ಸುಂಟಿಕೊಪ್ಪ, ಜು. 25: ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ರೂ. 1,000 ಮತ್ತು 500 ಖೋಟಾ ನೋಟುಗಳು ಚಲಾವಣೆಗೊಳ್ಳು ತ್ತಿದ್ದು, ವ್ಯಾಪಾರಸ್ಥರು ಹಾಗೂ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ನಿಮಗೆ ಯಾರಾದರೂ 1,000 ಮತ್ತು 500 ನೋಟುಗಳನ್ನು ನೀಡಿದಾಗ ಸರಿಯಾಗಿ ಪರೀಕ್ಷಿಸಿಕೊಳ್ಳದಿದ್ದರೆ ನೀವು ನಿಮ್ಮ ಹಣವನ್ನು ಕಳೆದು ಕೊಳ್ಳುವದು ಖಂಡಿತ. ಇದಕ್ಕೆ ಪುಷ್ಠೀಕರಿಸುವ ಉದಾಹರಣೆ ಇಲ್ಲಿದೆ.

ಸುಂಟಿಕೊಪ್ಪ ಪಟ್ಟಣದ ಹೃದಯ ಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೆಟ್ರೋಲ್ ಬಂಕ್‍ನಲ್ಲಿ ತಾ. 23 ರಂದು ಬೆಳಿಗ್ಗೆ ವಾಹನವೊಂದಕ್ಕೆ ಡಿಸೇಲ್ ಹಾಕಿಸಿಕೊಂಡು ರೂ. 500 ನೀಡಿದ್ದು, ಅಲ್ಲಿನ ಕಾರ್ಮಿಕ ನೋಡಲಾಗಿ ಅದು ಖೋಟಾ ನೋಟು ಎಂಬದು ಪತ್ತೆಯಾಗಿದೆ. ಇದಕ್ಕೂ ಮೊದಲು ಹಲವು ಖೋಟಾ ನೋಟುಗಳು ಇಲ್ಲಿನ ಪೆಟ್ರೋಲ್ ಬಂಕ್‍ಗೆ ದೊರೆತಿರುವ ಬಗ್ಗೆ ಅಳಲನ್ನು ತೋಡಿಕೊಂಡಿದ್ದಾರೆ.

ಪಟ್ಟಣದ ವ್ಯಾಪಾರಸ್ಥರು ಇಂತಹ ಖೋಟಾ ನೋಟುಗಳು ದೊರೆತು ಹಣ ಕಳೆದುಕೊಂಡ ಪ್ರಕರಣಗಳು ವರದಿಯಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಖೋಟಾ ನೋಟು ಚಲಾವಣಾ ಜಾಲವನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.