ಶನಿವಾರಸಂತೆ, ಜೂ. 25: ಅಕ್ರಮ ನಕಲಿ ಪರವಾನಿಗೆ ಸೃಷ್ಟಿಸಿ ಮರಳು ಸಾಗಾಣಿಕೆ ನಡೆಸುತ್ತಿದ್ದ ವಾಹನ (ಕೆಎ 07, ಎ 450)ದ ವಿರುದ್ಧ ಕ್ರಮ ಜರುಗಿಸುವಂತೆ ಮಡಿಕೇರಿ ಗಣಿ ಮತ್ತು ಭೂ ವಿಜ್ಞಾನಿ ಇಲಾಖೆಯ ಭೂ ವಿಜ್ಞಾನಿ ಡಾ. ಎಂ.ಜೆ. ಮಹೇಶ್ ಅವರು ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಕೊಡ್ಲಿಪೇಟೆ ಹ್ಯಾಂಡ್ ಪೋಸ್ಟ್ ಸಮೀಪ ಮರಳು ತುಂಬಿಸಿಕೊಂಡು ಬರುತ್ತಿದ್ದ ವಾಹನ ಭೂ ವಿಜ್ಞಾನಿ ಮಹೇಶ್ ಅವರು ತಡೆದು ಪರಿಶೀಲನೆ ಮಾಡಿ ಅಸಲಿ ಪರವಾನಿಗೆಯಂತೆ ಕಂಡು ಬಾರದೆ ಇದ್ದುದರಿಂದ ಪರವಾನಿಗೆಯನ್ನು ಪರಿಶೀಲಿಸಿ ವರದಿ ನೀಡುವಂತೆ ಉಪನಿರ್ದೇಶಕರು ಗಣಿ ಭೂ ವಿಜ್ಞಾನಿ ಇಲಾಖೆಗೆ ಕಳುಹಿಸಿಕೊಡಲಾಗಿತ್ತು. ಸದರಿ ಪರವಾನಿಗೆಯನ್ನು ಗಣಿ ಭೂ ವಿಜ್ಞಾನಿ ಇಲಾಖೆ ಮಂಗಳೂರು ಅವರು ಪರಿಶೀಲನೆ ಮಾಡಿ ನಮ್ಮ ಕಚೇರಿಯಿಂದ ಈ ಪರವಾನಿಗೆಯನ್ನು ವಿತರಿಸಿರುವದಿಲ್ಲ. ಪರವಾನಿಗೆ ನಕಲಿಯಾಗಿರುವದಾಗಿ ಬಂದ ವರದಿಯಂತೆ ನಕಲಿ ಪರವಾನಿಗೆ ಸೃಷ್ಟಿಸಿ ಮರಳು ಸಾಗಾಣಿಕೆ ನಡೆಸಿರುವದು ಕಂಡುಬಂದ ಕಾರಣ ವಾಹನದ ಮಾಲೀಕ ವಿಜಯಕುಮಾರ್ ವಿರುದ್ಧ ಕಾನೂನು ಕ್ರಮ ಜರುಗಿಸು ವಂತೆ ಭೂ ವಿಜ್ಞಾನಿ ಮಹೇಶ್ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್‍ಪೆಕ್ಟರ್ ಬಿ.ಎಸ್. ಜನಾರ್ಧನ್ ಪ್ರಕರಣ ದಾಖಲಿಸಿದ್ದಾರೆ.