ಮಡಿಕೇರಿ ಆ.30 : ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ 20ನೇ ವರ್ಷದ ಸಾರ್ವತ್ರಿಕ ಕೈಲ್ ಮುಹೂರ್ತ ಹಬ್ಬದ ಪ್ರಯುಕ್ತ ಸೆ.1 ರಂದು ನಗರದಲ್ಲಿ ವಾಹನ ಮೆರವಣಿಗೆ ನಡೆಸಲಾಗುವದೆಂದು ಸಿಎನ್‍ಸಿ ಅಧ್ಯಕ್ಷ ಎನ್.ಯು. ನಾಚಪ್ಪ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕೊಡಗಿನ ಆಯುಧ ಪೂಜೆಯೆಂದೇ ಸಾಂಪ್ರದಾಯಿಕವಾಗಿ ಆಚರಿಸಲ್ಪಡುವ ಕೈಲ್ ಮುಹೂರ್ತವನ್ನು ಸಿಎನ್‍ಸಿ ಸಂಘಟನೆ ಕಳೆದ ಇಪ್ಪತ್ತು ವರ್ಷಗಳಿಂದ ಸಾರ್ವತ್ರಿಕವಾಗಿ ಆಚರಿಸಿಕೊಂಡು ಬಂದಿದೆ. ಸೆ.1 ರಂದು ನಗರದ ಜೂನಿಯರ್ ಕಾಲೆÉೀಜು ಬಳಿಯಲ್ಲಿರುವ ಮೈದಾನದ ಮಂದ್‍ನಲ್ಲಿ ಕೃಷಿ ಉಪಕರಣಗಳಾದ ನೇಗಿಲು, ನೊಗ, ತಮಿ ತಾವೆ, ಬೊಳ್ಳಂಗಿ ಮತ್ತು ಆಯುಧಗಳಾದ ವಡಿಕತ್ತಿ, ಪೀಚೆ ಕತ್ತಿ, ತೋಕ್‍ಗಳಿಗೆ ಸಾರ್ವತ್ರಿಕವಾಗಿ ಪೂಜೆ ಸಲ್ಲಿಸಿ ತೋಕ್ ಪÀÇ ಮೂಲಕ ಸಿಂಗರಿಸಿ ವಾಹನಗಳಲ್ಲಿ ನಗರದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುವದೆಂದರು.
ನಗರದ ಹೊರವಲಯದ ಕ್ಯಾಪಿಟಲ್ ವಿಲೆÉೀಜ್‍ನಲ್ಲಿ ಕೈಲ್ ಮುಹೂರ್ತ ಹಬ್ಬದ ಆಚರಣೆÉಗಾಗಿ ಸಭೆಯನ್ನು ನಡೆಸಿ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಸೇರಿದಂತೆ ಕೊಡವ ಜನಪದೀಯ ಕ್ರೀಡೆಗಳನ್ನು ಆಯೋಜಿಸಲಾಗುವದು. ಆಯುಧಗಳಿಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ನಂತರ ಕೈಲ್ ಮುಹೂರ್ತ ಹಬ್ಬದ ವಿಶೇಷ ಖಾದ್ಯಗಳನ್ನು ಸವಿಯಲಾಗುವದೆಂದು ಎನ್.ಯು.ನಾಚಪ್ಪ ತಿಳಿಸಿದರು. ಕೊಡವರನ್ನು ಭಾಷಾ ಅಲ್ಪಸಂಖ್ಯಾತರು ಮತ್ತು ಬುಡಕಟ್ಟು ಸಮುದಾಯದವರೆಂದು ಗುರುತಿಸಬೇಕು. ಕೊಡವರಿಗೆ ರಾಜ್ಯಾಂಗದತ್ತ ಅಧಿಕಾರಗಳನ್ನು ನೀಡಬೇಕು, ಕೊಡವ ಲ್ಯಾಂಡ್ ಕೇಂದ್ರಾಡಳಿತ ಪ್ರದೇಶ ಘೋಷಣೆಯಾಗಬೇಕು, ಕೊಡವ ಭಾಷೆಯನ್ನು 8ನೇ ಶೆಡ್ಯೂಲ್‍ಗೆ ಸೇರಿಸಬೇಕು, ರಾಜ್ಯಾಂಗ ಖಾತ್ರಿ ಮತ್ತು ರಾಜಕೀಯ ಮೀಸಲಾತಿ ನೀಡಬೇಕು, ದೇವಟ್ ಪರಂಬುವಿನಲ್ಲಿ ರಾಷ್ಟ್ರೀಯ ಸ್ಮಾರಕ ನಿರ್ಮಿಸಬೇಕು ಸೇರಿದಂತೆ ಹಲವು ಬೇಡಿಕೆಗಳ ಹಕ್ಕೊತ್ತಾಯವನ್ನು ಕೈಲು ಮುಹೂರ್ತ ಹಬ್ಬ ಆಚರಣೆಯ ಸಂದರ್ಭ ಮಂಡಿಸಲಾಗುವದೆಂದು ನಾಚಪ್ಪ ತಿಳಿಸಿದರು.
ಜಿಲ್ಲೆÉಯಲ್ಲಿ ನಡೆಯುತ್ತಿರುವ ಮರಹನನದ ವಿರುದ್ಧ ಸೆ.9 ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಸಂಘÀಟನೆ ವತಿಯಿಂದ ಪ್ರತಿಭಟನೆ ನಡೆಸಲಾಗುವದೆಂದು ತಿಳಿಸಿದ ಅವರು, ಜಿಲ್ಲೆಯಲ್ಲಿ ಟಿಂಬರ್ ಮಾಫಿಯದಿಂದಾಗಿ ಪ್ರಕೃತಿಯಲ್ಲಿ ಅಸಮಾತೋಲನ ಉಂಟಾಗಿ ಮಳೆಯ ಕೊರತೆ ಎದುರಾಗಿದೆ ಎಂದು ಆರೋಪಿಸಿದರು. ಸುಂಟಿಕೊಪ್ಪ ಹಾಗೂ ಕೋಪಟ್ಟಿ ವಿಭಾಗದಲ್ಲಿ ಸಾಕಷ್ಟು ಮರಹನನ ನಡೆಯುತ್ತಿದ್ದು, ಸಿಬಿಐ ತನಿಖೆÉ ನಡೆಯಬೇಕೆಂದು ನಾಚಪ್ಪ ಇದೇ ಸಂದರ್ಭ ಒತ್ತಾಯಿಸಿದರು. ಜಿಲ್ಲೆಯಲ್ಲಿ ನಡೆಯುತ್ತಿದೆ ಎನ್ನಲಾಗಿರುವ ನಕ್ಸಲ್ ಚಟುವಟಿಕೆ ಬಗ್ಗೆ ನ್ಯಾಷನಲ್ ಸೆಕ್ಯೂರಿಟಿ ಆ್ಯಕ್ಟ್ ಪ್ರಕಾರ ಕ್ರಮ ಕೈಗೊಂಡು ರಾಷ್ಟ್ರೀಯ ತನಿಖಾ ದಳದ ಮೂಲಕ ತನಿಖೆ ನಡೆಸಬೇಕೆಂದು ನಾಚಪ್ಪ ಆಗ್ರಹಿಸಿದರು. ಗೋಷ್ಠಿಯಲ್ಲಿ ಪುಲ್ಲೇರ ಕಾಳಪ್ಪ, ಮೂಕೊಂಡ ದಿಲೀಪ್ ಹಾಗೂ ಶಿವಣ್ಣಿ ಉಪಸ್ಥಿತರಿದ್ದರು.