ಮಡಿಕೇರಿ, ಅ. 5: ಕೈಲ್ ಮುಹೂರ್ತ ಆಚರಣೆ ಸಮಿತಿ ಹಾಗೂ ಗೌಡ ಸಮಾಜ ಮೂರ್ನಾಡು ಇದರ ಸಹಯೋಗದಲ್ಲಿ ಸಮುದಾಯ ಬಾಂಧವರನ್ನು ಒಗ್ಗೂಡಿಸುವ ಕೈಲ್ ಮುಹೂರ್ತ ಸಂತೋಷ ಕೂಟ, ಮೂರ್ನಾಡು ಗೌಡ ಸಮಾಜದ ಆವರಣದಲ್ಲಿ ನಡೆಯಿತು.

ಪ್ರಥಮ ಬಾರಿಗೆ ಕೈಲ್ ಮುಹೂರ್ತ ಹಬ್ಬದ ಸಂತೋಷ ಕೂಟವನ್ನು ಹಮ್ಮಿಕೊಂಡು ಅದಕ್ಕೆ ಪೂರಕವಾಗಿ ಭಾರದ ಕಲ್ಲು ಎಸೆಯುವದು, ವಿಷದ ಚೆಂಡು, ಕಣ್ಣುಕಟ್ಟಿ ಮಡಿಕೆ ಒಡೆಯುವದು ಹಾಗೂ ವಾಲಗದ ಕುಣಿತ ಸ್ಪರ್ಧೆಗಳನ್ನು ಪುರುಷರಿಗೆ. ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಏರ್ಪಡಿಸಲಾಗಿತ್ತು.

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಕರ್ನಾಟಕ ಅರೆಭಾಷೆ ಅಕಾಡೆಮಿ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕೊಲ್ಯದ ಗಿರೀಶ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅರೆಭಾಷಿಕರ ಸಂಸ್ಕøತಿ, ಸಾಹಿತ್ಯವನ್ನು ಉಳಿಸಿ ಬೆಳೆಸಲು ಇಂತಹ ಸಂತೋಷ ಕೂಟಗಳು ಸಹಕಾರಿಯಾಗಿದೆ. ಅರೆಭಾಷೆಯನ್ನು ಪ್ರತಿಯೊಬ್ಬರೂ ಯಾವದೇ ಸಂಕೋಚವಿಲ್ಲದೆ ಮನೆಗಳಲ್ಲಿ ಮಾತನಾಡಬೇಕು. ಯಾವದೇ ಭಾಷೆ ಬೆಳೆಯಬೇಕಾದರೆ, ಉಳಿಯ ಬೇಕಾದರೆ ಅದನ್ನು ಮಾತನಾಡು ವವರ ಸಂಖ್ಯೆ ಹೆಚ್ಚಾಗಬೇಕು ಎಂದರು. ಅಕಾಡೆಮಿ ಕಾರ್ಯ ಯೋಜನೆಯನ್ನು ವಿವರಿಸುತ್ತ ಜನಾಂಗ ಬಾಂಧವರು ತಮ್ಮನ್ನು ತಾವು ತೊಡಗಿಸಿಕೊಳ್ಳುವದ ರೊಂದಿಗೆ ಶ್ರೀಮಂತ ಅರೆಭಾಷಿಕರ ಸಂಸ್ಕøತಿಯನ್ನು ಪಸರಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಅರೆಭಾಷೆಯಲ್ಲಿ ಬರವಣಿಗೆಯನ್ನು ಮಾಡಿ ಸಾಹಿತ್ಯ ಕೃತಿಗಳ ಬೆಳವಣಿಗೆಗೆ ಪಾತ್ರರಾಗಬೇಕು ಎಂದರು. ತಾಲೂಕು ಪಂಚಾಯಿತಿ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ಮಾತನಾಡಿ, ಮೂರ್ನಾಡು ವಲಯದಲ್ಲಿ ಗೌಡ ಬಾಂಧವರನ್ನು ಒಗ್ಗೂಡಿಸುವ ಕೆಲಸ ಮಾಡಿದ ಗೌಡ ಸಮಾಜದ ಅಧ್ಯಕ್ಷರ, ನಿರ್ದೇಶಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಿಪಡಿಸಿದರು.

ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಲ್ಲಚನ ದಿನೇಶ್ ಈ ವಲಯದಲ್ಲಿ ಗೌಡ ಯುವ ವೇದಿಕೆಯನ್ನು ಕಟ್ಟಬೇಕು. ಆ ಮೂಲಕ ಜನಾಂಗದವರಲ್ಲಿ ಅರಿವು ಮೂಡಿಸಬೇಕು ಎಂದರು. ಕಲ್ಲುಮುಟ್ಲು ಜಮುನ ಸೋಮಯ್ಯ, ಕಾಂತೂರು-ಮೂರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಉದ್ಯಮಿ ಉಳುವಾರನ ಚಂದ್ರಶೇಖರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಶುಭ ಕೋರಿದರು. ಊರಿನ ಹಿರಿಯರಾದ ಕಟ್ರತನ ಬೆಳ್ಯಪ್ಪ ಕೈಲ್ ಮುಹೂರ್ತ ಹಬ್ಬದ ಪ್ರಾಮುಖ್ಯತೆಯನ್ನು ವಿವರಿಸಿದರು. ಗೌಡ ಸಮಾಜದ ಅಧ್ಯಕ್ಷ ಚೆಟ್ಟಿಮಾಡ ಟಿ. ಕಾರ್ಯಪ್ಪ ಮೂರ್ನಾಡು ಗೌಡ ಸಮಾಜದ ಮುಂದಿನ ಕಾರ್ಯ ಯೋಜನೆಗಳನ್ನು ತಿಳಿಸುತ್ತ ಸಮಾಜ ಅಭಿವೃದ್ಧಿ ಹೊಂದಲು ಎಲ್ಲಾ ಸದಸ್ಯರು, ಜನಾಂಗ ಬಾಂಧವರು ಸಹಕರಿಸಬೇಕಾಗಿ ಕೋರಿದರು.

ನಿರ್ದೇಶಕ ಪಾಣತ್ತಲೆ ಹರೀಶ್ ಸ್ವಾಗತಿಸಿದರು. ಕುವೆಯಂಡ್ರ ಸುನಂದಿನಿ ಜಗದೀಶ್ ಪ್ರಾರ್ಥಿಸಿದರು. ದಂಬೆಕೋಡಿ ಸುಬ್ರಮಣಿ ವಂದಿಸಿದರು. ಅಂಚೆಮನೆ ದಮಯಂತಿ ದಿನೇಶ್ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಗೌಡ ಸಮಾಜದ ನಿರ್ದೇಶಕರಾದ ತೆಕ್ಕಡೆ ರಮೇಶ್, ಬಿಳಿಯಾರ ವಸಂತ ಕುಮಾರ್, ಕೋರನ ಪ್ರಕಾಶ್, ಚೀಯಂಡಿ ಪ್ರದೀಪ್, ತೆಕ್ಕಡೆ ತಿಮ್ಮಯ್ಯ, ಉಳುವಾರ ರಾಧಾಕೃಷ್ಣ, ತೆಕ್ಕಡೆ ಪ್ರಸನ್ನ, ಕಾರ್ಯದರ್ಶಿ ಬೈಲೋಳಿರ ವಿಶ್ವನಾಥ್ ಉಪಸ್ಥಿತರಿದ್ದರು.