿಗಳು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಿಬಿರದ ನಿರ್ದೇಶಕ ಕಾಳೇಗೌಡ ನಾಗವಾರ 3 ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ತಾ. 28 ರಂದು ಹಿರಿಯ ಸಾಹಿತಿಗಳು ಹಾಗೂ ಚಿಂತP ಪ್ರೋ. ಚಂದ್ರಶೇಖರ ಪಾಟೀಲ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಪ್ರೋ. ಮಾಲತಿ ಪಟ್ಟಣ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕೊಡಗು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

“ಪ್ರಸ್ತುತ ಭಾರತದ ಸುಡುವಾಸ್ತವಗಳು ಸಾಹಿತ್ಯ ಲೋಕದ ಪ್ರತಿಕ್ರಿಯೆ” ಶೀರ್ಷಿಕೆಯೊಂದಿಗೆ ನಡೆಯುತ್ತಿರುವ ಸಮಾವೇಶದಲ್ಲಿ 3 ದಿನಗಳ ಕಾಲ ಬರಹಗಾರರೊಡನೆ ಸಂವಾದ ನಡೆಯಲಿದೆ. ತಾ.28 ರಂದು ಸಮಕಾಲೀನ ಭಾರತೀಯ ಸಾಹಿತ್ಯ ಮತ್ತು ಸಾಮಾಜಿಕ ವಾಸ್ತುಗಳ ವಿಚಾರದ ಕುರಿತು ಡಾ. ರಾಜೇಂದ್ರ ಚೆನ್ನಿ, ಸಾಹಿತ್ಯ ಲೋಕ ಮತ್ತು ಸಮಾಕಾಲೀಕ ರಾಜಕೀಯ ಪರ್ಯಾಯಗಳು ವಿಚಾರದ ಕುರಿತು ಡಾ. ನಟರಾಜ ಹುಳಿಯಾರ್ ವಿಷಯ ಮಂಡಿಸಲಿದ್ದಾರೆ. ತಾ. 29 ರಂದು ಭಾರತೀಯ ಸಾಂಸ್ಕøತಿಕ ಪರಂಪರೆ ಮತ್ತು ಓದಿನ ರಾಜಕಾರಣ ವಿಷಯದ ಕುರಿತು ಡಾ. ನಟರಾಜ ಬೂದಾಳು ಹಾಗೂ ಕನ್ನಡ ಸಾಹಿತ್ಯ ಪರಂಪರೆಯ ವೈಚಾರಿಕ ಹೋರಾಟದ ಬರಹಗಳು ವಿಷಯದ ಕುರಿತು ಡಾ. ಸಬಿತಾ ಬನ್ನಾಡಿ ವಿಚಾರ ಮಂಡಿಸಲಿದ್ದಾರೆ.

ತಾ. 30 ರಂದು ಭಾರತೀಯ ದೇಶಿ ಸಂಸ್ಕøತಿ ಚಿಂತನೆಗಳ ಪ್ರಸ್ತುತತೆ ಕುರಿತು ಲಕ್ಷ್ಮೀಪತಿ ಹಾಗೂ ಕನ್ನಡಿಗರು ಮತ್ತು ಕನ್ನಡ ಪ್ರಭುತ್ವದ ಧರ್ಮನಿರಪೇಕ್ಷ ಚಿಂತನೆಗಳು ವಿಷಯದ ಕುರಿತು ಡಾ.ಅರುಣ್ ಜೋಳದ ಕೂಡ್ಲಿಗಿ ಅವರು ವಿಷಯ ಮಂಡಿಸಲಿದ್ದಾರೆ.

ಅಂದು ಮಧ್ಯಾಹ್ನ ನಡೆಯುವ ಸಮಾರೋಪ ಸಮಾರಂಭದಲ್ಲಿ ಹಿರಿಯ ಸಾಹಿತಿಗಳು ಹಾಗೂ ಚಿಂತಕÀ ಡಾ. ರಾಮಕೃಷ್ಣ ಸಮಾರೋಪ ಭಾಷಣ ಮಾಡಲಿದ್ದಾರೆ. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿರುವರು ಎಂದು ಡಾ. ಕಾಳೇಗೌಡ ನಾಗವಾರ ಮಾಹಿತಿ ನೀಡಿದರು.

ದೇಶ ಹಾಗೂ ರಾಜ್ಯದಲ್ಲಿ ಆರೋಗ್ಯಕರ ಸಮಾಜದ ಸೃಷ್ಟಿ ಮತ್ತು ಕರ್ತವ್ಯಗಳ ಬಗ್ಗೆ ಸಮಾವೇಶ ಬೆಳಕು ಚೆಲ್ಲಲಿದೆ ಎಂದು ಅವರು ತಿಳಿಸಿದರು. ಅಸಮಾನತೆ ಮತ್ತು ಜಾತಿ ವಾದದ ವಿರುದ್ಧ ಜಾಗೃತಿ ಮೂಡಿಸುವ ವಿಶೇಷ ಕಾರ್ಯಕ್ರಮ ಇದಾಗಿದೆ. ಹಿಂದೆ ಸ್ವಾತಂತ್ರ ಹೋರಾಟದ ಸಂದರ್ಭ ಕೊಡಗು ಕೂಡ ಆದರ್ಶಮಯವಾಗಿತ್ತು. ಕೊಡಗಿನ ಗೌರಮ್ಮ ಹಾಗೂ ಭಾರತೀಸುತರು ಹೆಚ್ಚು ಪರಿಣಾಮ ಬೀರಿದ್ದರು ಎಂದು ಡಾ. ಕಾಳೇಗೌಡ ನಾಗವಾರ ಅಭಿಪ್ರಾಯ ಪಟ್ಟರು. ಸದಸ್ಯ ಸಂಚಾಲಕ ಮಹೇಶ್ ಹರವೆ ಮಾತನಾಡಿ, ಅಕಾಡೆಮಿಯ ಮುಂದಿನ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.

ಯುವ ಸಮೂಹಕ್ಕೆ ಸಾಹಿತ್ಯದ ಬಗ್ಗೆ ಉತ್ತೇಜನ ನೀಡುವ ಉದ್ದೇಶದಿಂದ ಅಂಕುರ ಮತ್ತು ಚಿಗುರು ಕಾರ್ಯಕ್ರಮವನ್ನು ರಾಜ್ಯದ 175 ತಾಲೂಕುಗಳಲ್ಲಿ ನಡೆಸಲಾಗುತ್ತಿದೆ ಎಂದರು. ಸ್ತ್ರೀ ಸಮಾವೇಶವನ್ನು ಕೂಡ ನಡೆಸಲು ಉದ್ದೇಶಿಸಲಾಗಿದ್ದು, ರಾಜ್ಯದ ಎಲ್ಲಾ ಅಕಾಡೆಮಿಗಳು ಒಟ್ಟಾಗಿ “ಸಂಗಮ ಸಂಭ್ರಮ” ಎಂಬ ಕಾರ್ಯಕ್ರಮವನ್ನು ನಡೆಸಲು ಚಿಂತನೆ ನಡೆಸಲಾಗಿದೆ. ಯುವ ಸಂಶೋಧಕರನ್ನು ಅಧ್ಯಯನಕ್ಕಾಗಿ ಆಯ್ಕೆ ಮಾಡಲು ನಿರ್ಧರಿಸಲಾಗಿದ್ದು, 1 ವರ್ಷದ ಗೌರವ ಧನವಾಗಿ 1 ಲಕ್ಷ ರೂಪಾಯಿಗಳನ್ನು ನೀಡಲಾಗುತ್ತಿದೆ. ಅಧ್ಯಯನವನ್ನು ಪುಸ್ತಕದ ರೂಪದಲ್ಲಿ ಹೊರತಲಾಗುವದು ಎಂದು ಅವರು ಹೇಳಿದರು. ಬುಡಕಟ್ಟು ಜನಾಂಗದ ಜೀವನ ಕ್ರಮದ ಕುರಿತು ಅಧ್ಯಯನ ನಡೆಸಿ ಪುಸ್ತಕವನ್ನು ಹೊರತರಲು ಸಾಹಿತಿಗಳ ಪ್ರವಾಸ ಕಾರ್ಯಕ್ರಮವನ್ನು ಕೂಡ ಹಮ್ಮಿಕೊಳ್ಳಲಾಗಿದೆ ಎಂದು ಮಹೇಶ್ ಹರವೆ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮೊಹಿದ್ದೀನ್ ಉಪಸ್ಥಿತರಿದ್ದರು.