ಮಡಿಕೇರಿ ಆ.13 : ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗ ದಳದ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಆ.14 ರಂದು ವೀರಾಜಪೇಟೆಯಲ್ಲಿ ಪಂಜಿನ ಮೆರವಣಿಗೆ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವ ಹಿಂದೂ ಪರಿಷತ್‍ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ. ನರಸಿಂಹ, ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು. ಆ.14 ರಂದು ರಾತ್ರಿ 7.30 ಗಂಟೆಗೆ ವೀರಾಜಪೇಟೆಯ ಶ್ರೀ ಅಯ್ಯಪ್ಪ ದೇವಾಲಯದ ಬಳಿಯಿಂದ ಪಂಜಿನ ಮೆರವಣಿಗೆ ನಡೆಯಲಿದೆ. ಗಡಿಯಾರ ಕಂಬದ ಬಳಿಯ ಕಾರು ನಿಲ್ದಾಣಕ್ಕೆ ಮೆರವಣಿಗೆ ತಲುಪಿದ ನಂತರ ರಾತ್ರಿ 9 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ವಿಶ್ವ ಹಿಂದೂ ಪರಿಷತ್‍ನ ಜಿಲ್ಲಾಧ್ಯಕ್ಷರಾದ ಟಾಟಾ ಬೋಪಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರ ಪ್ರಮುಖರಾದ ಡಾ. ಗಿರಿಧರ ಉಪಾಧ್ಯಾಯ ಮುಖ್ಯ ಭಾಷಣ ಮಾಡಲಿದ್ದಾರೆ ಎಂದು ನರÀಸಿಂಹ ತಿಳಿಸಿದರು. ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದರೂ ಕೆಲವರ ಸ್ವಾರ್ಥದಿಂದಾಗಿ ಇಂದು ದೇಶದ ಹಲವು ಭಾಗಗಳು ಬೇರ್ಪಟ್ಟಿವೆ. ಇದು ಭಾರತೀಯರ ಭಾವನೆಗಳಿಗೆ ನೋವನ್ನುಂಟು ಮಾಡಿದ್ದು, ಮತ್ತೆ ಅಖಂಡ ಭಾರತವನ್ನು ಸ್ಥಾಪಿಸಬೇಕೆನ್ನುವದು ಹಿಂದೂ ಸಂಘಟನೆಗಳ ಗುರಿಯಾಗಿದೆ ಎಂದು ಅವರು ಇದೇ ಸಂದರ್ಭ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಭಜರಂಗ ದಳದ ಜಿಲ್ಲಾ ಸಂಚಾಲಕ ಎನ್.ಕೆ. ಅಜಿತ್ ಕುಮಾರ್, ಸಹ ಸಂಚಾಲಕ ಕೆ.ಹೆಚ್. ಚೇತನ್, ಮಡಿಕೇರಿ ಸಂಚಾಲಕರಾದ ವಿನಯ್ ಕುಮಾರ್ ಪ್ರಮುಖರಾದ ಕಮಲ್ ಹಾಗೂ ವೀರಾಜಪೇಟೆ ಕಾರ್ಯದರ್ಶಿ ವಿವೇಕ್ ರೈ ಉಪಸ್ಥಿತರಿದ್ದರು.