ಮಡಿಕೇರಿ, ನ. 6: ಸರ್ಕಾರಗಳು ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದ್ದು, ಅಧಿಕಾರಿಗಳ ಇಚ್ಚಾಶಕ್ತಿ ಕೊರತೆಯಿಂದ ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿಲ್ಲ. ಆದ್ದರಿಂದ ನೌಕರರು ಸರ್ಕಾರದ ಸೌಲಭ್ಯಗಳನ್ನು ಸಂಘಟಿತ ಹೋರಾಟದ ಮೂಲಕ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ನಗರದ ಸಮುದ್ರ ಹೊಟೇಲ್ ಸಭಾಂಗಣದಲ್ಲಿ ನಡೆದ ಅಖಿಲ ಭಾರತ ಅಂಚೆ ನೌಕರರ ಸಂಘ ಗ್ರೂಪ್ ಸಿ ಪೋಸ್ಟ್‍ಮ್ಯಾನ್ ಮತ್ತು ಜೆಡಿಎಸ್ ಕೊಡಗು ವಿಭಾಗದ 8ನೇ ಜಂಟಿ ದ್ವೈ ವಾರ್ಷಿಕ ವಿಶೇಷ ಅಧಿವೇಶನವನ್ನು ಉದ್ಘಾಟಿಸಿ ಮಾತನಾಡಿದರು.

ಅಂಚೆ ಇಲಾಖೆಗೆ ಹಲವಾರು ವರ್ಷಗಳ ಇತಿಹಾಸವಿದೆ. ಇಲಾಖೆಯಲ್ಲಿ ಸಮಸ್ಯೆ ಕೂಡ ಹಲವಾರು ಇದೆ. ಅಧಿಕಾರಿ ಶಾಹಿಗಳ ವಿರುದ್ಧ ನೌಕರರು ನಡೆಸುವ ಹೋರಾಟಗಳು ಇನ್ನಷ್ಟು ಬಲಗೊಳ್ಳಬೇಕು ಎಂದು ಅಭಿಪ್ರಾಯಪಟ್ಟರು. ಅಧಿವೇಶನದ ಅಧ್ಯಕ್ಷತೆಯನ್ನು ಅಖಿಲ ಭಾರತ ಅಂಚೆ ನೌಕರರ ಸಂಘ ಗ್ರೂಪ್ ಸಿ ಕೊಡಗು ವಿಭಾಗದ ಅಧ್ಯಕ್ಷೆ ಪಿ.ಸಿ. ಜಮುನಾ ಹಾಗೂ ಅಂಚೆ ನೌಕರರ ಸಂಘ ಪೋಸ್ಟ್‍ಮ್ಯಾನ್ ಗ್ರೂಪ್ ಡಿ ಕೊಡಗು ವಿಭಾಗದ ಅಧ್ಯಕ್ಷ ಪಿ.ಕೆ. ನಾಣಯ್ಯ ವಹಿಸಿದ್ದರು.

ಈ ಸಂದರ್ಭ ಅಖಿಲ ಭಾರತ ಅಂಚೆ ನೌಕರರ ಸಂಘ ಗ್ರೂಪ್ ಸಿ ಕರ್ನಾಟಕ ವಲಯ ಸಹಕಾರ್ಯದರ್ಶಿ ಎಂ. ಪ್ರಕಾಶ್ ರಾವ್, ಅಂಚೆ ನೌಕರರ ಸಂಘ ಪೋಸ್ಟ್‍ಮ್ಯಾನ್ ಎಂಡಿಎಸ್ ಕರ್ನಾಟಕ ವಲಯ ಕಾರ್ಯದರ್ಶಿ ಮಲ್ಲಿಕಾರ್ಜುನ, ಅಂಚೆ ನೌಕರರ ಸಂಘ ಪೋಸ್ಟ್‍ಮ್ಯಾನ್ ಕರ್ನಾಟಕ ವಲಯ ಕಾರ್ಯಾಧ್ಯಕ್ಷ ಬಿ.ವಿಜಯ ನ್ಯಾರಿ, ಕಾರ್ಯದರ್ಶಿ ವಿ.ಜಿ. ರಘುನಾಥ್ ಹಾಗೂ ಇನ್ನಿತರರು ಇದ್ದರು.