ಮಡಿಕೇರಿ, ನ. 6: ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮ ತಾ. 13 ರಂದು ಮಡಿಕೇರಿ ತಾಲೂಕಿನ ತಾಳತ್ತಮನೆಯ ಸರಕಾರಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ನಡೆಯಲಿದ್ದು, ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಮಡಿಕೇರಿ ತಾಲೂಕು ಯುವ ಒಕ್ಕೂಟದ ಅಧ್ಯಕ್ಷರಾದ ನವೀನ್ ದೇರಳ ತಿಳಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು ಸ್ಪರ್ಧೆಗಳ ವಿವರವನ್ನು ಪ್ರಕಟಿಸಿದ್ದಾರೆ. 20 ಸ್ಪರ್ಧಿಗಳಿಗೆ ಮೀಸಲಾದ ಜನಪದ ನೃತ್ಯ, 10 ಸ್ಪರ್ಧಿಗಳಿಗೆ ಮೀಸಲಾದ ಜಾನಪದ ಗೀತೆ, ಏಕಾಂಗಿ ನಾಟಕ ಹಾಗೂ ಶಾಸ್ತ್ರೀಯ ಗಾಯನ, ಶಾಸ್ತ್ರೀಯ ವಾದನ, ಹಾರ್ಮೋನಿಯಂ, ಗಿಟಾರ್, ಶಾಸ್ತ್ರೀಯ ನೃತ್ಯ, ಆಶುಭಾಷಣ ಸ್ಪರ್ಧೆಗಳು ನಡೆಯಲಿವೆ.

ಯುವಕ, ಯುವತಿಯರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದಾಗಿದ್ದು, ಸ್ಪರ್ಧಿಗಳು ಯುವಜನೋತ್ಸವ ಕಾರ್ಯಕ್ರಮ ನಡೆಯುವ ತಾ. 13 ರಂದು ಬೆಳಗ್ಗೆ 9 ಗಂಟೆಯೊಳಗೆ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ವೈಯಕ್ತಿಕ ಮತ್ತು ತಂಡದ ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದವರು ಮಾತ್ರ ರಾಜ್ಯ ಮಟ್ಟದ ಯುವ ಜನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಅರ್ಹತೆಯನ್ನು ಪಡೆದಿರುತ್ತಾರೆ ಎಂದು ನವೀನ್ ದೇರಳ ತಿಳಿಸಿದ್ದಾರೆ.

ಹೆಚ್ಚಿನ ವಿವರಗಳಿಗೆ ಈ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ :: ಎಂ.ಬಿ.ಜೋಯಪ್ಪ, ಕೊಡಗು ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷರು (99013 16315), ನವೀನ್ ದೇರಳ (97404 04520), ಮಹಮ್ಮದ್ ರಫೀಕ್ ಅಧ್ಯಕ್ಷರು, ನೇತಾಜಿ ಯುವ ಸಂಘ (96110 84030), ಎ.ಆರ್.ನೇತ್ರಾವತಿ ಅಧ್ಯಕ್ಷರು, ನೇತಾಜಿ ಯುವತಿ ಮಂಡಳಿ (94496 79460).