ಗುಡ್ಡೆಹೊಸೂರು, ಜೂ. 24: ಇಲ್ಲಿಗೆ ಸಮೀಪದ ಗುಡ್ಡೆಹೊಸೂರು ಬಸವನಹಳ್ಳಿ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ ಶ್ರೀ ರಾಮಾನುಜಂ ವಿಜ್ಞಾನ ಕೇಂದ್ರ ಮತ್ತು ಶ್ರೀ ಜಗದೀಶ್ ಚಂದ್ರಬೋಸ್ ಇಕೋ ಕ್ಲಬ್ ವತಿಯಿಂದ 150 ಕ್ಕೂ ಹೆಚ್ಚು ಗಿಡಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ. ಉಪಾಧ್ಯಕ್ಷ ಪುರುಷೋತ್ತಮ, ಶಾಲಾ ಮುಖ್ಯ ಶಿಕ್ಷಕ ಕೃಷ್ಣ ನಾಯಕ್ ಅವರು ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭ ವಿಜ್ಞಾನ ಕೇಂದ್ರದ ಸಂಘಟನಾ ಶಿಕ್ಷಕ ವೆಂಕಟೇಶ ಮಾತನಾಡಿ, ದಿನದ ಮಹತ್ವ ಹಾಗೂ ಪರಿಸರವನ್ನು ಕಾಪಾಡುವ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕ ಶ್ರೀನಿವಾಸ್ ನಾಯಕ್, ಹೇರೂರು ಶಾಲೆಯ ಮುಖ್ಯ ಶಿಕ್ಷಕ ಹೆಚ್.ಎಂ. ವೆಂಕಟೇಶ, ಜಗದೀಶ ಚಂದ್ರ ಭೋಸ್ ಇಕೋ ಕ್ಲಬ್‍ನ ಮೇಲ್ವಿಚಾರಕಿ ಲತಾ ಹಾಜರಿದ್ದರು.