ನಾಪೆÇೀಕ್ಲು, ನ. 1: ನಾಪೆÇೀಕ್ಲು ಪೆÇಲೀಸ್ ಠಾಣಾ ಸಿಬ್ಬಂದಿಗಳ ವಾಸಕ್ಕೆ ಸುಮಾರು ರೂ. 2 ಕೋಟಿ ವೆಚ್ಚದಲ್ಲಿ ಸುಸಜ್ಜಿತವಾದ 12 ವಸತಿ ಸಮುಚ್ಛಯಗಳುಳ್ಳ ಬೃಹತ್ ವಸತಿ ಗೃಹ ನಿರ್ಮಾಣಗೊಂಡಿದ್ದು, ಉದ್ಘಾಟನೆಗೆ ಸಜ್ಜಾಗಿದೆ.ಒಂದೆಡೆ ಹಳೇ ವಸತಿ ಗೃಹದಲ್ಲಿ ಕಷ್ಟಪಟ್ಟು ದಿನ ಕಳೆಯುತ್ತಿದ್ದ ಸಿಬ್ಬಂದಿ ಹಾಗೂ ಅವರ ಕುಟುಂಬಕ್ಕೆ ಸಂತಸವಾದರೆ ಮತ್ತೊಂದೆಡೆ 12 ವಸತಿ ಗೃಹಗಳಲ್ಲಿ ನಮಗೆ ಯಾವದಾದರೂ ದೊರೆತರೆ ಸಾಕು ಎನ್ನುವ ಆತಂಕ ಅವರಿಗೆ ಎದುರಾಗಿದೆ. ಕಾರಣ 27 ಸಿಬ್ಬಂದಿಗಳಿಗೆ ಇಲ್ಲಿರುವದು ಕೇವಲ 12 ವಸತಿ ಗೃಹಗಳು ಮಾತ್ರ.

ನಾಪೆÇೀಕ್ಲು-ಮಡಿಕೇರಿ ತಾಲೂಕಿನಲ್ಲಿ ಎರಡನೇ ದೊಡ್ಡ ಪಟ್ಟಣವಾಗಿದೆ. ಈ ಠಾಣಾ ವ್ಯಾಪ್ತಿ ಸುಮಾರು 27 ಗ್ರಾಮಗಳನ್ನು ಒಳಗೊಂಡಿದೆ. ಅವುಗಳಲ್ಲಿ ಬಹುತೇಕ ಬೆಟ್ಟ-ಗುಡ್ಡಗಳಿಂದ ಕೂಡಿದ ಗ್ರಾಮಗಳಾಗಿವೆ. ಪಟ್ಟಣದಲ್ಲಿ ಪ್ರಥಮ ದರ್ಜೆ ಸರಕಾರಿ ಪದವಿ ಕಾಲೇಜು, ಪದವಿ ಪೂರ್ವ ಕಾಲೇಜು, ಸಮುದಾಯ ಆರೋಗ್ಯ ಕೇಂದ್ರ, ಹಲವು ಸರಕಾರಿ ಮತ್ತು ಖಾಸಗಿ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಅದರೊಂದಿಗೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಳ, ಎಮ್ಮೆಮಾಡು ದರ್ಗಾ ಶರೀಫ್ ಸೇರಿದಂತೆ ಹಲವು ಧಾರ್ಮಿಕ ಕೇಂದ್ರಗಳು, ಚೇಲಾವರ ಜಲಪಾತ, ನಾಲ್ಕುನಾಡು ಅರಮನೆ, ತಡಿಯಂಡ ಮೋಳ್ ಬೆಟ್ಟದಂತಹ ಪ್ರವಾಸಿ ಕೇಂದ್ರಗಳು, ಹಲವಾರು ರೆಸಾರ್ಟ್, ಹೋಂ ಸ್ಟೇಗಳು ಕೂಡಾ ಇಲ್ಲಿವೆ. ಆದರೆ ಈ ಎಲ್ಲಾ ವ್ಯವಸ್ಥೆಗಳ ಬಗ್ಗೆ ನಿಗಾ ಇಡಲು ಈ ಠಾಣೆಯಲ್ಲಿ ಪೆÇಲೀಸ್ ಸಿಬ್ಬಂದಿಗಳು ಮಾತ್ರ ಬರೀ 27. ಇವರಲ್ಲಿ ರಜೆ, ಇತರೆಡೆ ಕರ್ತವ್ಯಕ್ಕೆ ತೆರಳುವವರು ಹಲವು ಮಂದಿ. ಉಳಿದ ಸಿಬ್ಬಂದಿಗಳು ಇಲ್ಲಿ ಸರಿಯಾಗಿ ಕರ್ತವ್ಯ ನಿರ್ವಹಿಸುವದು ಬರೀ ಕನಸಿನ ಮಾತು. ಅದರೊಂದಿಗೆ ನಾಪೆÇೀಕ್ಲು ಪಟ್ಟಣದಲ್ಲಿ ದಿನೇ ದಿನೇ ವಾಹನದ ದಟ್ಟಣೆ ಹೆಚ್ಚಾಗುತ್ತಿದ್ದು, ಇಬ್ಬರು ಪೆÇಲೀಸರಿಂದ ಇದನ್ನು ಸರಿಯಾಗಿ ನಿರ್ವಹಿಸಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಇದೆಲ್ಲದರ ಮಧ್ಯೆ ಎಲ್ಲಾ ಸಿಬ್ಬಂದಿಗಳಿಗೆ ವಸತಿಗೃಹ ಭಾಗ್ಯ ದೊರೆಯದಂತಾಗಿದೆ.

ಪಿಎಸ್‍ಐ, ಎಎಸ್‍ಐಗಳಿಗೆ

ವಸತಿ ಇಲ್ಲ

ಇಲ್ಲಿ ನಿರ್ಮಾಣಗೊಂಡಿರುವ 12 ವಸತಿ ಗೃಹಗಳಲ್ಲಿ ಪಿಎಸ್‍ಐ ಹಾಗೂ ಎಎಸ್‍ಐಗಳಿಗೆ ವಸತಿ ಗೃಹ ಇಲ್ಲ. ಇಲ್ಲಿ ಕರ್ತವ್ಯಕ್ಕೆ ಆಗಮಿಸುವ ಪಿಎಸ್‍ಐಗಳು ಪ್ರವಾಸಿ ಮಂದಿರ ಅಥವಾ ಖಾಸಗಿ ವಸತಿ ಗೃಹಗಳಲ್ಲಿ ತಂಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಿಬ್ಬಂದಿಗಳೊಂದಿಗೆ ಇವರಿಗೂ ವಸತಿ ಗೃಹ ನಿರ್ಮಾಣಗೊಂಡಿದ್ದರೆ ಇವರಿಂದ ಹೆಚ್ಚಿನ ಸೇವೆಯನ್ನು ನಿರೀಕ್ಷಿಸಬಹುದಿತ್ತೇನೋ.

ಎಸ್‍ಐ ವಸತಿ ಗೃಹ ನಿರ್ಮಾಣಕ್ಕೆ ಆಗ್ರಹ

ಹಳೇ ಪಿಎಸ್‍ಐ ವಸತಿ ಗೃಹವನ್ನು ಕೆಡವಿ ಎರಡು ಅಥವಾ ಮೂರಂತಸ್ತಿನಲ್ಲಿ ನೂತನ ಕಟ್ಟಡ ನಿರ್ಮಿಸಿದರೆ ಅಧಿಕಾರಿಗಳಿಗೂ ವ್ಯವಸ್ಥಿತ ವಸತಿ ನೀಡಿದಂತಾಗಿ ಅವರ ಸಮಸ್ಯೆಗಳಿಗೂ ಪರಿಹಾರ ದೊರೆತಂತಾಗುವದು. ಇದರಿಂದ ಅವರು ಸಾರ್ವಜನಿಕರ ಸೇವೆಯಲ್ಲಿ ಯಾವದೇ ಅಡಚಣೆಯಿಲ್ಲದೆ ಕಾರ್ಯ ನಿರ್ವಹಿಸುವದರೊಂದಿಗೆ ಪಟ್ಟಣದ ಬಹುತೇಕ ಸಮಸ್ಯೆಗಳು ಪರಿಹಾರವಾಗಲು ಸಾಧ್ಯವಾಗಲಿದೆ ಆದುದರಿಂದ ಪಿಎಸ್‍ಐ ವಸತಿ ಗೃಹವನ್ನು ಪುನರ್ ನಿರ್ಮಾಣ ಮಾಡಬೇಕೆನ್ನುವದು ಸಾರ್ವಜನಿಕರು ಆಗ್ರಹವಾಗಿದೆ.

ನೆನೆಗುದಿಗೆ ಬಿದ್ದಿರುವ ಕುದುರೆ ಲಯ

ಬ್ರಿಟೀಷರ ಕಾಲದಲ್ಲಿ ಪೆÇಲೀಸ್ ಅಧಿಕಾರಿಯ ಓಡಾಟದ ಕುದುರೆ ಯನ್ನು ಕಟ್ಟಲು ವಸತಿ ಗೃಹ ಬಳಿ ಕಟ್ಟಡವೊಂದಿದೆ. ಇದರ ಹೆಂಚುಗಳು, ಮರ ಎಲ್ಲವೂ ಶಿಥಿಲಗೊಂಡಿದ್ದು, ಸಂಪೂರ್ಣ ನೆಲ ಕಚ್ಚಿದೆ. ಇದರ ಜಾಗದಲ್ಲಿಯೂ ನೂತನ ಕಟ್ಟಡಕ್ಕೆ ವ್ಯವಸ್ಥೆ ಕಲ್ಪಿಸಬಹುದಾಗಿದೆ. ಕುದುರೆ ಬದಲಿಗೆ ಅಧಿಕಾರಿಗಳ ವಾಹನದ ನಿಲುಗಡೆ ಗಾದರೂ ಇದನ್ನು ಬಳಸಿಕೊಳ್ಳ ಬಹುದು ಎನ್ನುತ್ತಾರೆ ಜನ. ಹಗಲಿರುಳು ಸಮಾಜದ ಹಿತ ಕಾಯುವಲ್ಲಿ ಪ್ರಮುಖ ಪಾತ್ರವಹಿಸುತ್ತಿರುವ ಪೆÇಲೀಸರಿಗೆ ಮೂಲಭೂತ ಸೌಕರ್ಯಗಳನ್ನು ನೀಡುವದು ಸರಕಾರದ ಜವಾಬ್ದಾರಿಯೂ ಆಗಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು, ಪೆÇಲೀಸ್ ಉನ್ನತಾಧಿಕಾರಿಗಳು ಗಮನ ಹರಿಸಬೇಕಾಗಿದೆ.

- ಪಿ.ವಿ. ಪ್ರಭಾಕರ್