ವರದಿ: ಪಿ.ವಿ.ಪ್ರಭಾಕರ್
ನಾಪೆÇೀಕ್ಲು. ಜೂ. 18: ಕಳೆದ ಒಂದು ತಿಂಗಳಿನಿಂದ ಚೇಲಾವರ ಗ್ರಾಮದಲ್ಲಿ ಸಂಚರಿಸುತ್ತಿರುವ ಕಾಡಾನೆ ಹಿಂಡುಗಳು ಗ್ರಾಮದಲ್ಲಿ ಸುಮಾರು ರೂ. 50 ಲಕ್ಷ ಬೆಳೆ ನಷ್ಟ ಮಾಡಿದೆ. ಕಳೆದ ಮೂರು ದಿನಗಳಲ್ಲಿ ಮುಂಡ್ಯೋಳಂಡ ಕುಟುಂಬಸ್ಥರ ಸುಮಾರು 10 ಲಕ್ಷಕ್ಕೂ ಮೀರಿದ ಬೆಳೆ ನಷ್ಟ ಮಾಡಿರುವ ಹಿನೆÀ್ನಲೆಯಲ್ಲಿ ರೊಚ್ಚಿಗೆದ್ದ ಗ್ರಾಮಸ್ಥರು ಅರಣ್ಯ ಇಲಾಖೆ ವಾಹನವನ್ನು ಕೆಲಕಾಲ ದಿಗ್ಭಂಧನಕ್ಕೆ ಒಳಪಡಿಸಿ ಹಿರಿಯ ಅರಣ್ಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಒಂದು ಆನೆಗೆ 5 ಲಕ್ಷ?
ಕಾಡಾನೆ ಧಾಳಿಗೆ ಸಿಕ್ಕಿ ಮೃತ ಪಟ್ಟ ವ್ಯಕ್ತಿಗೆ ಐದು ಲಕ್ಷ ರೂ. ಪರಿಹಾರವನ್ನು ಸರಕಾರ ನೀಡುತ್ತಿದೆ. ಆದರೆ ನಾವು ಒಂದು ಆನೆಗೆ ಐದು ಲಕ್ಷ ರೂ.ಗಳಂತೆ ಸರಕಾರಕ್ಕೆ ಪಾವತಿಸುತ್ತೇವೆ.