ಸುಂಟಿಕೊಪ್ಪ, ಆ. 29: ಕೆದಕಲ್ ಬಳಿಯಲ್ಲಿ ಮಾರುತಿ ಹಾಗೂ ಪಿಕ್‍ಅಪ್ ಜೀಪ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ಸಣ್ಣಪುಟ್ಟ ಗಾಯಗಳಿಂದ ಚಾಲಕ ಸೇರಿದಂತೆ ಪ್ರಯಾಣಿಕರು ಪಾರಾದ ಘಟನೆ ನಡೆದಿದೆ.

ಇಲ್ಲಿಗೆ ಸಮೀಪದ ಕೆದಕಲ್ ಭದ್ರಕಾಳೇಶ್ವರಿ ದೇವಸ್ಥಾನ ಬಳಿಯಲ್ಲಿ ಸುಂಟಿಕೊಪ್ಪ ಕಡೆಯಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದ ಮಾರುತಿ ವೇಗನರ್ (ಕೆಎಲ್ 71-ಬಿ 8796) ಹಾಗೂ ಮಡಿಕೇರಿಯಿಂದ ಕುಶಾಲನಗರ ಕಡೆಗೆ ಆಗಮಿಸುತ್ತಿದ್ದ ಮಹೇಂದ್ರ ಪಿಕ್‍ಆಪ್ ಜೀಪುಗಳ ನಡುವೆ ಮದ್ಯಾಹ್ನ 3.30 ರ ಸಂದರ್ಭ ಮುಖಾಮುಖಿ ಡಿಕ್ಕಿಯಾಗಿದ್ದು ಮಾರುತಿ ವೇಗನರ್ ವಾಹನವು ಸಂಪೂರ್ಣ ಜಖಂಗೊಂಡಿದ್ದು ವಾಹನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.