ನಾಪೋಕ್ಲು, ಅ. 27: ಸರ್ಕಾರ ಟಿಪ್ಪು ಜಯಂತಿ ಆಚರಣೆ ಮೂಲಕ ಜಿಲ್ಲೆಯ ಜನರ ಸೌಹಾರ್ದವನ್ನು ಹಾಳುಗೆಡವುತ್ತಿದೆ. ವಿರೋಧಗಳ ನಡುವೆ ಟಿಪ್ಪು ಜಯಂತಿ ಆಚರಿಸಿದರೆ ಅನಾಹುತಗಳಿಗೆ ಜಿಲ್ಲಾಡಳಿತ ನೇರ ಹೊಣೆಯಾಗಲಿದೆ ಎಂದು ಸಮೀಪದ ಚೆಯ್ಯಂಡಾಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಜೆಪಿಂiÀi ಪ್ರಮುಖರು ಎಚ್ಚರಿಸಿದ್ದಾರೆ. ಚೆಯ್ಯಂಡಾಣೆ ಲಕ್ಷ್ಮಿ ಮಹಿಳಾ ಸಮಾಜದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಸದಸ್ಯರು ಟಿಪ್ಪು ಜಯಂತಿಗೆ ಜಿಲ್ಲೆಯಲ್ಲಿ ಸಂಪೂರ್ಣ ವಿರೋಧ ವಿದ್ದರೂ ರಾಜಕೀಯ ಉದ್ದೇಶದಿಂದ ಇಂತಹ ಆಚರಣೆಗೆ ಅವಕಾಶ ಕಲ್ಪಿಸಲಾಗುತ್ತಿದೆ ಇದಕ್ಕೆ ಸಂಪೂರ್ಣ ವಿರೋಧ ವ್ಯಕ್ತಪಡಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಪಾಡಿಯಮ್ಮಂಡ ಮುರಳೀಧರ, ನೆಲ್ಲಚಂಡ ಕಿರಣ್, ತಾಲೂಕು ಪಂಚಾಯಿತಿ ಸದಸ್ಯ ಕೋಡೀರ ಪ್ರಸನ್ನ, ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮುಂಡ್ಯೋಳಂಡ ರವಿ ಸೋಮಣ್ಣ, ಸದಸ್ಯರಾದ ಬಿಳಿಯಂಡ್ರ ಶರಣ್ ಕುಮಾರ್, ತೋಟಂಬೈಲು ಅನಂತ ಕುಮಾರ್, ಬೊವ್ವೇರಿಯಂಡ ಸನ್ನು, ಬೊವ್ವೇರಿಯಂಡ ಲವಕುಮಾರ್, ಮುಂಡ್ಯೋಳಂಡ ಚಿಣ್ಣಪ್ಪ, ಬಟ್ಟಿಯಂಡ ಜಯರಾಂ, ಚೈಯ್ಯಂಡ ಲವ, ಚೇನಂಡ ಗಿರೀಶ್, ನಡಿಕೇರಿ ಯಂಡ ಚಿಮ್ಮಣ್ಣ, ಬೇಪಡಿಯಂಡ ಶುಸ ಉಪಸ್ಥಿತರಿದ್ದರು.