ಸೋಮವಾರಪೇಟೆ, ನ. 21: ಸುಮಾರು 500 ವರ್ಷಗಳ ಇತಿಹಾಸ ಹೊಂದಿರುವ ತಾಲೂಕಿನ ಕೂತಿ ಗ್ರಾಮದ ಸೋಮೇಶ್ವರ ದೇವಾಲಯ ದಲ್ಲಿ ಕಾರ್ತಿಕ ಪೂಜೆ ನಡೆಯಿತು.

ಕಾರ್ತಿಕ ಮಾಸದ ಹುಣ್ಣಿಮೆ ಕಳೆದು ಮೊದಲನೇ ಶುಕ್ರವಾರ ರಾತ್ರಿ ಗ್ರಾಮಸ್ಥರು ದೇವಾಲಯದಲ್ಲಿ ಸೇರಿ ಸಾವಿರದ ಒಂದು ದೀಪವನ್ನು ಹಚ್ಚಿ, ಬಾಳೆ ದಿಂಡಿನಿಂದ ಮಾಡಿದ ಕಾರ್ತಿಕೆ ಯನ್ನು ಕಟ್ಟಿ ಗ್ರಾಮದ ಮನೆಗಳಿಂದ ದೀಪದ ಕಳಸವನ್ನು ತಂದು ದೇವರಿಗೆ ಸಮರ್ಪಿಸುವ ಕಾರ್ಯಕ್ರಮ ನಡೆಯಿತು. ದೇವಾಲಯದ ಅರ್ಚಕ ಅನಂತ್‍ರಾಮ್ ಪೌರೋಹಿತ್ಯದಲ್ಲಿ ಪೂಜಾ ಕಾರ್ಯಕ್ರಮ ನೆರವೇರಿತು.

ಈ ಸಂದರ್ಭ ಗ್ರಾಮದ ಅಧ್ಯಕ್ಷರಾದ ಕೆ.ಸಿ. ಉದಯ ಕುಮಾರ್, ಸಮಿತಿ ಸದಸ್ಯರು, ಯುವಕ ಸಂಘದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.