ಸೋಮವಾರಪೇಟೆ, ಜ. 16: ಕೊಡವ ಸಂಸ್ಕøತಿಯ ಭಾಗವಾಗಿರುವ ಆಟ್-ಪಾಟ್, ಆಚಾರ-ವಿಚಾರ ಹಾಗೂ ಪದ್ಧತಿ-ಪರಂಪರೆಗಳನ್ನು ಅನಾದಿ ಕಾಲದಿಂದ ಉಳಿಸಿ ಪೋಷಿಸಿಕೊಂಡು ಬಂದಿರುವ ಸೂರ್ಲಬ್ಬಿ ನಾಡಿನ ಪರಂಪರೆಯ ಬೇರನ್ನು ಮುಂದಿನ ಪೀಳಿಗೆಗೂ ಉಳಿಸುವ ಕಾರ್ಯ ನಡೆಯಬೇಕಿದೆ ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ ಕರೆ ನೀಡಿದರು.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಸೂರ್ಲಬ್ಬಿ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಆಟ್-ಪಾಟ್-ಪಡಿಪು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯು ವಿವಿಧ ಧರ್ಮ ಜನಾಂಗಗಳ ಸಮ್ಮಿಲನದೊಂದಿಗೆ ಸಹ ಬಾಳ್ವೆ ನಡೆಸುವ ಸುಂದರ ಹೂತೋಟ. ಇಲ್ಲಿ ಯಾವದೇ ಹೂವು ಕೊಳೆತರೂ ಇಡೀ ತೋಟಕ್ಕೇ ದುರ್ವಾಸನೆ ಸೂಸುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಪರಸ್ಪರ ಗೌರವಯುತವಾಗಿ ಬದುಕಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ವÉೀದಿಕೆಯಲ್ಲಿ ಅಖಿಲ ಕರ್ನಾಟಕ ಪರಿಸರ ಜಾಗೃತಿ ವೇದಿಕೆಯ ಜಿಲ್ಲಾ ಅಧ್ಯಕ್ಷ ಚಾಮೇರ ದಿನೇಶ್, ನಾಡಿನ ಅಧ್ಯಕ್ಷ ಮುದ್ದಂಡ ತಿಮ್ಮಯ್ಯ, ಎಸ್.ಡಿ.ಎಂ.ಸಿ. ಅಧ್ಯಕ್ಷ ಕನ್ನಿಕಂಡ ಕುಟ್ಟಪ್ಪ, ಚಿಲ್ಲಜಮ್ಮಂಡ ಯೋಗಾತ್ಮ, ಮುದ್ದಂಡ ನಾಣ್ಯಪ್ಪ ಮುಖ್ಯೋಪಾಧ್ಯಾ ಯರಾದ ವೆಂಕಟೇಶ್‍ನಾಯಕ್, ಆಟ್-ಪಾಟ್-ಪಡಿಪುಕಾರರಾದ ಮೇದುರ ಪೂವಯ್ಯ, ತೆಕ್ಕೆರ ರಶ್ಮಿ ತಮ್ಮಯ್ಯ, ಕನ್ನಿಗಂಡ ನೀಲಮ್ಮ ಹಾಜರಿದ್ದರು.

ಶಿಕ್ಷಕ ಕುಂಬುಗೌಡನ ರಂಜಿತ್ ನಿರೂಪಿಸಿ, ದೈಹಿಕ ಶಿಕ್ಷಕ ಮಂಜುನಾಥ್ ಸ್ವಾಗತಿಸಿದರೆ, ಸಹ ಶಿಕ್ಷಕ ರಜಿತ್ ವಂದಿಸಿದರು.