ಶ್ರೀಮಂಗಲ, ಜ. 18: ಇತ್ತೀಚೆಗೆ ಮೈಸೂರಿನಲ್ಲಿ ನಡೆದ ರೋವರ್ ಅಂಡ್ ರೇಂಜರ್ಸ್ ರಾಷ್ಟ್ರೀಯ ಜಾಂಬುರೇಟ್ ಶಿಬಿರದಲ್ಲಿ ರೋವರ್ ಲೀಡರ್ ಮಂದೇಯಂಡ ವನಿತ್ ಕುಮಾರ್ ಅವರ ನಾಯಕತ್ವದಲ್ಲಿ ವೀರಾಜಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ 11 ರೋವರ್ಸ್ ಗಳಾದ ಹೆಚ್.ಕೆ. ಉತ್ತಪ್ಪ, ಎಂ.ಆರ್. ನಿಧೀಶ್, ಸಿ.ಎ. ಶಿಜು, ಪೂವಯ್ಯ, ಪ್ರಶಾಂತ್, ನಿಜಾಮುದ್ದೀನ್, ಮಹೇಶ್, ಆದರ್ಶ್, ಕೌಶಲ್, ದಿಲೀಪ್, ಶಾಸ್ತ್ರಿ ಹಾಗೂ ರೇಂಜರ್ ಲೀಡರ್ ಅಕ್ಷತಾ ನಾಯಕ್‍ರವರ ಮುಂದಾಳ ತ್ವದಲ್ಲಿ 8 ರೇಂಜರ್ಸ್‍ಗಳಾದ ಎಂ.ಆರ್. ಕಾವೇರಮ್ಮ, ಅಕ್ಷಿತಾ, ಕಾವ್ಯ ಬಿ.ಎಸ್. ಶಿಲ್ಪ, ಸುಭದ್ರ ಬೈರಾಗಿ, ಭಾವನಾ, ಭೂಮಿಕ, ಗ್ರೀಷ್ಮ ಸ್ವಯಂ ಸೇವಕರಾಗಿ ಭಾಗವಹಿಸಿದ್ದರು.