ಮಡಿಕೇರಿ, ಆ. 31: ವಿವಿಧ ಗ್ರಾ.ಪಂ. ಗಳಲ್ಲಿ ತೆರವಾಗಿದ್ದ ಸದಸ್ಯತ್ವ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಮಾಲ್ದಾರೆಯಲ್ಲಿ ಬಿಜೆಪಿ ಗೆಲವು ಸಾಧಿಸಿದೆ.

ಸೋಮವಾರಪೇಟೆ : ತಾಲೂಕಿನ ಶನಿವಾರಸಂತೆ ಗ್ರಾಮ ಪಂಚಾಯಿತಿಗೆ ತೆರವಾಗಿದ್ದ ಒಂದು ಸ್ಥಾನಕ್ಕೆ ನಡೆದ ಉಪಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಅದಿತ್ಯ ವಿಜಯ ಸಾಧಿಸಿದ್ದಾರೆ.

ಇಲ್ಲಿನ ತಾಲೂಕು ಪಂಚಾಯಿತಿಯ ಚುನಾವಣಾ ಶಾಖೆಯ ಸಭಾಂಗಣದಲ್ಲಿ ನಡೆದ ಮತ ಎಣಿಕೆ ಕಾರ್ಯ ಬೆಳಿಗ್ಗೆ 8 ಗಂಟೆಗೆ ತಾಲೂಕು ದಂಡಾಧಿಕಾರಿ ಬಿ.ಸಿ. ಶಿವಪ್ಪ ಅವರ ಸಮ್ಮುಖದಲ್ಲಿ ನಡೆಯಿತು. ಕಾಂಗ್ರೆಸ್ ಬೆಂಬಲಿತ ಆಭ್ಯರ್ಥಿ ಅದಿತ್ಯ 372 ಮತಗಳನ್ನು ಗಳಿಸಿ ವಿಜಯ ಸಾಧಿಸಿದರೆ, ಬಿಜೆಪಿ ಬೆಂಬಲಿತ ಅಭ್ಯರ್ಥಿ ಪುನಿತ್ 266 ಮತಗಳನ್ನು ಗಳಿಸಿದರೆ, ಪಕ್ಷೇತರ ಅಭ್ಯರ್ಥಿಯಾಗಿದ್ದ ಹರೀಶ್ 38 ಮತಗಳನ್ನು ಗಳಿಸಿ ಪರಾಭವ ಗೊಂಡರು. 7 ಮತಗಳು ತಿರಸ್ಕøತಗೊಂಡಿತ್ತು. ಚುನಾವಣಾ ಧಿಕಾರಿಗಳಾಗಿ ಕಾರ್ಯನಿರ್ವಹಿಸಿದ್ದ ಶಿಕ್ಷಣ ಇಲಾಖೆಯ ರಾಮಚಂದ್ರ ಮೂರ್ತಿ ಆದಿತ್ಯ ಎಂಬವರು ಜಯ ಸಾಧಿಸಿದ್ದಾರೆ ಎಂದು ಘೋಷಿಸಿ, ಅರ್ಹತಾ ಪತ್ರ ನೀಡಿದರು. ಮತ ಎಣಿಕೆ ಸಂದರ್ಭ

(ಮೊದಲ ಪುಟದಿಂದ) ಸಹಾಯಕ ಚುನಾವಣಾಧಿಕಾರಿಯಾಗಿ ಪುಟ್ಟರಾಜು ಸೇರಿದಂತೆ ತಾ.ಪಂ. ಸಿಬ್ಬಂದಿಗಳು ಇದ್ದರು.

ಶನಿವಾರಸಂತೆ ಗ್ರಾ.ಪಂ.ನ 1ನೇ ವಾರ್ಡ್‍ಗೆ ಕಳೆದ ಬಾರಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಅನಂತ್‍ಕುಮಾರ್ ಎಂಬವರು ಚುನಾವಣೆಯಲ್ಲಿ ಸ್ಪರ್ಧಿಸಿ ಜಯ ಸಾಧಿಸಿದ್ದರು. ನಂತರದ ದಿನಗಳಲ್ಲಿ ತಾಲೂಕು ಪಂಚಾಯಿತಿಗೆ ನಡೆದ ಚುನಾವಣೆಯಲ್ಲಿ ಶನಿವಾರಸಂತೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಅನಂತ್‍ಕುಮಾರ್ ಸ್ಪರ್ಧಿಸಿ ಜಯ ಸಾಧಿಸಿ, ಈ ಹಿಂದೆ ಇದ್ದ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ತೆರವಾಗಿದ್ದ ಗ್ರಾ.ಪಂ.ನ ಒಂದು ಸ್ಥಾನಕ್ಕೆ ಆ. 28 ರಂದು ಮತದಾನ ನಡೆದಿತ್ತು. ಇಂದು ಮತ ಎಣಿಕೆ ಕಾರ್ಯ ನಡೆಯಿತು. ಈ ಸಂದರ್ಭ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್, ತಾ.ಪಂ ಸದಸ್ಯರಾದ ಸತೀಶ್, ಅನಂತ್ ಕುಮಾರ್, ಪ್ರಮುಖರುಗಳಾದ ಚೇತನ್ ಹಾಜರಿದ್ದು, ನೂತನ ಗ್ರಾ.ಪಂ ಸದಸ್ಯ ಆದಿತ್ಯ ಅವರನ್ನು ಅಭಿನಂದಿಸಿದರು.

ಸಿದ್ದಾಪುರÀ : ಮಾಲ್ದಾರೆ ಗ್ರಾ.ಪಂ ಉಪಚುನಾವಣೆಯಲ್ಲಿ ಬಿ.ಜೆ.ಪಿ ಅಭ್ಯರ್ಥಿ ಪವಿತ್ರ ಗೆಲುವು ಸಾಧಿಸಿದ್ದಾರೆ. ಮಾಲ್ದಾರೆ ಗ್ರಾ.ಪಂ ಸದಸ್ಯೆಯಾಗಿದ್ದ ಚಿನ್ನಮ್ಮ ತಾ.ಪಂ. ಸ್ಪರ್ದಿಸಿ ಗೆಲುವು ಸಾದಿಸಿದ್ದು, ತೆರವಾದ ಸ್ಥಾನಕ್ಕೆ ಕಾಂಗ್ರೆಸ್‍ನಿಂದ ತಾ.ಪಂ. ಸದಸ್ಯೆ ಚಿನ್ನಮ್ಮ ಅವರ ಪುತ್ರಿ ನಂದಿನಿ ಹಾಗೂ ಬಿ.ಜೆ.ಪಿ ಯಿಂದ ಪವಿತ್ರ ಸ್ಪರ್ಧಿಸಿದ್ದು, ಪವಿತ್ರ ಗೆಲುವು ಸಾಧಿಸಿದ್ದಾರೆ.

ತದನಂತರ ಬಿಜೆಪಿ ಮುಖಂಡ ಅಜಿತ್ ಕರುಂಬಯ್ಯ ನೇತೃತ್ವದಲ್ಲಿ ಮಾಲ್ದಾರೆ ಗ್ರಾ.ಪಂ ಮುಂದೆ ಬಿ.ಜೆ.ಪಿ ಕಾರ್ಯಕರ್ತರು ಹಾಗೂ ಸದಸ್ಯರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಪವಿತ್ರ ಮಾತನಾಡಿ, ಬಿಜೆಪಿ ಆಡಳಿತದಲ್ಲಿರುವ ಗ್ರಾ.ಪಂ.ಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಪಕ್ಷಾತೀತವಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತೇವೆ ಎಂದು ಹೇಳಿದರು.

ಈ ಸಂದರ್ಭ ಗ್ರಾ.ಪಂ ಅಧ್ಯಕ್ಷೆ ರಾಣಿ, ಉಪಾಧ್ಯಕ್ಷ ರಾಜು, ಸದಸ್ಯರಾದ ರಘು ಕರುಂಬಯ್ಯ, ಸತೀಶ್, ವಾರಿಜಾ, ಪದ್ಮ, ಪಾರ್ವತಿ, ರುದ್ರಪ್ಪ ಮತ್ತು ಹೇಮಾವತಿ ಹಾಗೂ ಪ್ರಮುಖರಾದ ಸೂದನ ಸತೀಶ್, ಜೋಸೆಫ್, ಲೋಕೇಶ್, ಶಿವಕುಮಾರ್, ದಿವಾಕರ್, ಪ್ರಮೋದ್, ದೆವಯ್ಯ, ಬೆಳ್ಳಿಯಪ್ಪ, ಕುಶಾಲಪ್ಪ, ಕಾರ್ಯಪ್ಪ, ತಮ್ಮಯ್ಯ, ಆನಂದ್ ಸೇರಿದಂತೆ ಮತ್ತಿತರರು ಇದ್ದರು.

ಕಾನೂರು: ಕಾನೂರು ಗ್ರಾಮ ಪಂಚಾಯಿತಿಯ 2ನೇ ವಾರ್ಡ್‍ನ ಸದಸ್ಯ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ವೈ.ಎಂ. ಅಯ್ಯಪ್ಪ ಜಯಬೇರಿ ಬಾರಿಸಿದ್ದಾರೆ. 84 ಮತಗಳ ಅಂತರದಿಂದ ಅಯ್ಯಪ್ಪ ಜಯಗಳಿಸಿದ್ದು 207 ಮತಗಳು ಪಡೆದಿದ್ದಾರೆ. 8 ಮತಗಳು ಅಸಿಂಧು ವಾಗಿದ್ದವು.