ಮಡಿಕೇರಿ, ಆ.31 : ಕುಶಾಲನಗರದ ಆಟೋ ಚಾಲಕ ಪ್ರವೀಣ್ ಪೂಜಾರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಂಧನಕ್ಕೆ ಒಳಗಾಗಿರುವ ಆರೋಪಿಗಳು ಅಮಾಯಕರಾಗಿದ್ದರೆ ನೈಜ ಆರೋಪಿಗಳ್ಯಾರು ಎಂಬದನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ಬಹಿರಂಗಪಡಿಸಲಿ ಎಂದು ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಸಂಘಟನೆಗಳು ಒತ್ತಾಯಿಸಿವೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವ ಹಿಂದೂ ಪರಿಷತ್‍ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ. ನರಸಿಂಹ, ಪ್ರವೀಣ್ ಪೂಜಾರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೆ ಪೆÇಲೀಸರ ದಕ್ಷತೆ ಮತ್ತು ಪರಿಶ್ರಮದಿಂದ ಆರೋಪಿಗಳನ್ನು ಬಂಧಿಸಲಾಗಿದೆ. ಆದರೆ, ಬಂಧನಕ್ಕೆ ಒಳಗಾದವರು ಅಮಾಯಕರು ಎಂದು ಹೇಳುವ ಮೂಲಕ ಪಿಎಫ್‍ಐ ಸಂಘಟನೆಯ ಪ್ರಮುಖರು ತಮಗೆ ನೈಜ ಆರೋಪಿಗಳ ಸುಳಿವಿದೆ ಎಂಬದನ್ನು ಸಾಬೀತು ಮಾಡಿದ್ದಾರೆ. ಆದ್ದರಿಂದ ನೈಜ ಆರೋಪಿಗಳನ್ನು ಬಯಲಿಗೆ ತಂದು ಅಮಾಯಕರನ್ನು ರಕ್ಷಿಸಲಿ ಎಂದು ನರಸಿಂಹ ಹೇಳಿದರು.

ತುಂಡಾದ ಭಾರತವನ್ನು ಒಂದು ಮಾಡಬೇಕೆನ್ನುವ ಉದ್ದೇಶದಿಂದ ಯಾವದೇ ಧರ್ಮವನ್ನು ನಿಂದಿಸದೆ ಅಖಂಡ ಭಾರತದ ಕಾರ್ಯಕ್ರಮ ಗಳನ್ನು ಸಂಘ ಪರಿವಾರ ನಡೆಸುತ್ತಿದೆ. ಆದರೆ ಗಲಭೆ ಸೃಷ್ಟಿಸಲು ದುಷ್ಕರ್ಮಿಗಳು ಸಂಚು ನಡೆಸುತ್ತಿದ್ದಾರೆ ಎಂದು ಅವರು ಆರೋಪಿಸಿದರು. ಈ ದೇಶದ ಬಗ್ಗೆ ಅಭಿಮಾನ ಮತ್ತು ಕಾಳಜಿ ಇದ್ದಲ್ಲಿ ಪಿಎಫ್‍ಐ ಸಂಘಟನೆ ದುಷ್ಕøತ್ಯದಲ್ಲಿ ತೊಡಗಿರುವವರ ಬಣ್ಣವನ್ನು ಬಯಲು ಮಾಡಲಿ ಎಂದು ನರಸಿಂಹ ಸವಾಲು ಹಾಕಿದರು. ಪಿಎಫ್‍ಐ ಮುಖಂಡರುಗಳನ್ನು ಬಂಧಿಸಿ ತಕ್ಷಣ ಸಮಗ್ರ ತನಿಖೆÉಗೆ ಒಳಪಡಿಸಬೇಕೆಂದು ಅವರು ಒತ್ತಾಯಿಸಿದರು.

ಅಹಿಂಸಾ ಮಾರ್ಗದಲ್ಲೇ ಕಾನೂನಿನಡಿಯಲ್ಲಿ ದುಷ್ಕರ್ಮಿಗಳ ವಿರುದ್ಧ ಹೋರಾಟ ನಡೆಸುವದಾಗಿ ಸ್ಪಷ್ಟಪಡಿಸಿದ ನರಸಿಂಹ, ದೇಶಭಕ್ತಿಯ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹೋರಾಟಗಳಲ್ಲಿ ಪಾಲ್ಗೊಳ್ಳುವದು ತಪ್ಪಿಲ್ಲವೆಂದು ತಿಳಿಸಿದರು. ದೇಶದ ಉಳಿವಿನ ಪ್ರಶ್ನೆ ಬಂದಾಗ ವಿದ್ಯಾರ್ಜನೆಗಿಂತ ದೇಶ ಮುಖ್ಯ ವಾಗುತ್ತದೆ ಎಂದು ಅಭಿಪ್ರಾಯಪಟ್ಟ ಅವರು ಹಿಂದೂ ಸಂಘಟನೆಗಳು ವಿದ್ಯಾರ್ಥಿಗಳಿಗೆ ಯಾವದೇ ಪ್ರಚೋದನೆಯನ್ನು ನೀಡುತ್ತಿಲ್ಲವೆಂದು ಸ್ಪಷ್ಟಪಡಿಸಿದರು.

ವಿಹೆಚ್‍ಪಿಯ ವೀರಾಜಪೇಟೆ ಅಧ್ಯಕ್ಷ ಜಗತ್ ಮಾತನಾಡಿ, ಟಿಪ್ಪು ಜಯಂತಿಯ ನಂತರ ಕೊಡಗಿನಲ್ಲಿ ಅಹಿತಕರ ಘಟನೆಗಳು ನಡೆಯುತ್ತಿದ್ದು, ಇದು ಅತ್ಯಂತ ಖಂಡನೀಯ ಎಂದರು. ಕೊಡಗಿನ ಜನರ ಭಾವನೆಗೆ ಧಕ್ಕೆ ತಂದ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಲಾಗಿತ್ತೆ ಹೊರತು ಅನ್ಯ ಧರ್ಮದ ಮೇಲಲ್ಲ. ಆದರೂ ಬಹುಸಂಖ್ಯಾತರ ಮೇಲೆ ದ್ವೇಷ ಸಾಧಿಸಿಕೊಂಡು ಅಹಿತಕರ ಘಟನೆಗಳನ್ನು ನಡೆಸಲಾಯಿತೆಂದು ಆರೋಪಿಸಿದರು.

ಪ್ರವೀಣ್ ಪೂಜಾರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆÉ ಸಂಪೂರ್ಣಗೊಂಡ ನಂತರ ರಾಜ್ಯ ಸರ್ಕಾರದ ಆದೇಶದಂತೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಆದರೆ, ಪಿಎಫ್‍ಐ ಸಂಘಟನೆ ಸರ್ಕಾರ ಮತ್ತು ಐಜಿ ಬಿ.ಕೆ.ಸಿಂಗ್ ವಿರುದ್ಧ ಟೀಕೆ ಮಾಡುತ್ತಿರುವದು ಸರಿಯಲ್ಲ ಎಂದು ಜಗತ್ ತಿಳಿಸಿದರು.

ಭಜರಂಗದಳದ ಜಿಲ್ಲಾ ಸಂಚಾಲಕ ಅಜಿತ್ ಕುಮಾರ್ ಮಾತನಾಡಿ, ಪಿಎಫ್‍ಐ ಸಂಘÀಟನೆ ಯಿಂದ ರಾಜ್ಯವ್ಯಾಪಿ ಅನೇಕ ಕುಕೃತ್ಯಗಳು ನಡೆಯುತ್ತಿದೆ ಎಂದು ಆರೋಪಿಸಿದರು. ಅನೇಕ ಅಪರಾಧದ ಮೊಕದ್ದಮೆಗಳನ್ನು ಎದುರಿಸುತ್ತಿರುವ ಆರೋಪಿಗಳೇ ಪ್ರವೀಣ್ ಪೂಜಾರಿ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ನಗರದಲ್ಲಿ ಕೆಲವು ಅಂಗಡಿ ಮಳಿಗೆಗಳು ಕುಕೃತ್ಯಗಳ ಮೂಲ ಸ್ಥಾನವಾಗುತ್ತಿದೆ ಯೆಂದು ಆರೋಪಿಸಿದ ಅಜಿತ್ ಕುಮಾರ್ ತಕ್ಷಣ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷತ್‍ನ ಮಡಿಕೆÉೀರಿ ಅಧ್ಯಕ್ಷ ಬಿ.ಎಸ್. ಮೋಹನ್, ಮಡಿಕೆÉೀರಿ ಸಂಘಟನಾ ಕಾರ್ಯಾಧ್ಯಕ್ಷ ಮಂಜುನಾಥ್ ಹಾಗೂ ಭಜರಂಗದಳದ ಅಮ್ಮತ್ತಿ ವಿಭಾಗದ ಪ್ರಮುಖ ಕಿಶೋರ್ ಉಪಸ್ಥಿತರಿದ್ದರು.