ನಮ್ಮ ಪುಟ್ಟ ಕೊಡಗಿನಲ್ಲಿ ಪ್ರತಿನಿತ್ಯ ನಾನಾ ತೊಂದರೆಗಳು, ಧರ್ಮಗಳ ಮಧೆÉ್ಯ ಮುಸುಕಿನ ಗುದ್ದಾಟ, ಜಾತಿಗಳ ಮಧೆÉ್ಯ ಮನಸ್ತಾಪ, ಇನ್ನೂ ಒಂದು ಹೆಜ್ಜೆ ಮುಂದೆ ಹೋದರೆ ನಿರಾಶ್ರಿತರು ಎಂಬ ಹಣೆಪಟ್ಟಿ ಕಟ್ಟಿಕೊಂಡು ಎಲ್ಲಿಂದಲೋ ಬಂದವರೆಲ್ಲ ನಮಗೆ ಇಲ್ಲಿ ಬದುಕಲು ಜಾಗ ಕೊಡಿ ಎನ್ನುವ ವರ್ಗದವರಿಗೆ ಕೆಲವು ನಕ್ಸಲೈಟ್ ನಾಯಕರ ಬೆಂಬಲ, ವೋಟ್ ಬ್ಯಾಂಕ್ ಹೆಸರಲ್ಲಿ ಇಂತಹವರಿಗೆ ಮಣೆ ಹಾಕುತ್ತಿರುವ ಸರ್ಕಾರ. ಕಳೆದ 25 ವರ್ಷಗಳಿಂದ ಇಲ್ಲಿಯ ಮೂಲನಿವಾಸಿಗಳಾದ ಕೊಡವರ ಹಕ್ಕಿಗಾಗಿ ಹೋರಾಡುತ್ತ ಬಾಲಂಗೋಜಿ ಕಳೆದುಕೊಂಡ ಗಾಳಿಪಟದಂತೆ ಆಗಿರುವ ಕೆಲವರು. ಇನ್ನು ಜನಾಂಗಗಳ ಮಧೆÉ್ಯ ಒಡಕು ಮೂಡಿಸುತ್ತ ಒಂದೇ ಕೋಮಿನ ಜನರ ಓಲೈಕೆಯಲ್ಲಿ ತೊಡಗಿರುವ ಒಬ್ಬರು! ಇವೆಲ್ಲದರ ಮಧೆÉ್ಯ ಕೊಡಗಿನ ಭೂಪಟವನ್ನೇ ಬದಲಿಸುವಂತಹ ಮಾರಕ ಯೋಜನೆಗಳು. ಒಂದು ಯೋಜನೆ ಈಗಾಗಲೇ ದಕ್ಷಿಣ ಕೊಡಗಿನ ಮೂಲಕ ಹಾದು ಹೋಗಿ ಹಲವು ಜನರ ಬದುಕಿನ ಮೇಲೆ ಬರೆ ಎಳೆದಾಯಿತು. ಹೈಟೆನ್ಷನ್ ವಿದ್ಯುತ್ ಮಾರ್ಗದಲ್ಲಿ ನಿರಂತರ ವಾಗಿ ಸಾಯುತ್ತಿರುವ ಪ್ರಾಣಿ -ಪಕ್ಷಿಗಳನ್ನು ಕೇಳುವವರಿಲ್ಲ. ಮುಂದೆ ಹಸುಕೂಸುಗಳ ಮೇಲೂ ಪರಿಣಾಮ ಬೀರಿ ವಿಕಲಾಂಗರಾದರೆ ಯಾರನ್ನು ಕೇಳುವದು? ಇಲ್ಲಿ ಯಾವದೇ ರೀತಿಯ ಜೀವಹಾನಿ ಯಾದರೂ ಕೂಡ ಈ ಪ್ರದೇಶದ ಜನರು ಯಾರಿಗೂ ದೂರು ಕೊಡುವ ಹಾಗಿಲ್ಲ, ಏಕೆಂದರೆ ಅಂದು ಪವರ್ ಗ್ರೀಡ್ ಕಂಪೆನಿ ಯವರು ಪರಿಹಾರ ವಿತರಿಸುವಾಗ ಪ್ರತಿಯೊಬ್ಬರಿಂದಲೂ ಇನ್ನು ಮುಂದೆ ಈ ಮಾರ್ಗದಲ್ಲಿ ವಿದ್ಯುತ್ ಪ್ರಸಾರದಿಂದ ಯಾವದೇ ರೀತಿಯ ಜೀವ ಹಾನಿಯಾದರೆ ನಾವೇ ಜವಾಬ್ದಾರರು ಎಂಬ ಮುಚ್ಚಳಿಕೆಗೆ ಸಹಿ ಹಾಕಿ ಕೊಟ್ಟಿರುತ್ತಾರೆ. ಇನ್ನು ಕೆಲವರು ಇದರ ವಿರುದ್ಧ ಹೋರಾಟಕ್ಕೆ ಯಾವದೇ ರೀತಿಯ ಬೆಂಬಲ ನೀಡದೆ ಲಕ್ಷಗಟ್ಟಲೆ ಹಣ ಪಡೆದವರು ಬುದ್ಧಿವಂತರಾದರು. ಯಾವ ಪ್ರತಿಫಲವನ್ನೂ ನಿರೀಕ್ಷಿಸದೆ ಪರಿಸರದ ಉಳಿಕೆಗಾಗಿ ಇದರ ವಿರುದ್ಧ ಹೋರಾಡಿದವರು ಇಂದು ನ್ಯಾಯಾಲಯಗಳಿಗೆ ಅಲೆಯುತ್ತಿದ್ದಾರೆ.
ರಹಸ್ಯ ನಿರ್ಧಾರಗಳು!
ನಮ್ಮ ಜಿಲ್ಲೆಯಲ್ಲಿ ಯಾವದೇ ಒಂದು ಮಾರಕ ಯೋಜನೆಗಳು ಪ್ರಾರಂಭವಾಗುವಾಗ ಇಲ್ಲಿಯ ಜನರ ಒಪ್ಪಿಗೆಯಾಗಲಿ, ಸಹಮತವಾಗಲಿ, ಕನಿಷ್ಟ ಪಕ್ಷ ನಮ್ಮ ಅರಿವಿಕೆಗೂ ತಾರದೆ ಒಳಗೊಳಗೆ ಯೋಜನೆಗಳನ್ನು ಆರಂಭಿಸುತ್ತಿರುವದು ನಮ್ಮ ದುರಾದೃಷ್ಟವೇ ಸರಿ. ಎಲ್ಲಾ ಯೋಜನೆಗಳ ಪ್ರಾಥಮಿಕ ಹಂತ ಮುಗಿದು ಇನ್ನೇನು ಅನುಷ್ಠಾನ ಗೊಳ್ಳಲು ಮಾತ್ರ ಬಾಕಿ ಎನ್ನುವಾಗ ಅಲ್ಲಿ-ಇಲ್ಲಿ ಅಲ್ಪ-ಸ್ವಲ್ಪ ಜನರ ಹೋರಾಟ!! ಜನರಿಗೆ ಸರಿಯಾದ ಮಾಹಿತಿ ನೀಡಬೇಕಾದ ಜನ ಪ್ರತಿನಿಧಿಗಳು ಅಡ್ಡ ಗೋಡೆಯ ಮೇಲೆ ದೀಪವಿಟ್ಟಂತೆ ಹಾರಿಕೆಯ ಉತ್ತರ ನೀಡುತ್ತ ಕಾಲ ಕಳೆಯುತ್ತಿದ್ದಾರೆ! ಅತ್ತ ಹಾವೂ ಸಾಯಬಾರದು ಇತ್ತ ಕೋಲೂ ಮುರಿಯಬಾರದು ಎಂಬ ತತ್ವ ಇವರದು. ಇಂದು ‘ಈ’ ಸರಕಾರವೇ ಇರಲಿ ನಾಳೆ ‘ಆ’ ಸರಕಾರವೇ ಬರಲಿ ಯಾರಿಗೂ ಕೂಡ ಕೊಡಗು ಹಾಗೂ ಇಲ್ಲಿಯ ಮೂಲನಿವಾಸಿಗಳ ಮೇಲೆ ಪ್ರೀತಿ, ಅಕ್ಕರೆ ಯಾವದು ಇಲ್ಲ, ಬದಲಿಗೆ ಕೊಡಗು ಕೇವಲ ಒಂದು ‘ಚಿನ್ನದ ಮೊಟ್ಟೆ ಇಡುವ ಕೋಳಿ’! ಒಂದಲ್ಲ ಒಂದು ದಿನ ನಮ್ಮ ಹೊಟ್ಟೆಯನ್ನು ಬಗೆಯದೆ ಬಿಡುವದಿಲ್ಲ ಇವರು. ಯಾವದೆ ಸರಕಾರ ರಾಜ್ಯದ ಗದ್ದುಗೆ ಏರಿದರೂ ಅವರಿಗೆಲ್ಲ ‘ಕೊಡಗು’ ಒಂದು ಆಟದ ಮೈದಾನ ಅಷ್ಟೆ! ಹಾಗಾಗಿ ಇಂದು ಕೊಡಗು ಎಂಬ ಪುಣ್ಯ ಭೂಮಿ ಅನಾಚಾರಿಗಳ ಬೀಡಾಗುತ್ತಿದೆ.
ದಕ್ಷಿಣ ಕೊಡಗಿನ ಮೂಲಕ ಹೈಟೆನ್ಷನ್ ವಿದ್ಯುತ್ ಮಾರ್ಗ ವಾಯಿತು, ಉತ್ತರ ಕೊಡಗಿನ ಮೂಲಕ ಮಡಿಕೇರಿಂiÀiವರೆಗೆ ರೈಲು ಯೋಜನೆಗೆ ಈಗಾಗಲೇ ಹಸಿರು ನಿಶಾನೆ ನೀಡಿಯಾಯಿತು. ಇವುಗಳೆಲ್ಲವೂ ಯಾರ ಪಾಪದ ಕೂಸು ಎಂದು ಈಗ ಜನರಿಗೆ ಅರ್ಥ ವಾಗುತ್ತಿದೆ. ನಿಮ್ಮ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುತ್ತೇನೆ ಎಂಬ ಭರವಸೆಯ ಗಾಳಿ ಗೋಪುರವನ್ನು ಕಟ್ಟಿ ಗೆದ್ದು ಬಂದ ಜನ ಪ್ರತಿನಿಧಿಗಳು ಇಂದು ಏನೆನ್ನುತ್ತಾರೆ? ಅಂದು ವಿಧಾನ ಸಭಾಧ್ಯಕ್ಷರಾಗಿದ್ದಾಗ ಕೊಡಗು ಹಾಗೂ ಕೊಡಗಿನ ಜನರಿಗೆ ಯಾವದೇ ರೀತಿಯ ತೊಂದರೆಯಾದರೆ ನಾನು ಪ್ರತ್ಯೇಕ ರಾಜ್ಯದ ಬೇಡಿಕೆಯಿಡುತ್ತೇನೆ ಎಂಬ ಮಾತು ಕೇವಲ ಮಾತಾಗಿಯೇ ಉಳಿದಿದೆಯಲ್ಲ? ಈಗ ಮತ್ತೊಂದು ಮಾರಕ ಯೋಜನೆ ದಕ್ಷಿಣ ಕೊಡಗಿನಲ್ಲಿ ಪ್ರಾರಂಭವಾಗುವ ಎಲ್ಲಾ ಲಕ್ಷಣಗಳು ಎದ್ದು ಕಾಣಿಸುತ್ತಿದೆ. ಅದುವೇ ‘ಕೊಂಗಣ ಅಣೆಕಟ್ಟು ಯೋಜನೆ’ ಅಥವಾ ‘ಕೊಲ್ಲಿ ತೋಡು’ ತಿರುವು ಯೋಜನೆ. ಇದರ ಬಗ್ಗೆ ಸಂಬಂಧಪಟ್ಟ ವ್ಯಕ್ತಿಗಳನ್ನು ಕೇಳಿದರೆ ಈ ಯೋಜನೆಯಿಂದ ಯಾವದೇ ತೊಂದರೆಯಿಲ್ಲ ಕೇವಲ ನಾಲೆಗಳ ಮೂಲಕ ಕೊಂಗಣ ನದಿಯ ನೀರನ್ನು ಲಕ್ಷಣತೀರ್ಥ ನದಿಗೆ ಸೇರಿಸುವದು ಎಂದು ಎರಡು ವಾಕ್ಯದ ಉತ್ತರ ನೀಡುತ್ತಾರೆ. ಇನ್ನು ಸಾಮಾನ್ಯ ಜ್ಞಾನವಿರುವ ಯಾರನ್ನೇ ಕೇಳಿದರು ಸುಮಾರು 6.3ಮಿ. ಹಳ್ಳಕ್ಕೆ (ಕೇರಳಕ್ಕೆ) ಹರಿಯುವ ನೀರನ್ನು ಯಾವದೇ ರೀತಿಯಾಗಿ ತಡೆಮಾಡದೇ ಹೇಗೆ ತಾನೆ ದಿಬ್ಬದ ಕಡೆಗೆ (ಕಾನೂರು) ಬೇಗೂರು, ಬಲ್ಯಮಂಡೂರು ಮುಖಾಂತರ ಹರಿಸಲು ಸಾಧ್ಯ?
ಈ ಯೋಜನೆಯು ಇಂದು ನಿನ್ನೆಯದ್ದಲ್ಲ 2004ರಲ್ಲೇ ಕರ್ನಾಟಕ ರಾಜ್ಯದ ಸೂಪರಿಡೆಂಡೆಟ್ ಇಂಜಿನಿಯರ್ (ರಿ) ಆಗಿದ್ದ ಜಿ.ಎಸ್. ಪರಮಶಿವಯ್ಯ ಎಂಬ ಹೆಸರಾಂತ ನೀರಾವರಿ ತಜ್ಞ ‘ಆiveಡಿsoಟಿ oಜಿ Suಡಿಠಿಟus Wಚಿಣeಡಿs oಜಿ ಊಚಿಟಟಚಿs ಜಿಟoತಿiಟಿg Wesಣ ಚಿಟಿಜ ಇಚಿsಣ ’ ಎಂಬ ಸುಮಾರು 200 ಪುಟಗಳ ವರದಿಯನ್ನು ಆಗಿನ ಸರಕಾರಕ್ಕೆ ಕೊಟ್ಟಿದ್ದು ಅದರಲ್ಲಿ ಕೊಡಗಿನ ಎರಡು ಯೋಜನೆಗಳಾದ “ ಃಚಿಡಿಚಿಠಿoಟe ಒiಟಿi ಊಥಿಜಡಿo ಇಟeಛಿಣಡಿiಛಿiಣಥಿ Pಡಿoರಿeಛಿಣ” “ ಏoಟಿgಚಿಟಿಚಿ ಅheಛಿಞ ಆಚಿm” ಎಂಬ ಯೋಜನೆಗಳು ಇದೆ. ಇವರ ಪ್ರಕಾರ ಇದನ್ನು “ ಉಚಿಡಿಟಚಿಟಿಜ ಅಚಿಟಿಚಿಟs” ಎಂದು ಕರೆಯುತ್ತಾರೆ. ಒಂದು ನದಿಯಿಂದ ಮತ್ತೊಂದು ನದಿಗೆ ನೀರನ್ನು ಜೋಡಿಸುವ ಯೋಜನೆ. “ ಖಿತಿo ಉಚಿಡಿಟಚಿಟಿಜ ಅಚಿಟಿಚಿಟs ಣo ಅoಟಟeಛಿಣ Wಚಿಣeಡಿ oಜಿ Wesಣ ಈಟoತಿiಟಿg ಊಚಿಟಟಚಿs ಃಥಿ ಉಡಿಚಿviಣಥಿ iಟಿ ಣhe ಅಚಿಣಛಿhmeಟಿಣ ಚಿಡಿeಚಿ oಜಿ ಏoಜಚಿgu ಆisಣಡಿiಛಿಣ” ಛಿಚಿಣಛಿhmeಟಿಣ ಚಿಡಿeಚಿ is ಚಿbouಣ 78sq mಣs uಠಿಣo 411ಞms ಥಿieಟಜiಟಿg uಠಿಣo 15 ಣo 20 ಖಿಒಅ Wಚಿಣeಡಿ.
ಈieಟಜ suಡಿveಥಿs ತಿಚಿs ಛಿoಟಿಜuಛಿಣeಜ ಜuಡಿiಟಿg 1972-74 ಜಿoಡಿ gಡಿಚಿviಣಥಿ ಜiveಡಿsioಟಿ oಜಿ 20 ಖಿಒಅ ತಿಚಿಣeಡಿ bಥಿ ಛಿoಟಿsಣಡಿuಛಿಣiಟಿg ಣತಿo ಂಟಿiಛಿuಣs ಚಿಛಿಡಿoss ಏಚಿಞಚಿಣಣu ಊoಟe ಚಿಟಿಜ ಏoಟಿgಚಿಟಿಚಿ ಊoಟe ಣhe ಣಡಿibuಣಚಿಡಿies oಜಿ ಃಚಿಡಿಚಿಠಿoಟe ಡಿiveಡಿ. ಖಿhe ತಿಚಿಣeಡಿ ತಿiಟಟ be ಟeಚಿಜ iಟಿಣo ಐಚಿxmಚಿಟಿಚಿ ಖಿhiಡಿಣಚಿ ಖiveಡಿ ಚಿಟಿಜ uಣiಟizeಜ ಜಿoಡಿ iಡಿಡಿigಚಿಣioಟಿ ಚಿಟಿಜ ಜಡಿiಟಿಞiಟಿg ಠಿuಡಿಠಿose.
03-07-2004 ರಲ್ಲಿ ಅಂದಿನ ಪ್ರಿನ್ಸಿಪಾಲ್ ಸೆಕ್ರೆಟರಿರವರು ಈ ಯೋಜನೆಗೆ ಅಂದಿನ ಮುಖ್ಯ ಮಂತ್ರಿಗಳ ಒಪ್ಪಿಗೆ ಪಡೆದಿರುತ್ತಾರೆ.
“ಅhieಜಿ ಒiಟಿisಣeಡಿ hಚಿs oಡಿಜeಡಿeಜ ಣhಚಿಣ ಣhe ತಿoಡಿಞ ಠಿeಡಿಣಚಿiಟಿiಟಿg ಣo ಛಿoಟಿಜuಛಿಣiಟಿg suಡಿveಥಿ iಟಿಡಿesಠಿeಛಿಣive oಜಿ ಡಿeಛಿhಚಿಡಿgiಟಿg ಣhe ತಿಚಿಣeಡಿ ಟeveಟs ಚಿs ಡಿeಛಿommeಟಿಜeಜ bಥಿ exಠಿeಡಿಣ ಛಿommiಣಣee heಚಿಜeಜ bಥಿ Sಡಿi. ಉ.S.Pಚಿಡಿಚಿmಚಿshivಚಿiಚಿh beeಟಿ iಟಿಛಿಟuಜeಜ iಟಿ ಣhe buಜgeಣ oಜಿ 2004-05.
ಈ ಒಂದು ಯೋಜನೆಗೆ ಅಂದಿನಿಂದಲೆ ಪ್ರಸ್ತಾಪಗಳು ಪದೇ ಪದೇ ವಿಧಾನಸೌಧದಲ್ಲಿ ಚರ್ಚೆಗೆ ಬರುತ್ತಿತ್ತು. ಅರುಣ್ ಮಾಚಯ್ಯ ಅವರು ಎಂ.ಎಲ್.ಸಿ ಆಗಿದ್ದಾಗಲೂ ಈ ಯೋಜನೆಯ ಬಗ್ಗೆ ಗಂಭೀರ ಚರ್ಚೆಗಳು ನಡೆದಿದ್ದವು. ಆದರೆ, ಅಂದು ಯಾವದೇ ಜನ ನಾಯಕರು ಇದರ ಬಗ್ಗೆ ಹೆಚ್ಚಿನ ಆಸಕ್ತಿ ತೋರದ ಕಾರಣ ಇದು ಹಾಗೆಯೇ ಉಳಿದಿತ್ತು. ತಾ. 09-12-2016ರಂದು ಹುಣಸೂರು ಕ್ಷೇತ್ರದ ಶಾಸಕ ಹೆಚ್.ಪಿ. ಮಂಜುನಾಥ್ ಅವರು ಈ ಯೋಜನೆಯ ರೂಪುರೇಷೆಗಳನ್ನು ಪತ್ರಿಕಾಗೋಷ್ಠಿ ನಡೆಸುವ ಮೂಲಕ ತಮ್ಮ ಕ್ಷೇತ್ರದ ಜನರಿಗೆ ತಿಳಿಸಿದ್ದಲ್ಲದೇ ಇದರ ಬಗ್ಗೆ ಕೊಡಗಿನ ಶಾಸಕರ ಜೊತೆ ಚರ್ಚಿಸುತ್ತೇನೆ ಎಂದು ಹೇಳಿದ ವಿಚಾರ ಈ ಭಾಗದ ಜನರÀ ನಿದ್ದೆಗೆಡಿಸಿದೆ. ಈ ಯೋಜನೆ ಏನಾದರೂ ಅನುಷ್ಠಾನಗೊಂಡರೆ ದ.ಕೊಡಗಿನ ಸುಮಾರು 15 ಗ್ರಾಮಗಳು ತೊಂದರೆಗೆ ಸಿಲುಕುತ್ತವೆ. ಅದೂ ಅಲ್ಲದೇ ಇದರಿಂದ ನಮ್ಮ ಜಿಲ್ಲೆಗೆ ಯಾವದೇ ಪ್ರಯೋಜನವಿಲ್ಲ. ಮಳೆಗಾಲದಲ್ಲಿ ಪ್ರವಾಹ ಭೀತಿ ಹೆಚ್ಚಾಗಲಿದೆ, ಸ್ಥಳೀಯ ಜನರ ಬದುಕು ಸಂಕಷ್ಟಕ್ಕೆ ಸಿಲುಕಲಿದೆ. ಇದರ ವಿರುದ್ಧ ಹೋರಾಟ ಅನಿವಾರ್ಯ. ಅಂದಿನ ಹೈಟೆನ್ಷನ್ ವಿದ್ಯುತ್ ಮಾರ್ಗದ ವಿರುದ್ಧದ ಹೋರಾಟದ ತರಹ ಇದಾಗ ಬಾರದು. “ಬಾಳೆಹಣ್ಣು ತಿಂದವ ಜಾರಿಕೊಂಡ, ಸಿಪ್ಪೆ ಹಿಡಿದು ಕೊಂಡವ ಸಿಕ್ಕಾಕಿಕೊಂಡ” ಎಂದಾಗ ಬಾರದು. ಜನರ ಹೋರಾಟವೇ ಮುಖ್ಯವಿಲ್ಲಿ. ರಾಜಕೀಯ ಪಕ್ಷಗಳ ಹೇಳಿಕೆಗಳು, ಆಶ್ವಾಸನೆಗಳು, ಭರವಸೆಗಳು ಯಾವದೇ ಪ್ರಯೋಜನವಿಲ್ಲ. ರಸ್ತೆಗಳ ಗುಂಡಿಗೆ ತೇಪೆ ಹಾಕುವಂತಹ ಉತ್ತರಗಳಿಗೆ ಜನರು ಮರುಳಾಗಬಾರದು. ತಮ್ಮ ನಿಲುವನ್ನು ಬಲಪಡಿಸಿಕೊಂಡು ಹೋರಾಡಬೇಕಾಗಿದೆ. ಇಲ್ಲವಾದಲ್ಲಿ ನಮ್ಮ ಕೊರಳನ್ನು ನಾವೇ ಉರುಳಿಗೆ ಕೊಟ್ಟಂತೆ.