ವೀರಾಜಪೇಟೆ, ಜೂ. 6: ಇಲ್ಲಿಗೆ ಸಮೀಪದ ಮಗ್ಗುಲದ ಪ್ರತಿಷ್ಠಿತ ಕೊಡಗು ಮಹಾ ದಂತ ವಿದ್ಯಾಲಯದಲ್ಲಿ ಎರಡು ದಿನಗಳ ಸೀಳು ತುಟಿ ಶಸ್ತ್ರ ಚಿಕಿತ್ಸಾ ಕಾರ್ಯಗಾರಕ್ಕೆ ಕಾಲೇಜಿನ ಸಭಾಂಗಣದಲ್ಲಿ ಚಾಲನೆ ನೀಡಲಾಯಿತು.
ಕಾರ್ಯಾಗಾರವನ್ನು ಉದ್ಘಾಟಿಸಿದ ಅಂತರಾಷ್ಟ್ರೀಯ ಖ್ಯಾತ ತಜ್ಞ ಡಾ: ಎಚ್.ನಾರಾಯಣ ಗಂಡೇಕರ್ ಮಾತನಾಡಿ ಸೀಳುತುಟಿ, ಸೀಳು ಬಾಯಿ ಅಂಗಳ, ತಲೆ ಹಾಗೂ ಮುಖದ ಮೂಳೆಗಳಿಗೆ ಸಂಬಂಧಿಸಿದ ನ್ಯೂನತೆಗಳು, ಆಧುನಿಕ ಶಸ್ತ್ರ ಚಿಕಿತ್ಸಾ ವಿಧಾನ ಕುರಿತು ಕಾರ್ಯಾಗಾರದಲ್ಲಿ ಶಿಬಿರಾರ್ಥಿಗಳಿಗೆ ಮಾಹಿತಿ ಒದಗಿಸಲಾಗುವದು ಎಂದರು. ಕಾಲೇಜಿನ ಪ್ರಾಂಶುಪಾಲ ಡಾ. ಕೆ.ಸಿ. ಪೊನ್ನಪ್ಪ ಮಾತನಾಡಿದರು. ಕಾರ್ಯಾಗಾರದಲ್ಲಿ ದೇಶದಾದ್ಯಂತ ವಿವಿಧ ರಾಜ್ಯಗಳಿಂದ 50 ಮಂದಿ ನುರಿತ ದಂತ ವೈದ್ಯರುಗಳು ಕಾಂiÀರ್iಗಾರದಲ್ಲಿ ಪ್ರತಿನಿಧಿಗಳಾಗಿ ಭಾಗವಹಿಸಿದ್ದರು.
ಅತಿಥಿಯಾಗಿ ಭಾಗವಹಿಸಿದ್ದ ಡೀನ್ ಡಾ. ಸುನಿಲ್ ಮುದ್ದಯ್ಯ ಮಾತನಾಡಿ ಕೊಡಗು ದಂತ ವಿದ್ಯಾಲಯದಲ್ಲಿ ದಂತ ವೈದ್ಯಕೀಯ ಚಿಕಿತ್ಸೆ ಹಾಗೂ ಆಧುನಿಕ ಶಸ್ತ್ರ ಚಿಕಿತ್ಸೆಗೆ ಸಂಬಂಧಿಸಿದಂತೆ ಕಾರ್ಯಗಾರವನ್ನು ಹಮ್ಮಿಕೊಳ್ಳುವದರಿಂದ ಆಧುನಿಕ ಉನ್ನತ ಶಸ್ತ್ರ ಚಿಕಿತ್ಸಾ ಚಾತುರ್ಯ, ಶಸ್ತ್ರ ಕಲಾ ನೈಪುಣ್ಯತೆ ಬೆಳೆಸಿಕೊಳ್ಳಲು ಅನುಕೂಲವಾಗಲಿದೆ ಎಂದು ಹೇಳಿದರು.