ಗೋಣಿಕೊಪ್ಪಲು, ಅ. 1: ಕೊಡಗು ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಟ್ಟದ ಕ್ರೀಡಾಕೂಟ ಪೊನ್ನಂಪೇಟೆಯ ಸಂತ ಅಂತೋಣಿ ಪ್ರೌಢಶಾಲಾ ಮೈದಾನದಲ್ಲಿ ತಾ. 16 ರಂದು ಬಾಸ್ಕೆಟ್‍ಬಾಲ್ ಹಾಗೂ ಹ್ಯಾಂಡ್‍ಬಾಲ್ ಸ್ಪರ್ಧೆ ಜರುಗಿದ್ದು, ಪ್ರೌಢಶಾಲಾ ವಿಭಾಗದಲ್ಲಿ ಅತಿಥೇಯ ಸಂತ ಅಂತೋಣಿ ಶಾಲೆ ಪ್ರಥಮ ಸ್ಥಾನ ಗಳಿಸಿದೆ.

ಬಾಲಕರ ಬಾಸ್ಕೆಟ್‍ಬಾಲ್ ಹಾಗೂ ಹ್ಯಾಂಡ್‍ಬಾಲ್ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಹಲವು ವರ್ಷಗಳಿಂದ ಪ್ರಥಮ ಸ್ಥಾನವನ್ನು ಗೆಲ್ಲುತ್ತಾ ಬಂದಿದ್ದು, ಈ ಬಾರಿಯೂ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಬಾಸ್ಕೆಟ್‍ಬಾಲ್ ಫೈನಲ್ಸ್‍ನಲ್ಲಿ ಸುಂಟಿಕೊಪ್ಪ ಸಂತ ಮೇರೀಸ್ ವಿರುದ್ಧ 9-5 ಅಂಕಗಳಿಂದ ಹಾಗೂ ಹ್ಯಾಂಡ್‍ಬಾಲ್ ಫೈನಲ್ಸ್‍ನಲ್ಲಿ ಸೋಮವಾರಪೇಟೆ ಶಾಂತಿನಿಕೇತನ ಪ್ರೌಢಶಾಲೆ ವಿರುದ್ಧ 7.5 ಅಂಕಗಳಿಂದ ಗೆಲುವು ಸಾಧಿಸಿದೆ.

ತಂಡದ ಸಾಧನೆ ಬಗ್ಗೆ ಫಾದರ್ ಜೇಕಬ್ ಕೊಲ್ಲನೂರ್, ಮುಖ್ಯೋಪಾಧ್ಯಾಯಿನಿ ಕೆ.ಕೆ. ಧರಣಿಜ ಹಾಗೂ ದೈಹಿಕ ಶಿಕ್ಷಕ ವಿ.ಕೆ. ತಿಮ್ಮಯ್ಯ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.