ಶ್ರೀಮಂಗಲ, ಅ. 17 : ಶ್ರೀಮಂಗಲ ಪದÀವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಗೋಣಿಕೊಪ್ಪ ವಿದ್ಯಾನೀಕೇತನ ಪದÀವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಸಾಧನೆ ಮಾಡಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಶ್ರಿಮಂಗಲ ಪದವಿ ಪೂರ್ವ ಕಾಲೇಜಿನ ಮುತ್ತಣ್ಣ 4x400 ಮೀ. ಓಟದಲ್ಲಿ ದ್ವಿತೀಯ, 4x100 ತೃತಿಯ, 5000 ಮೀ.ಯಲ್ಲಿ ತೃತೀಯ, ಭರ್ಜಿ ಎಸೆತ ತೃತೀಯ. ಮಹಮ್ಮದ್ ಸಾಕೀರ್ ಗುಡ್ಡಗಾಡು ಓಟದಲ್ಲಿ ಪ್ರಥಮ, 400ಮೀ ದ್ವೀತೀಯ 4x400 ದ್ವಿತೀಯ, 4x100 ತೃತೀಯ. ಹರ್ಷಿತ್ ಉದ್ದ ಜಿಗಿತ ತೃತೀಯ. ನಿದೀಶ್ ಎತ್ತರ ಜಿಗಿತ ತೃತೀಯ. ಅನೀಶ್ 4x400 ದ್ವಿತೀಯ, 4x100 ತೃತೀಯ. ಎಲ್.ಮುತ್ತುಮಾರಿ 3000 ಮೀ. ವೇಗದ ನಡಿಗೆ ಪ್ರಥಮ, 5000 ಮೀ.ವೇಗದ ನಡಿಗೆ ತೃತೀಯ. ಅರ್ಪಿತಾ 5000 ಮೀ. ಪ್ರಥಮ. 4x100 ಪ್ರಥಮ, 4x400 ಪ್ರಥಮ. ಎಂ.ಸಿ ದರ್ಶಿನಿ 4x400 ಪ್ರಥಮ, 200ಮೀ. ತೃತೀಯ. ಸಾವಿತ್ರಿ 800 ಮೀ ಪ್ರಥಮ, 4x100 ಮೀ ಪ್ರಥಮ, 4x400 ಪ್ರಥಮ, 400ಮೀ. ತೃತೀಯ. ವಿ. ಆರ್. ರಂಜಿತ ಉದ್ದ ತ್ರಿವಿಧ ಜಿಗಿತ ದ್ವಿತೀಯ. ಎತ್ತರ ಜಿಗಿತ ತೃತೀಯ, 4x100 ಪ್ರಥಮ. ಮುತ್ತಮ್ಮ 4x100 ಪ್ರಥಮ, ಗುಡ್ಡಗಾಡು ಓಟ 6ನೇ ಸ್ಥಾನ. ಮೇಘನಾ 3000 ಮೀ. ನಡಿಗೆ ದ್ವಿತೀಯ, 4x400 ಪ್ರಥಮ, ತಟ್ಟೆ ಎಸೆತ ತೃತೀಯ. ದಿವ್ಯ 1500ಮೀ ದ್ವಿತೀಯ. ಎಂ.ಎಸ್. ನಿರನ್ 1500ಮೀ ಪ್ರಥಮ, ತ್ರಿವಿಧ ಜಿಗಿತ ಪ್ರಥಮ, 5000 ಮೀ. ವೇಗದ ನಡಿಗೆ ಪ್ರಥಮ, 4x400 ಮೀ. ದ್ವಿತೀಯ, 4x100 ತೃತೀಯ. ಕ್ರೀಡಾಕೂಟದಲ್ಲಿ ಕಾಲೇಜಿನ ಬಾಲಕ ಬಾಲಕಿಯರ ಖೋಖೋ ತಂಡ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.