ಮಡಿಕೇರಿ, ಜು. 3: ಕರ್ನಾಟಕ ಅಲ್ಪಸಂಖ್ಯಾತರ ಕಲ್ಯಾಣ ನಿರ್ದೇಶನಾಲಯ 2016-17ನೇ ಸಾಲಿನಲ್ಲಿ ಪ್ರೀ-ಮೆಟ್ರಿಕ್, ಪೋಸ್ಟ್ ಮೆಟ್ರಿಕ್ ಹಾಗೂ ಮೆರಿಟ್ ಕಂ ಮೀನ್ಸ್ ವಿದ್ಯಾರ್ಥಿ ವೇತನಗಳಿಗೆ 2016 ಜುಲೈ ತಿಂಗಳ 15ನೇ (15.07.2016) ಬಳಿಕ ಅರ್ಜಿ ಆಹ್ವಾನಿಸಲಾಗುವದು. ವಿದ್ಯಾರ್ಥಿಗಳು/ಪೋಷಕರು/ವಿದ್ಯಾ ಸಂಸ್ಥೆಯವರು ಮತ್ತು ಬಿಇಓ ಅಧಿಕಾರಿಗಳು ಸೂಚನೆಗಳನ್ನು ಪಾಲಿಸುವಂತೆ ಬಿ.ಸಿ.ಎಂ ಅಧಿಕಾರಿ ಕೆ.ವಿ. ಸುರೇಶ್ ತಿಳಿಸಿದ್ದಾರೆ.

ಸೂಚನೆಗಳು ಇಂತಿದೆ: ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಪ್ರತೀ ವಿದ್ಯಾರ್ಥಿಯು ಖಾತೆ ಹೊಂದಿರಬೇಕು. ಮತ್ತು ಸಕ್ರಿಯವಾಗಿರುವಂತೆ ನೋಡಿ ಕೊಳ್ಳಬೇಕು. ಖಾತೆ ಇಲ್ಲದಿದ್ದರೆ ಅರ್ಜಿ ಹಾಕಿ ಖಾತೆ ತೆರೆಯಬೇಕು. ಇನ್ನೂ ಆಧಾರ್ ಮಾಡಿಸದ ಮತ್ತು ಪಡೆದುಕೊಳ್ಳದ ವಿದ್ಯಾರ್ಥಿಗಳು ಕೂಡಲೇ ಅರ್ಜಿ ಹಾಕಿ ಆಧಾರ್ ಕಾರ್ಡ್ ಪಡೆದುಕೊಳ್ಳಬೇಕು.

ಆಧಾರ್ ಕಾರ್ಡ್ ಇರುವ ವಿದ್ಯಾರ್ಥಿಗಳು ಎಬಿಪಿ ಸೇವೆಗಾಗಿ ಕಾರ್ಡ್ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ನಂಬರನ್ನು ಕೂಡಲೇ ಲಿಂಕ್ ಮಾಡಿಸಿಕೊಳ್ಳಬೇಕು. ಇಐಡಿ ನಂಬರ್ ಪಡೆದವರು ಯು.ಐ.ಡಿ. ನಂಬರ್ ಪಡೆದುಕೊಳ್ಳಬೇಕು. ಸಂಸ್ಥೆಯ ಹೆಸರು ನ್ಯಾಷನಲ್ ಸ್ಕಾಲರ್ ಶಿಪ್ ಫೋರ್ಟಲ್‍ನಲ್ಲಿ ನೋಂದಣಿಯಾಗಿರ ದಿದ್ದಲ್ಲಿ ಕೂಡಲೇ ಸಂಸ್ಥೆಯವರು ನೋಂದಣಿ ಮಾಡಬೇಕು.

ಅದಕ್ಕಾಗಿ ಅರ್ಜಿ ನಮೂನೆಯನ್ನು ಇಲಾಖೆಯ ವೆಬ್‍ಸೈಟ್‍ನಲ್ಲಿ ಈಗಾಗಲೇ ಅಪ್ಲೋಡ್ ಮಾಡಲಾಗಿದ್ದು ಡೌನ್ಲೋಡ್ ಮಾಡಿಕೊಂಡು, ಭರ್ತಿ ಮಾಡಿದ ಬಳಿಕ ಅಪ್ಲೋಡ್ ಮಾಡಬೇಕು. ಸಂಸ್ಥೆಯವರು ವೆಬ್‍ಸೈಟಿನಲ್ಲಿ ನೀಡಿರುವ ಸೂಚನೆಗಳನ್ನು ಪಾಲಿಸಿ, ನೋಂದಾವಣೆ ಮಾಡಿಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಮಾಹಿತಿ ಕೇಂದ್ರ ಹಾಗೂ ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖಾ ಕಚೇರಿ, ದೂ.ಸಂ. 08272-225628, ಡಿ. ದೇವರಾಜ ಅರಸು ಭವನ, ಮ್ಯಾನ್ಸ್ ಕಾಂಪೌಂಡ್ ಹತ್ತಿರ, ಮಡಿಕೇರಿಯನ್ನು ಸಂಪರ್ಕಿಸುವದು ಎಂದು ಬಿ.ಸಿ.ಎಂ ಅಧಿಕಾರಿ ತಿಳಿಸಿದ್ದಾರೆ.