ಮಡಿಕೇರಿ, ಅ.14 : ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಅರೆಭಾಷೆ ಸಂಸ್ಕøತಿ ಸಿರಿ ಮತ್ತು ಸಾಹಿತ್ಯ ಸುಗ್ಗಿಯ ಕೂಡುಕೂಟ ಕಾರ್ಯಕ್ರಮ ತಾ.16 ರಂದು ಚೆಂಬು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆಯಲಿದೆ ಎಂದು ಅಕಾಡೆಮಿಯ ಅಧ್ಯಕ್ಷರಾದ ಕೊಲ್ಯದ ಗಿರೀಶ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಭಾನುವಾರ ನಡೆಯುವ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು. ಅರೆಭಾಷೆ ಸಂಸ್ಕøತಿಯನ್ನು ಪ್ರತಿಬಿಂಬಿಸುವ ಕಾರ್ಯಕ್ರಮವನ್ನು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಜಿ.ಬೋಪಯ್ಯ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಚೆಂಬು ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಮಾಧವ ಪೊಯ್ಯಮಜಲು, ತಾಲೂಕು ಪಂಚಾಯ್ತಿ ಅಧ್ಯಕ್ಷರಾದ ತೆಕ್ಕಡೆ ಶೋಭಾ ಮೋಹನ್, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಕೆ.ಪಿ.ಚಂದ್ರಕಲಾ, ಕುಮಾರ್, ಅಕಾಡೆಮಿ ಮಾಜಿ ಅಧ್ಯಕ್ಷರಾದ ಎನ್.ಎಸ್.ದೇವಿಪ್ರಸಾದ್, ಸಾಹಿತಿ ದಾಮೋದರ ಕುಂಞತೋಡು, ಚೆಂಬು ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷರಾದ ವಾಸುದೇವ ಕಾಚೇಲು ಹಾಗೂ ಶ್ರೀ ಕಿನಿಮಣಿ ದೇವಸ್ಥಾನದ ಮೊಕ್ತೇಸರರಾದ ರಾಧಾಕೃಷ್ಣ ಹೊಸೂರು ಉಪಸ್ಥಿತರಿರುವರು.

ಅರೆಭಾಷಿಕರ ಚಿಂತನ ಮಂಥನ ವಿಚಾರಗೋಷ್ಠಿ ನಡೆಯಲಿದ್ದು, ಚಿಂತಕರಾದ ಗೋಪಾಲ ಪೆರಾಜೆ ಅಧ್ಯಕ್ಷತೆ ವಹಿಸಲಿದ್ದಾರೆ. ಅರೆಭಾಷೆ ಸಂಸ್ಕøತಿಯ ಬೆಳವಣಿಗೆಯಲ್ಲಿ ಮಹಿಳೆಯ ಪಾತ್ರದ ಕುರಿತು ಸುಳ್ಯದ ಶಾರದಾ ಕಾಲೇಜಿನ ಉಪನ್ಯಾಸಕರಾದ ಸ್ವರ್ಣ ಕಲಾ ಕಿಶೋರ್ ಉಪನ್ಯಾಸ ನೀಡಲಿದ್ದಾರೆ.