ಮಡಿಕೇರಿ, ಸೆ. 6 : ಕೊಡವ ಕುಟುಂಬಗಳ ನಡುವಿನ 21ನೇ ವರ್ಷದ ಹಾಕಿ ಉತ್ಸವ “ಬಿದ್ದಾಟಂಡ ಹಾಕಿ ನಮ್ಮೆ” ಯನ್ನು ಈ ಬಾರಿ ನಾಪೋಕ್ಲು ನಾಡಿನ ಹಬ್ಬವನ್ನಾಗಿ ಆಚರಿಸಲು ನಿರ್ಧರಿಸಲಾಗಿದ್ದು, ಹಾಕಿ ಹಬ್ಬದ ಲಾಂಛನ, ಕೈಪಿಡಿ ಹಾಗೂ ವೆಬ್‍ಸೈಟ್ ಅನಾವರಣ ಕಾರ್ಯಕ್ರಮವನ್ನು ಸೆ.10ರಂದು ನಡೆಸಲಾಗುವದೆಂದು ಬಿದ್ದಾಟಂಡ ಕುಟುಂಬಸ್ಥರು ತಿಳಿಸಿದ್ದಾರೆ.ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಬಿದ್ದಾಟಂಡ ಹಾಕಿ ಉತ್ಸವ ಸಮಿತಿಯ ಅಧ್ಯಕ್ಷ ಬಿದ್ದಾಟಂಡ ಎ. ರಮೇಶ್ ಚೆಂಗಪ್ಪ ಅವರು ಮುಂದಿನ ವರ್ಷ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ನಡೆಯುವ ಉತ್ಸವ “ಬಿದ್ದಾಟಂಡ ಹಾಕಿ ನಮ್ಮೆ”ಯ ಕುರಿತು ಮಾಹಿತಿ ನೀಡಿದರು. ನಾಪೋಕ್ಲುವಿನಲ್ಲಿ ಈಗಾಗಲೇ ಇರುವ ಎರಡು ಮೈದಾನಗಳ ಜೊತೆಗೆ ಇನ್ನೊಂದು ಮೈದಾನವನ್ನು ನಿರ್ಮಿಸಿ ಒಟ್ಟು ಮೂರು ಮೈದಾನಗಳಲ್ಲಿ ಹಾಕಿ ಪಂದ್ಯಾವಳಿ ನಡೆಸಲು ಉದ್ದೇಶಿಸಲಾಗಿದೆ. ಹಾಕಿ ಉತ್ಸವಕ್ಕಾಗಿ ಈಗಾಗಲೇ ಪೂರ್ವ ಭಾವಿ ಸಿದ್ಧತೆಗಳು ಆರಂಭವಾಗಿದ್ದು, ಇದರ ಮೊದಲ ಹಂತವಾಗಿ ಸೆ.10ರಂದು ನಾಪೋಕ್ಲು ಕೊಡವ ಸಮಾಜದಲ್ಲಿ ಹಾಕಿ ಉತ್ಸವದ ವೆಬ್‍ಸೈಟ್, ಲಾಂಛನ ಹಾಗೂ ಕೈಪಿಡಿ ಅನಾವರಣ ಕಾರ್ಯಕ್ರಮ ನಡೆಯಲಿದೆ. ಅಂದು ಪೂರ್ವಾಹ್ನ 11ಗಂಟೆಗೆ ಕುಟುಂಬದ ಪಟ್ಟೆದಾರ (ಮುಖ್ಯಸ್ಥ) ಪ್ರೊ. ಬಿ.ಸಿ.ಪೊನ್ನಪ್ಪ ಅವರ ಅಧ್ಯಕ್ಷತೆಯಲ್ಲಿ ಹಾಗೂ ಕೊಡವ ಕುಟುಂಬಗಳ ನಡುವಿನ ಹಾಕಿ ಉತ್ಸವದ ಜನಕ ಪಾಂಡಂಡ ಎಂ.ಕುಟ್ಟಪ್ಪ ಅವರ ಉಪಸ್ಥಿತಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕೊಡಗು-ಮೈಸೂರು ಕ್ಷೇತ್ರದ ಸಂಸದ ಪ್ರತಾಪ್‍ಸಿಂಹ,