ಮಡಿಕೇರಿ, ಸೆ. 25: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ಗೋ - ಯುನೆಸ್ಕೋ ಸಂಸ್ಥೆಯ ಸಹಕಾರದೊಂದಿಗೆ ಇಂದು ನಗರದಲ್ಲಿ ‘ ಗೋ ಹೆರಿಟೇಜ್ ರನ್ - ಕೂರ್ಗ್’ ಮ್ಯಾರಥಾನ್ ಓಟ ನಡೆಯಿತು.

ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ 21 ಕಿ.ಮೀ. ಓಟಕ್ಕೆ ಜಿಲ್ಲಾಧಿಕಾರಿ ಆರ್.ವಿ. ಡಿಸೋಜ, 10 ಕಿ.ಮೀ. ಓಟಕ್ಕೆ ಶಾಸಕ ಅಪ್ಪಚ್ಚು ರಂಜನ್ ಚಾಲನೆ ನೀಡಿದರು. ಸುಮಾರು 200 ಮಂದಿ ಓಟದಲ್ಲಿ ಭಾಗವಹಿಸಿದ್ದರು. ಶಾಸಕ ಅಪ್ಪಚ್ಚು ರಂಜನ್ 2.50 ಕಿ.ಮೀ. ಜಿ.ಪಂ. ಸಿಇಓ ಚಾರುಲತಾ ಸೋಮಲ್ ಹಾಗೂ ಅರಣ್ಯಾಧಿಕಾರಿ ಏಡುಕೊಂಡಲು ಇವರುಗಳು 21 ಕಿ.ಮೀ. ಓಡಿ ಗಮನ ಸೆಳೆದರು.