ಮಡಿಕೇರಿ, ಜು. 12: ವಾಹನ ನಿಲುಗಡೆ ಪ್ರದೇಶವಾಗಿ ಮಾರ್ಪಟ್ಟು ಕೆಸರಿನ ಕೊಂಪೆಯಾಗಿರುವ ಗಾಂಧಿ ಮೈದಾನದ ರಕ್ಷಣೆಗೆ ಮಡಿಕೇರಿ ನಗರಸಭೆ ಕ್ರಮಕೈಗೊಂಡಿದೆ. ಮೈದಾನಕ್ಕೆ ತಂತಿ ಬೇಲಿ ಅಳವಡಿಸುವದರ ಮೂಲಕ ಸ್ಪಂದಿಸಿದೆ.ಮೈದಾನದ ದುಸ್ಥಿತಿ ಬಗ್ಗೆ ನಿನ್ನೆ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯ ಚುಮ್ಮಿದೇವಯ್ಯ ಪ್ರಶ್ನಿಸಿದ್ದರು. ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದರು. ಇತರ ಸದಸ್ಯರುಗಳು ಕೂಡ ಧನಿಗೂಡಿಸಿದ್ದರು. ಕೂಡಲೇ ಸ್ಪಂದಿಸಿರುವ ನಗರಸಭೆ ಇಂದು ಬೇಲಿ ಅಳವಡಿಸಿದೆ.ತನಿಖೆಗೆ ಆಗ್ರಹನಿನ್ನೆ ನಡೆದ ಸಭೆಯಲ್ಲಿ ಕೆಲವೊಂದು ಗಂಭೀರ ವಿಚಾರಗಳ ಬಗ್ಗೆ ಸದಸ್ಯರುಗಳು ಗಮನ ಸೆಳೆದರು. ಸಾಮಾನ್ಯ ಸಭೆಯಲ್ಲಿ ಕೈಗೊಳ್ಳುವ ಯಾವದೇ ನಿರ್ಣಯಗಳು ಕಾರ್ಯರೂಪಕ್ಕೆ ಬರುವದಿಲ್ಲ; ಯಾವದೇ ಕ್ರಮ ಆಗುತ್ತಿಲ್ಲ; ಬಿಲ್ ಕಲೆಕ್ಟರ್ ಸಜಿತ್ ಕುಮಾರ್ 67 ಲಕ್ಷದಷ್ಟು ಹಣ ದುರುಪಯೋಗ ಮಾಡಿಕೊಂಡಿದ್ದರೂ ಆತನ ಮೇಲೆ ಕೇವಲ 420 ಸೆಕ್ಷನ್‍ನಡಿ ಮೊಕದ್ದಮೆ ದಾಖಲಿಸಿದ್ದು, ಆತ ಜಾಮೀನು ಪಡೆದು ಹೊರ ಬಂದಿದ್ದಾನೆ. ಸಿಓಡಿ ತನಿಖೆಗೆ ಒಳಪಡಿಸಬೇಕೆಂದು ಸಾಕಷ್ಟು ಬಾರಿ ಆಗ್ರಹಿಸಿದ್ದರೂ ಕ್ರಮ ಆಗಿಲ್ಲವೆಂದು ಸದಸ್ಯ ಅಮೀನ್ ಮೊಹಿಸಿನ್ ಅಸಮಾಧಾನ ವ್ಯಕ್ತಪಡಿಸಿದರು. ಇತರ ಸದಸ್ಯರುಗಳು ಇದಕ್ಕೆ ಧನಿಗೂಡಿಸಿದ ಬಳಿಕ ತನಿಖೆಗೆ ಒಳಪಡಿಸಲು ತೀರ್ಮಾನಿಸಲಾಯಿತು.ಮಹದೇವಪೇಟೆ ರಸ್ತೆ ದುರಸ್ತಿ ಕಾಮಗಾರಿ ವಿಳಂಬವಾಗಿರುವದರಿಂದ ವಾಹನಗಳು ಇತರ ರಸ್ತೆಗಳಲ್ಲಿ ಸಂಚರಿಸುತ್ತಿದ್ದು,

ಎಲ್ಲ ರಸ್ತೆಗಳೂ ಹಾಳಾಗುತ್ತಿವೆ. ಸಾರ್ವಜನಿಕ ವಾಹನ ನಿಲುಗಡೆಗೆ ಸಮಸ್ಯೆಯಾಗುತ್ತಿದೆ. ಇಂದಿರಾಗಾಂಧಿ ವೃತ್ತದ ಬಳಿ ಖಾಸಗಿಯವರು ಕಟ್ಟಡ ಕಾಮಗಾರಿ ನಿರ್ಮಾಣಕ್ಕೆಂದು ಮಣ್ಣು ತೆಗೆದಾಗ ರಸ್ತೆಗೆ ತೊಂದರೆಯಾಗಿದೆ. ಇದೀಗ ಅಲ್ಲಿ ತಡೆಗೋಡೆ ಕಾಮಗಾರಿ ನಡೆಯುತ್ತಿರುವದರಿಂದ ವಾಹನ ನಿಲುಗಡೆಗೆ ಸ್ಥಳಾವಕಾಶವಿಲ್ಲದಂತಾಗಿದೆ. ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಸದಸ್ಯೆ ತಜಸ್ಸುಂ ಹೇಳಿದರು.

ಮಹದೇವಪೇಟೆ ರಸ್ತೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕೆಂದು ಒತ್ತಾಯಿಸಿದರು. ಮಾರುಕಟ್ಟೆ ಬಳಿಯ ಜಾಗದಲ್ಲಿ ಮಣ್ಣು ಗಾಂಧಿ ಮೈದಾನಕ್ಕೆ ಬೇಲಿ