ಸೋಮವಾರಪೇಟೆ, ಸೆ. 27: ಇಲ್ಲಿನ ಕೊಡವ ಸಮಾಜದ ಆಶ್ರಯದಲ್ಲಿ ಕೈಲ್ ಮುಹೂರ್ತ ಸಂತೋಷ ಕೂಟ ಸಮಾರಂಭದ ಅಂಗವಾಗಿ ಏರ್ಪಡಿಸಲಾಗಿದ್ದ ಮಹಿಳೆಯರ ವಿಭಾಗದ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಗರ್ವಾಲೆಯ ಧರಣಿ ತಂಡ ಪ್ರಥಮ ಸ್ಥಾನ ಪಡೆಯಿತು.

ದ್ವಿತೀಯ ಬಹುಮಾನವನ್ನು ಕಿಕ್ಕರಳ್ಳಿಯ ವೀಣಾ ತಂಡ ಪಡೆಯಿತು. ಪುರುಷರ ವಿಭಾಗದ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಗರ್ವಾಲೆ ತಂಡ ಪ್ರಥಮ, ಸೂರ್ಲಬ್ಬಿ ತಂಡ ದ್ವಿತೀಯ ಸ್ಥಾನ, ಕುಸುಬೂರು ಎಸ್ಟೇಟ್ ತಂಡ ತೃತೀಯ ಸ್ಥಾನ ಪಡೆಯಿತು. ಸಂಗೀತ ಕುರ್ಚಿ ಸ್ಪರ್ಧೆಯ ಮಹಿಳೆಯ ವಿಭಾಗದಲ್ಲಿ ಮೇದುರ ಕಾವ್ಯ ಪ್ರಥಮ ಸ್ಥಾನ, ಕನ್ನಿಕಂಡ ವೀಕ್ಷಿತ ದ್ವಿತೀಯ ಸ್ಥಾನ ಪಡೆದರೆ, ಪುರುಷರ ವಿಭಾಗದಲ್ಲಿ ಮಾದಂಡ ಚಂಗಪ್ಪ ಪ್ರಥಮ, ಕೆ.ಪಿ. ದೇವಯ್ಯ ದ್ವಿತೀಯ ಸ್ಥಾನ ಪಡೆದರು.

ಬಾರದ ಗುಂಡು ಎಸೆತ ಮಹಿಳೆಯರ ವಿಭಾಗದಲ್ಲಿ ಪ್ರಥಮ ಮಲ್ಲಾಜ್ಜಿರ ಜ್ಯೋತಿ ಉಮೇಶ್, ಪುರುಷರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಓಂಕಾರಪ್ಪ ಪಡೆದರು.

ಮಕ್ಕಳ ವಿಭಾಗದಲ್ಲಿ ಕಾಳು ಹೆಕ್ಕುವ ಸ್ಪರ್ಧೆಯಲ್ಲಿ ಪುದಿಯತಂಡ ಪವನ್ ಪ್ರಥಮ, ಮಲ್ಲಾಜಿರ ರೋಹನ್ ತಮ್ಮಯ್ಯ ದ್ವಿತೀಯ, ಅನುಷ್ಕ ಮುತ್ತಣ್ಣ ತೃತೀಯ ಸ್ಥಾನ ಪಡೆದರು. ಕಪ್ಪೆ ಹಾರುವ ಸ್ಪರ್ಧೆಯಲ್ಲಿ ಅಮೀತ್ ಅಯ್ಯಪ್ಪ ಪ್ರಥಮ, ಪಿ.ಜಿ. ಹರ್ಷಿತ್ ದ್ವಿತೀಯ, ರಿವಿನ್ ಮುತ್ತಣ್ಣ ತೃತೀಯ ಸ್ಥಾನ ಪಡೆದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪ್ರಮುಖರು ಕ್ರೀಡಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.