ಮಡಿಕೇರಿ, ನ. 6: ಎಂದೋ ಇದ್ದು ಹೋದ ಟಿಪ್ಪುವಿನ ಬಗ್ಗೆ ಯಾರೋ ಬರೆದ ಇತಿಹಾಸವನ್ನು ಆಧಾರವಾಗಿರಿಸಿಕೊಂಡು ಇಂದು ಸಾವು ನೋವುಗಳಿಗೆ ವೇದಿಕೆಯನ್ನು ಸೃಷ್ಟಿಸುತ್ತಿರುವದು ಅತ್ಯಂತ ಖಂಡನೀಯವಾಗಿದೆ ಎಂದು ಜೆಡಿಎಸ್ ಪ್ರಕಟಣೆಯಲ್ಲಿ ಆಪಾದಿಸಲಾಗಿದೆ.

ಇಸ್ಲಾಂ ನಲ್ಲಿ ವ್ಯಕ್ತಿ ಪೂಜೆಗೆ ಅವಕಾಶವಿಲ್ಲದಿದ್ದರೂ ಸರಕಾರ ಟಿಪ್ಪು ಜಯಂತಿಯನ್ನು ಘೋಷಿಸುವ ಮೂಲಕ ಹಿಂದೂ ಮತ್ತು ಮುಸಲ್ಮಾನರಲ್ಲಿ ಒಡಕನ್ನು ಮೂಡಿಸಿದೆ. ಕಳೆದ ವರ್ಷ ನಡೆದ ಸಾವು-ನೋವುಗಳು ಅತ್ಯಂತ ದು:ಖಕರವಾಗಿದ್ದು, ಈ ಬಾರಿಯೂ ಪೊಲೀಸ್ ಸರ್ಪಗಾವಲಿನಲ್ಲಿ, ಅತಿ ಆತಂಕದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಸಿದ್ಧತೆಗಳು ನಡೆಯುತ್ತಿದೆ. ರಾಜ್ಯ ಸರಕಾರದ ಹಠಮಾರಿ ದೋರಣೆಗೆ ಕೊಡಗು ಜಿಲ್ಲೆ ಬಲಿಪಶುವಾಗುತ್ತಿದೆ, ಅಲ್ಲದೆ ಮುಸಲ್ಮಾನರು ಕೂಡ ಬಲಿಪಶು ಗಳಾಗುತ್ತಿದ್ದಾರೆ. ಜಿಲ್ಲೆಯ ಬಿಜೆಪಿ ಶಾಸಕರುಗಳೇ ಹೇಳುವಂತೆ ಮುಸಲ್ಮಾನರ ಅಂಗಡಿ ಮಳಿಗೆಗಳಿಗೆ ಬಹುಸಂಖ್ಯಾತ ಹಿಂದೂಗಳು ಹೋಗುವದು ವಿರಳವಾಗುತ್ತಿರು ವದರಿಂದ ವ್ಯಾಪಾರ ಕುಸಿತ ಕಂಡಿದೆ ಎಂದು ವಕ್ತಾರ ಪಿ.ಎಸ್. ಭರತ್ ಕುಮಾರ್ ಹೇಳಿದ್ದಾರೆ.

ವ್ಯಾಪಾರವನ್ನು ಆಧಾರವಾಗಿಸಿ ಕೊಂಡು ಕೊಡಗಿನಲ್ಲಿ ಜೀವನ ನಡೆಸುತ್ತಿರುವ ಮುಸಲ್ಮಾನರು ಕೂಡ ಇಂತಹ ಜಯಂತಿಗಳ ಆಚರಣೆ ಅಗತ್ಯವಿದೆಯೇ ಎಂದು ಆತ್ಮಾವಲೋ ಕನ ಮಾಡಬೇಕಾಗಿದೆ.

ಯಾವಾಗಲೋ ಇದ್ದ ಟಿಪ್ಪುವಿಗಾಗಿ ಹಿಂದಿನ ಚರಿತ್ರೆಯನ್ನು ಕೆಣಕುವ ಅಗತ್ಯವೇನಿದೆ ? ಈ ವಾದ ವಿವಾದಗಳನ್ನು ಮರೆತು, ಟಿಪ್ಪುವಿನ ಚಿಂತನೆಯನ್ನು ತೊರೆದು ನಾವು ಇಂದು ಹೇಗೆ ಶಾಂತಿ ಸೌಹಾರ್ದತೆ ಯಿಂದ ಜೀವನ ಸಾಗಿಸಬೇಕು ಎನ್ನುವ ಬಗ್ಗೆ ಕಾಳಜಿ ವಹಿಸಬೇಕಾಗಿದೆ. ಬೆರಳೆಣಿಕೆಯಷ್ಟು ಮಂದಿ ಪ್ರಚೋದನೆಯನ್ನು ನೀಡುತ್ತಿದ್ದು, ಪ್ರಚೋದನಾಕಾರರು ಐಶಾರಾಮಿ ಯಾಗಿ ಜೀವನ ಸಾಗಿಸುತ್ತಿದ್ದಾರೆ. ಆದರೆ ಪ್ರಚೋದನೆಗೆÀ ಒಳಗಾದ ಅಮಾಯಕ ಯುವ ಸಮೂಹ ಜೈಲು ಪಾಲಾಗು ವಂತಾಗಿದೆ. ಟಿಪ್ಪು ಜಯಂತಿ ವಿಚಾರದಲ್ಲಿ ಕಳೆದ ವರ್ಷ ಬಹಿರಂಗವಾಗಿ ಹೇಳಿಕೆಗಳನ್ನು ನೀಡುತ್ತಿದ್ದ ಸಂಘ ಪರಿವಾರ ಇಂದು ಬಿಜೆಪಿ ಮತ್ತು ಬೇರೆ ಬೇರೆ ಸಂಘಟನೆಗಳ ಮೂಲಕ ಪ್ರಚೋದನೆ ಯನ್ನು ನೀಡುತ್ತಿದೆ. ಇದಕ್ಕೆ ಕಾರಣವನ್ನು ಸಂಘ ಪರಿವಾರ ಸ್ಪಷ್ಟಪಡಿಸಬೇಕು.

ಟಿಪ್ಪು ಜಯಂತಿ ಒಂದು ಸರಕಾರಿ ಕಾರ್ಯಕ್ರಮವಾಗಿದ್ದು, ಇಚ್ಛೆ ಉಳ್ಳವರು ಪಾಲ್ಗೊಳ್ಳಬಹುದು, ಇಲ್ಲದವರು ಸುಮ್ಮನಿರಬಹುದು. ಇದನ್ನು ಬಿಟ್ಟು ಎತ್ತಿ ಕಟ್ಟಿ ತಮಾಷೆ ನೋಡುವ ಕಾರ್ಯ ಮಾಡಬಾರದು. ಇಸ್ಲಾಂನಲ್ಲಿ ವ್ಯಕ್ತಿ ಪೂಜೆ ಇಲ್ಲದಿದ್ದರೂ ಮುಸ್ಲಿಂ ಸಂಘಟನೆಗಳು ಕೂಡ ಟಿಪ್ಪು ಜಯಂತಿಯ ವಿವಾದವನ್ನು ಮುಂದಿಟ್ಟುಕೊಂಡು ಬಲಪ್ರದರ್ಶನಕ್ಕೆ ಮುಂದಾಗುವದು ಸರಿಯಲ್ಲ.

ರಾಜ್ಯ ಸರಕಾರ ಎಲ್ಲಾ ವಿವಾದ-ವಿಚಾರಗಳಿಗೂ ನೇರ ಹೊಣೆಯಾಗಿದ್ದು, ಕೊಡಗಿನಲ್ಲಿರುವ ಕೊಡವರು ಟಿಪ್ಪು ಜಯಂತಿ ಬೇಡವೆಂದು ಮನವಿ ಮಾಡಿದರೂ ಯಾವದೇ ಸ್ಪಂದನೆಯನ್ನು ನೀಡದೆ ಪೊಲೀಸ್ ಕಾವಲಿನಲ್ಲಿ ಆತಂಕದ ನಡುವೆ ಜಯಂತಿ ಆಚರಣೆಗೆ ಸಿದ್ಧತೆ ಮಾಡಿಕೊಂಡಿರುವದು ಅತ್ಯಂತ ಖಂಡನೀಯ. ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಕಾಂಗ್ರೆಸ್ ಮಾಡುತ್ತಿರುವ ಈ ರೀತಿಯ ದಡ್ಡತನದ ನಿರ್ಧಾರಗಳಿಂದ ರಾಜ್ಯದಲ್ಲಿ ಬಿಜೆಪಿ ಲಾಭವನ್ನು ಪಡೆದುಕೊಳ್ಳುತ್ತಿದೆ. ಜನರ ಭಾವನೆಗಳನ್ನು ಕೆಣಕಿ ಅಧಿಕಾರಕ್ಕೆ ಬರುವ ಷಡ್ಯಂತ್ರ ನಡೆಸುತ್ತಿದೆ. ಆದ್ದರಿಂದ ಆಡಳಿತಾರೂಢರು ಜವಾÀಬ್ದಾರಿಯುತವಾಗಿ ನಡೆದು ಕೊಳ್ಳುವ ಅಗತ್ಯವಿದೆ. ರಾಜ್ಯ ಕಾಂಗ್ರೆಸ್ ಕೊಡಗಿನ ಜನರಿಗೆ ವಿಧಾನ ಪರಿಷತ್ ಸದಸ್ಯರನ್ನು ಮತ್ತು ನಿಗಮ ಮಂಡಳಿ ಅಧ್ಯಕ್ಷರನ್ನು ನೀಡಿದೆ. ಆದರೆ ಶಾಂತಿಯನ್ನು ನೀಡುವಲ್ಲಿ ಮಾತ್ರ ವಿಫಲವಾಗಿದೆ. ಈ ಬಗ್ಗೆ ಜಿಲ್ಲಾ ಕಾಂಗ್ರೆಸ್ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕಾಗಿದೆ ಎಂದಿದ್ದಾರೆ.