ಕೂಡಿಗೆ, ಸೆ. 1: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಕೊಡವ ಸಾಹಿತ್ಯ ಅಕಾಡೆಮಿ, ಅರೆಭಾಷೆ ಸಾಹಿತ್ಯ ಅಕಾಡೆಮಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕ, ಕೊಡಗು ಜಾನಪದ ಪರಿಷತ್, ಶಿರಂಗಾಲ ಪದವಿ ಪೂರ್ವ ಕಾಲೇಜು ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ಕೊಡಗಿನ ಗಡಿಭಾಗ ಶಿರಂಗಾಲದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆದ ಮುಂಗಾರು ಸಂಪದ, ಸಾಹಿತ್ಯ ಲೋಕಕ್ಕೆ ಅನ್ನದಾತರ ಕೊಡುಗೆ ಕಾರ್ಯಕ್ರಮದಲ್ಲಿ ರೈತರೊಂದಿಗೆ ನೇರ ಸಂವಾದ ಕಾರ್ಯಕ್ರಮ ನಡೆಯಿತು.

ಸಾಹಿತಿ ಗಿರೀಶ್ ಕಿಗ್ಗಾಲು ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಹಿತ್ಯ ಸಂವಾದ ಕಾರ್ಯಕ್ರಮದಲ್ಲಿ ಕನ್ನಡ ಭಾಷೆ ಬೆಳವಣಿಗೆ, ಸಾಹಿತ್ಯದ ಬಗ್ಗೆ ಚರ್ಚೆ ನಡೆದವು. ಇನ್ನೊಂದೆಡೆ ಯುವ ಬರಹಗಾರರಿಗೆ ರೈತರೊಡನೆ ನೇರ ಸಂವಾದಗಳು ನಡೆದವು. ಸಂವಾದ ಕಾರ್ಯಕ್ರಮದಲ್ಲಿ ಜಾನಪದ, ಸಾಹಿತ್ಯ ಸಾಂಸ್ಕøತಿಕ ಹಿನ್ನೆಲೆಯ ವಿಚಾರಗಳಿಗೆ ಸಂಬಂಧಿಸಿದಂತೆ ರೈತರು ವೇದಿಕೆಯಲ್ಲಿದ್ದ ಗಣ್ಯರೊಂದಿಗೆ ಸಂವಾದ ನಡೆಯಿತು.

ಸಂವಾದ ಕಾರ್ಯಕ್ರಮ ವೇದಿಕೆಯಲ್ಲಿದ್ದ ಸಾಹಿತಿಗಳು ಹಾಗೂ ಕಸಾಪದ ಜಿಲ್ಲಾ ಗೌ.ಕಾರ್ಯದರ್ಶಿ ಡಾ.ಸುಭಾಷ್ ನಾಣಯ್ಯ, ಸಾಹಿತಿಗಳಾದ ಶೋಭಾ ಸುಬ್ಬಯ್ಯ, ನಾ.ಲ ವಿಜಯ, ಬೈತಡ್ಕ ಜಾನಕಿ, ಕಸ್ತೂರಿ ಗೋವಿಂದಮಯ್ಯ ಇವರು ಸಂವಾದದಲ್ಲಿ ಪಾಲ್ಗೊಂಡಿದ್ದರು.