ಕರಿಕೆ, ನ. 2: ರಾಜ್ಯದ ಹಾಗೂ ಕೊಡಗಿನ ಗಡಿ ಭಾಗ ಕೇರಳಕ್ಕೆ ಹೊಂದಿಕೊಂಡತಿರುವ ಕರಿಕೆ ಗ್ರಾಮದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಕರಿಕೆ ಗ್ರಾಮ ಪಂಚಾಯಿತಿ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ನಿವೃತ್ತ ಶಿಕ್ಷಕ ಬಿ.ಎಲ್. ಬಾಲಕೃಷ್ಣ ಮಾಸ್ತರ್ ಕನ್ನಡದ ಧÀ್ವಜಾರೋಹಣವನ್ನು ನೆರವೇರಿಸಿದರು. ಮೆರವಣಿಗೆಯನ್ನು ಕಾಟೂರ್ ನಾರಾಯಣ ನಂಬ್ಯಾರ್ ಶಾಲಾ ಆವರಣದಲ್ಲಿ ಸ್ಥಳೀಯ ಕೃಷಿಕರಾದ ಶ್ರೀ ಮಧುಕರ್ ಆಚಾರ್ ಅವರು ಮತ್ತಿನ ಛತ್ರಿಯನ್ನು ಹಸ್ತಾಂತರಿ ಸುವದರ ಮೂಲಕ ಉದ್ಘಾಟಿಸಿದರು. ಶಾಲೆಯಿಂದ ಹೊರಟ ಮೆರವಣಿಗೆ 2 ಕೀ.ಮಿ ದೂರ ಕ್ರಮಿಸಿ ನಂತರ ಎಳ್ಳುಕೊಚ್ಚಿಯ ಕಯ್ಯಾರ ಕಿಂಞಣ್ಣ ರೈ ವೇದಿಕೆಯ ಸಮೀಪ ಸಮಾಪ್ತಿಗೊಂಡಿತು. ಮೆರವಣಿಗೆಯಲ್ಲಿ ಸ್ಥಬ್ಧಚಿತ್ರ ಚಂಡೆ ವಾದ್ಯ ಮೇಳ, ಸ್ತ್ರೀಶಕ್ತಿ ಸಂಘದ ಮಹಿಳೆಯರಿಂದ ಮುತ್ತಿನ ಛತ್ರಿ ಪ್ರದರ್ಶನ, ಶಾಲಾ ಮಕ್ಕಳಿಂದ ಕರ್ನಾಟಕದ ಇತಿಹಾಸವನ್ನು ಬಿಂಬಿಸುವ ವಿವಿಧ ವೇಷ ಭೂಷಣವನ್ನು ಪ್ರದರ್ಶಿಸಿದರು. 500ಕ್ಕೂ ಅಧಿಕ ಕನ್ನಡದ ಬಾವುಟ ವನ್ನು ಹಿಡಿದು ಶಾಲಾ ಮಕ್ಕಳು ಹಾಗೂ ಶಿಕ್ಷಕರು ಅಂಗನವಾಡಿ ಕಾರ್ಯಕತೆಯರು, ಆರೋಗ್ಯ ಇಲಾಖೆಯವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ವಿಶೇಷವಾಗಿ ಶಾಸಕ ಕೆ.ಜಿ. ಬೋಪಯ್ಯ 1 ಕಿ.ಮೀ ಮೆರವಣಿಗೆಯಲ್ಲಿ ಪಾಲ್ಗೊಂಡು ಮೆರುಗು ನೀಡಿದರು. ಇವರಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಲಚಂದ್ರ ನಾಯರ್ ಜಿ.ಪಂ. ಸದಸ್ಯೆ ಕವಿತಾ ಪ್ರಭಾಕರ್, ತಾ.ಪಂ. ಸದಸ್ಯೆ ಸಂಧ್ಯಾ, ಪಂಚಾಯಿತಿ (ಮೊದಲ ಪುಟದಿಂದ) ಸದಸ್ಯರಾದ ಹರಿಪ್ರಸಾದ್, ಪುರುಶೋತ್ತಮ್, ಬಾಲಕೃಷ್ಣ, ರಮನಾಥ್, ಉಷಾಕುಮರಿ, ವೀಣಾ ಕುಮಾರಿ, ರಾಜೇಶ್ವರಿ, ಆಯಿಷಾ, ಕರಿಕೆ ಉಪವಲಯ ಅರಣ್ಯಾಧಿಕಾರಿ ಪಿ.ಟಿ. ಶಶಿ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹೊಸಮನೆ ಹರೀಶ್ ಸೇರಿದಂತೆ ಆಚರಣಾ ಸಮಿತಿ ಪದಾಧಿಕಾರಿಗಳು ಸಾಥ್ ನೀಡಿದರು. ನಂತರ ಕೈಯ್ಯಾರ ಕಿಂಞಣ್ಣ ರೈ ವೇದಿಕೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು.

ಪ್ರೌಢ ಶಾಲಾ ಕನ್ನಡ ಶಿಕ್ಷಕ ನಿಂಗಪ್ಪ ಹನುಮಣ್ಣನವರ್ ವಿದ್ಯಾರ್ಥಿಗಳು ಪ್ರಾರ್ಥನೆ ಹಾಗೂ ರೈತ ಗೀತೆ ಹಾಡಿದರು. ಕಾರ್ಯ ಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಗ್ರಾಮ ಪಂಚಾಯಿತಿ ಸದಸ್ಯ ಬೇಕಲ್ ರಮನಾಥ್ 7ನೆ ಶತಮಾನದಲ್ಲಿ ಕಪ್ಪೆ ಅರೆಭಟ್ಟ ಎಂಬ ಇತಿಹಾಸ ತಜ್ಞ ಕನ್ನಡದ ಬಗ್ಗೆ ಬರೆದಿದ್ದು, ಸಾವಿರಾರು ವರ್ಷಗಳ ಹಿಂದೆಯೆ ಕನ್ನಡ ಪ್ರಸಿದ್ದಿಯಾಗಿದೆ. ಈ ಗ್ರಾಮದ ಅಭಿವೃದ್ಧಿಗೆ ಸಹಕರಿಸಿ ಇದೀಗ ನಮ್ಮಿಂದ ಅಗಲಿದ ಎಲ್ಲ ಹಿರಿಯರನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕೆಂದರು.

ಸಭಾ ಕಾರ್ಯಕ್ರಮವನ್ನು ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಜ್ಯೋತಿ ಬೆಳಗುವದರೊಂದಿಗೆ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ರಾಜಧಾನಿ ಬೆಂಗಳೂರಿನ ಕನ್ನಡ ಅಭಿಮಾನಕ್ಕೂ ಗಡಿ ಭಾಗ ಕರಿಕೆಯ ಕನ್ನಡ ಅಭಿಮಾನಕ್ಕೆ ಇರುವ ವ್ಯತ್ಯಾಸ ಇಂದಿನ ಈ ಸಭೆಯಲ್ಲಿ ವ್ಯಕ್ತವಾಗುತ್ತಿರುವದು ಸಂತೋಷದ ವಿಷಯವಾಗಿದೆ ಎಂದರು. ಗ್ರಾಮವು ಕೇರಳ ರಾಜ್ಯಕ್ಕೆ ಹೊಂದಿಕೊಂಡಿದ್ದು, ಇಲ್ಲಿ ವಿವಿಧ ಜಾತಿ, ಭಾಷೆ ಆಚರಿಸುವ ಜನರಿದ್ದು ಇವರೆಲ್ಲರನ್ನೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯು ಒಂದೇ ವೇದಿಕಯಡಿ ಸೇರಿಸಿ ಕಾರ್ಯಕ್ರಮ ಆಚರಿಸುತ್ತಿರುವದು ಅಭಿನಂದನಾರ್ಹವಾಗಿದೆ. ಇಂತಹ ಎಲ್ಲ ಕಾರ್ಯಕ್ರಮಗಳಿಗೂ ಸರ್ಕಾರದ ಮಟ್ಟದಲ್ಲಿ ಸಹಕಾರ ನೀಡುವದಾಗಿ ತಿಳಿಸಿದರು. ಕನ್ನಡ ನಾಡಿನಲ್ಲಿ ಕನ್ನಡದ ಅಳಿವು ಉಳಿವಿಗಾಗಿ ಹೋರಾಡ ಬೇಕಾದ ದುಸ್ತಿತಿ ಬಂದಿರುವದು ದುರಂತ. ನಾವೆಲರೂ ಒಗ್ಗಟ್ಟಾಗಿ ಈ ನಿಟ್ಟಿನಲ್ಲಿ ಸ್ವಾಭಿಮಾನವನ್ನು ಪ್ರದರ್ಶಿಸಬೇಕೆಂದರು. ಈ ದೇಶದ ಅನೇಕ ಉನ್ನತ ಸ್ಥಾನಗಳನ್ನು ಹಲವಾರು ಕನ್ನಡಿಗರು ಅಲಂಕರಿಸಿ ದ್ದಾರೆ. ಕರ್ನಾಟಕಕ್ಕೆ ಮೊದಲ ಅದ್ಯತೆ ನೀಡಿ ಇತರ ಭಾಷಾ ಸಾಮರಸ್ಯವನ್ನು ಮೆರೆಯಬೇಕೆಂದರು. ಈ ದೇಶದ ಪ್ರದಾನಿ ನರೆಂದ್ರ ಮೋದಿಯವರು ತಾನು ಅಧಿಕಾರ ವಹಿಸಿದ ನಂತರ ಯಾವುದೇ ಹಬ್ಬ ಹರಿದಿನಗಳನ್ನು ದೇಶದ ಗಡಿ ಕಾಯುವ ಸೈನಿಕರೊಂದಿಗೆ ಆಚರಿಸಿ ಅವರಿಗೂ ಅವರ ಕುಟುಂಬದವರಿಗೂ ಸ್ಪೂರ್ತಿ ತುಂಬುವ ಕೆಲಸವನ್ನು ಮಾಡುತ್ತಿದ್ದು, ನಮಗೋಸ್ಕರ ಪ್ರಾಣದ ಹಂಗು ತೊರೆದು ಗಡಿಯಲ್ಲಿ ಸೇವೆ ಮಾಡುವ ಸೈನಿಕರಿಗೆ. ಧನ್ಯವಾದ ಹೇಳಲೇಬೇಕು. ಆ ಕೆಲಸ ಈ ಗಡಿ ಗ್ರಾಮದಿಂದ ಆಗಬೇಕೆಂದರು. ಇನ್ನೋರ್ವ ಮುಖ್ಯ ಅತಿಥಿ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಮಾತೃಭಾóಷೆ ಅರಿವಿನ ಅಗತ್ಯತೆ ಇದ್ದು, ಪೋಷಕರು ಆಂಗ್ಲ ಭಾಷೆ ವ್ಯಾಮೋಹ ಬಿಟ್ಟು ಕನ್ನ ಬಗ್ಗೆ ಎಚ್ಚೆತ್ತುಕೊಳ್ಳಬೇಕೆಂದರು. ಕನ್ನಡಕ್ಕೆ ಅವಮಾನ ಮಾಡದೆ ಅದನ್ನು ಉಳಿಸಿ ಬೆಳೆಸಬೇಕು ಈ ನಿಟ್ಟಿನಲ್ಲಿ ತನ್ನಿಂದಾದ ಸಹಕಾರವನ್ನು ನೀಡುವದಾಗಿ ತಿಳಿಸಿದರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲೋಕೇಶ್ ಸಾಗರ್ ಮಾತನಾಡಿ, ಗಡಿ ಗ್ರಾಮದಲ್ಲಿ ವಿಜೃಂಭಣೆಯಿಂದ ಕನ್ನಡ ರಾಜ್ಯೋತ್ಸವವನ್ನು ಅಚ್ಚುಕಟ್ಟಾಗಿ ಆಚರಿಸುತ್ತಿರುವದು ಆಶ್ಚರ್ಯವನ್ನುಂಟು ಮಾಡಿದೆ. ಗಡಿ ಗ್ರಾಮದಲ್ಲಿ ಕಾರ್ಯಕ್ರಮ ಆಚರಿಸುವದು ಆರ್ಥಪೂರ್ಣವೆಂದರು. ನಗರಗಳಲ್ಲಿ ಕಾವೇರಿ ಹೋರಾಟದ ಸಂದರ್ಭದಲ್ಲಿ ಮಾತ್ರ ಕನ್ನಡದ ನೆನಪಾಗುವದು ಬಿಟ್ಟರೆ ತಮ್ಮ ಅಸ್ತಿತ್ವಕ್ಕೋಸ್ಕರ ಕನ್ನಡದ ಧ್ವಜ ದುರುಪಯೋಗವಗುತ್ತಿರುವದು ದುರದೃಷ್ಟಕರವೆಂದರು. ತಾನು ಇತ್ತೀಚೆಗೆ ಜಿಲ್ಲಾ ಸಾಹಿತ್ಯ ಪರಿಷತ್‍ನ ಅಧ್ಯಕ್ಷ ಸ್ಥಾನ ವಹಿಸಿಕೊಂಡಿದ್ದು, ಕನ್ನಡ ಪರ ಕಾರ್ಯಕ್ರಮಗಳಲ್ಲಿ ಸಂಪೂರ್ಣ ಸಹಕಾರ ನೀಡುವದಾಗಿ ಹೇಳಿದರು. ನಂತರ ವಿವಿಧ ಆಟೋಟ ಸ್ಪಧೆರ್Éಗಳು ನಡೆದವು. ಸಮಾರೋಪ ಕಾರ್ಯ ಕ್ರಮದ ಅಧ್ಯಕ್ಷತೆಯನ್ನು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರು ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್. ಬಾಲಚಂದ್ರ ನಾಯರ್ ವಹಿಸಿದ್ದರು.

ಸಮಾರೋಪ ಭಾಷಣ ಮಾಡಿದ ಚಿಂತಕ, ಜನಪದ ಮತ್ತು ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಪ್ರೊ. ಕಾಳೇಗೌಡ ನಾಗಾವರ್, ಕನ್ನಡ ನಾಡು ನುಡಿಗೋಸ್ಕರ ಅನೇಕ ಹಿರಿಯ ಚೇತನಗಳು, ಸಾಹಿತಿಗಳು ದುಡಿದಿದ್ದು, ಎಂಟು ಮಂದಿ ಜ್ನಾನಪೀಠ ಪ್ರಶಸ್ತಿಯನ್ನು ಪಡೆದು ಕರ್ನಾಟಕದ ಹಿರಿಮೆಯನ್ನು ಹೆಚ್ಚಿಸಿದ್ದು ಅವರನ್ನು ಈ ಸಂದರ್ಭದಲ್ಲಿ ನೆನಪಿಸಿ ಕೊಳ್ಳಬೇಕೆಂದರು. ಕನ್ನಡದಲ್ಲಿ ಸಾಧನೆ ಮಾಡಿ ತೋರಿಸಬೇಕೆಂದರು. ನಂತರ ವಿವಿಧ ಆಟೋಟ ಸ್ಫರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ನಡೆಯಿತು. ಮಳೆಯ ನಡುವೆಯೂ ಹಗ್ಗ ಜಗ್ಗಾಟ ಸ್ಪರ್ಧೆ ನಡೆಯಿತು. ಪುರುಷರ ಹಗ್ಗ ಜಗ್ಗಾಟ ಸ್ಪಧೆರ್Éಯಲ್ಲಿ ಚೆಂಬೇರಿ ತಂಡ ಪ್ರಥಮ, ದ್ವಿತೀಯ ತೋಟಂ ತಂಡ, ಮಹಿಳೆಯರ ಹಗ್ಗಜಗ್ಗಾಟ ಸ್ಪಧೆರ್Éಯಲ್ಲಿ ಕುದುಪಜೆ ತಂಡ ಪ್ರಥಮ, ದ್ವಿತೀಯ ಜಾಸ್ಮಿನ್ ತಂಡ ಪಡೆದುಕೊಂಡಿತು. ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕøತಿ ಅಕಾಡೆಮಿಯ ಅಧ್ಯಕ್ಷ ಕೊಲ್ಯದ ಗಿರೀಶ್, ಜಿಲ್ಲಾ ಸರಕಾರಿ ವಕೀಲ ಎನ್. ಶ್ರೀಧರನ್ ನಾಯರ್, ಗ್ರಾ.ಪಂ. ಉಪಾಧ್ಯಕ್ಷೆ ಶೋಲಿಜಾರ್ಜ್, ವಿಎಸ್.ಎಸ್.ಎನ್. ಅಧ್ಯಕ್ಷ ಬಿ.ಡಿ. ದೇವರಾಜ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿಪಿನ್ ಕೆ.ಜಿ. ಸೇರಿದಂತೆ ಇತರ ಗಣ್ಯರು, ಸಮಿತಿ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಮದ್ಯಾಹ್ನ ಹಾಗೂ ರಾತ್ರಿ ಭೋಜನದ ವ್ಯವಸ್ಥೆ ಹಾಗೂ ಉಚಿತ ಬಸ್‍ನ ವ್ಯವಸ್ಥೆ ಮಾಡಲಾಗಿತ್ತು. ಶಿಕ್ಷಕ ಪ್ರವೀಣ್ ಕುಮಾರ್ ಕಾರ್ಯಕ್ರಮ ನಿರೂಪಿಸಿ, ಬಲರಾಮ ಹೆಚ್.ಪಿ. ಸ್ವಾಗತಿಸಿದರು. ಕಾಜೂರ್ ಸತೀಶ್ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ರಾತ್ರಿ ಸಾರ್ವಜನಿಕರಿಂದ ಹಾಗೂ ಎಲ್ಲಾ ಶಾಲಾ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.