ಮಡಿಕೇರಿ ಆ. 23 : ಸವಿತಾ ಸಮಾಜದ ಜಿಲ್ಲಾ ಘಟಕ ರಚನೆಯಾಗಿದ್ದು, ಕೊಡಗು ಜಿಲ್ಲಾ ಸವಿತಾ ಸಮಾಜದ ನೂತನ ಅಧ್ಯಕ್ಷರಾಗಿ ಹೆಚ್.ಎನ್.ವೆಂಕಟೇಶ್ ಆಯ್ಕೆಯಾಗಿದ್ದಾರೆ. ಜಿಲ್ಲಾ ಉಪಾಧ್ಯಕ್ಷರಾಗಿ ಕೆ.ಎಸ್.ದೊರೇಶ್, ಪ್ರತಿನಿಧಿಯಾಗಿ ವೈ.ಪುಟ್ಟರಾಜು, ಜಿಲ್ಲಾ ಮಹಿಳಾ ಅಧ್ಯಕ್ಷರಾಗಿ ರಾಧಾ ಪುಟ್ಟರಾಜು, ಮಡಿಕೇರಿ ತಾಲೂಕು ಅಧ್ಯಕ್ಷರಾಗಿ ಎಂ.ಟಿ.ಮಧು, ಪ್ರತಿನಿಧಿಯಾಗಿ ಎಂ.ಜಿ.ಚರಣ್ ಮಹಿಳಾ ಅಧ್ಯಕ್ಷರಾಗಿ ಸುಂದರಮ್ಮ, ಪ್ರತಿನಿಧಿಯಾಗಿ ಆರ್.ಬಿ.ವಸಂತಿ, ವೀರಾಜಪೇಟೆ ತಾಲೂಕು ಅಧ್ಯಕ್ಷರಾಗಿ ಕೆ.ಟಿ.ವೆಂಕಟೇಶ್, ಪ್ರತಿನಿಧಿಯಾಗಿ ಪಿ.ಎಸ್.ದಿನೇಶ್, ಸೋಮವಾರಪೇಟೆ ತಾಲೂಕು ಅಧ್ಯಕ್ಷರಾಗಿ ಶಿವಣ್ಣ, ಪ್ರತಿನಿಧಿಯಾಗಿ ರಾಮಣ್ಣ ಹಾಗೂ ಮಹಿಳಾ ಅಧ್ಯಕ್ಷರಾಗಿ ಪುಷ್ಪ ಜಯರಾಮ್ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಪ್ರತಿನಿಧಿ ವೈ.ಪುಟ್ಟರಾಜು ಮಾಹಿತಿ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇದೇ ಮೊದಲ ಬಾರಿಗೆ ಸವಿತಾ ಸಮಾಜದ ಜಿಲ್ಲಾ ಸಂಘ ರಚನೆಯಾಗಿದ್ದು, ಸಮಾಜವನ್ನು ಒಗ್ಗೂಡಿಸುವ ಪ್ರಯತ್ನವನ್ನು ನೂತನ ಸಂಘ ಮಾಡಲಿದೆ ಎಂದರು. ಸರಕಾರದ ಸೌಲಭ್ಯಗಳು ಸಕಾಲದಲ್ಲಿ ಸಮಾಜದ ಬಂಧುಗಳಿಗೆ ಸಿಗುವಂತೆ ಮಾಡಲು ಕ್ರಮ ಕೈಗೊಳ್ಳಲಾಗುವದೆಂದ ಪುಟ್ಟರಾಜು ನೂತನ ಸಂಘ ರಚನೆಯಾದ ಹಿನ್ನೆಲೆ ಜಿಲ್ಲಾ ಆಸ್ಪತ್ರೆಯ ಒಳ ರೋಗಿಗಳಿಗೆ ಹಣ್ಣು, ಹಂಪಲು ವಿತರಿಸಲಾಯಿತು ಎಂದರು. ಇಬ್ಬರು ಬಡ ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆಗಾಗಿ ಧನ ಸಹಾಯವನ್ನು ಕೂಡ ಮಾಡಲಾಯಿತು ಎಂದು ಅವರು ತಿಳಿಸಿದರು.

ಜಿಲ್ಲಾಧ್ಯಕ್ಷ ಹೆಚ್.ಎನ್. ವೆಂಕಟೇಶ್ ಮಾತನಾಡಿ ಸವಿತಾ ಸಮಾಜಕ್ಕಾಗಿ ಸರಕಾರ ಜಾರಿಗೆ ತಂದಿರುವ ಯೋಜನೆಗಳ ಬಗ್ಗೆ ಗ್ರಾಮ ಗ್ರಾಮಗಳಲ್ಲಿ ಜಾಗೃತಿ ಮೂಡಿಸಲಾಗುವದೆಂದರು. ಸರಕಾರದ ವಿವಿಧ ಸೌಲಭ್ಯಗಳು ಘೋಷಣೆಯಾಗಿದ್ದರೂ ಅರ್ಹ ಫಲಾನುಭವಿಗಳಿಗೆ ತಲುಪುತ್ತಿಲ್ಲ ವೆಂದು ಬೇಸರ ವ್ಯಕ್ತಪಡಿಸಿದ ಅವರು ಜಿಲ್ಲೆಯಲ್ಲಿರುವ ಸುಮಾರು 10 ಸಾವಿರ ಸವಿತಾ ಸಮಾಜದ ಬಂಧುಗಳ ಅಭ್ಯುದಯಕ್ಕಾಗಿ ಮುಂದಿನ ದಿನಗಳಲ್ಲಿ ಗಮನಾರ್ಹ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳುವದಾಗಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಡಿಕೇರಿ ತಾಲೂಕು ಅಧ್ಯಕ್ಷ ಎಂ.ಟಿ.ಮಧು, ವೀರಾಜಪೇಟೆ ತಾಲೂಕು ಅಧ್ಯಕ್ಷ ಕೆ.ಟಿ.ವೆಂಕಟೇಶ್, ಪ್ರತಿನಿಧಿ ಪಿ.ಎಸ್.ದಿನೇಶ್ ಹಾಗೂ ಸೋಮವಾರಪೇಟೆ ತಾಲೂಕು ಅಧ್ಯಕ್ಷ ಶಿವಣ್ಣ ಉಪಸ್ಥಿತರಿದ್ದರು.