ನಾಪೆÇೀಕು, ಜು. 14: ಡಿವೈಎಸ್‍ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವದು, ಸಚಿವ ಕೆ.ಜೆ.ಜಾರ್ಜ್, ಪೆÇಲೀಸ್ ಅಧಿಕಾರಿಗಳಾದ ಪ್ರಸಾದ್, ಮೊಹಂತಿ ಅವರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ಕೊಡಗು ಜಿಲ್ಲಾ ಹಿಂದೂ ಜಾಗರಣಾ ವೇದಿಕೆ, ವಿಶ್ವ ಹಿಂದೂ ಪರಿಷತ್, ಭಜರಂಗದಳ, ಭಾರತೀಯ ಜನತಾ ಪಕ್ಷ, ಜಾತ್ಯತೀತ ಜನತಾ ದಳ, ವಾಹನ ಚಾಲಕರ ಮತ್ತು ಮಾಲೀಕರ ಸಂಘ ಸೇರಿದಂತೆ ಕೊಡವ ಸಮಾಜ ಹಾಗೂ ವಿವಿಧ ಸಂಘಟನೆಗಳು ಕರೆದಿದ್ದ ಕೊಡಗು ಬಂದ್ ನಾಪೆÇೀಕ್ಲುವಿನಲ್ಲಿ ಸಂಪೂರ್ಣ ಯಶಸ್ವಿಯಾಗಿದೆ.

ಬೆಳಿಗ್ಗೆಯಿಂದಲೇ ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿ ರಾಜ್ಯ ಸರಕಾರ, ಮುಖ್ಯಮಂತ್ರಿ, ಗೃಹ ಸಚಿವ ಹಾಗೂ ಸಚಿವ ಕೆ.ಜೆ. ಜಾರ್ಜ್ ವಿರುದ್ಧ ಘೋಷಣೆ ಕೂಗುವದರ ಮೂಲಕ ಪ್ರತಿಭಟನೆ ನಡೆಸಿದರು.

ನಾಪೆÇೀಕ್ಲು ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಶಿವಚಾಳಿಯಂಡ ಅಂಬಿ ಕಾರ್ಯಪ್ಪ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನಾಪೆÇೀಕ್ಲು ಜಿಲ್ಲಾ ಪಂಚಾಯಿತಿ ಸದಸ್ಯ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ, ಜೆಡಿಎಸ್ ಮುಖಂಡ ಎಂ.ಎ.ಮನ್ಸೂರ್ ಅಲಿ, ಹಿರಿಯರಾದ ಬಾದುಮಂಡ ಮುತ್ತಪ್ಪ, ನಿವೃತ್ತ ಸೈನಿಕ ಕೊಂಡಿರ ನಾಣಯ್ಯ ಮಾತನಾಡಿ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು. ಅವರ ಆತ್ಮಹತ್ಯೆಗೆ ಕಾರಣರಾದ ಸಚಿವ ಕೆ.ಜೆ. ಜಾರ್ಜ್ ಹಾಗೂ ಪೆÇಲೀಸ್ ಅಧಿಕಾರಿಗಳನ್ನು ಕೂಡಲೇ ಬಂಧಿಸಬೇಕು. ಮೃತ ಗಣಪತಿ ಕುಟುಂಬಕ್ಕೆ ನ್ಯಾಯ ಒದಗಿಸುವದರ ಮೂಲಕ ಮೃತರ ಆತ್ಮಕ್ಕೆ ಶಾಂತಿ ದೊರೆಯುವಂತೆ ಮಾಡಬೇಕು ಎಂದು ಆಗ್ರಹಿಸಿದರು. ನಂತರ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕೃತಿ ದಹಿಸಿ ಸರಕಾರದ ವಿರುದ್ಧ ಘೋಷಣೆ ಕೂಗಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಬಿಜೆಪಿ ಸಹಕಾರ ಪ್ರಕೋಷ್ಟದ ಸಹ ಸಂಚಾಲಕ ಪಾಡಿಯಮ್ಮಂಡ ಮನು ಮಹೇಶ್, ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಜಾóಯಿರ್, ಭಜರಂಗದಳದ ಅಧ್ಯಕ್ಷ ಬಿ.ಎಂ.ಪ್ರತೀಪ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ, ತಾಲೂಕು ಪಂಚಾಯಿತಿ ಸದಸ್ಯೆ ನೆರೆಯಂಡಮ್ಮಂಡ ಉಮಾ ಪ್ರಭು, ಗ್ರಾಮ ಪಂಚಾಯಿತಿ ಸದಸ್ಯರಾದ ಶಿವಚಾಳಿಯಂಡ ಜಗದೀಶ್, ಟಿ.ಆರ್.ಮೋಹಿನಿ, ಸುಶೀಲಮ್ಮ, ಮುಖಂಡರಾದ ಕಂಗಾಂಡ ಜಾಲಿ ಪೂವಪ್ಪ, ಕುಟ್ಟಂಜೆಟ್ಟಿರ ಪೂಣಚ್ಚ, ಶಿವಚಾಳಿಯಂಡ ಕಿಶೋರ್, ಕೇಟೋಳಿರ ಡಾಲಿ, ಕುಂಡ್ಯೋಳಂಡ ವಿಶು ಪೂವಯ್ಯ, ಬಾಳೆಯಡ ಶಿವು, ಚೀಯಕಪೂವಂಡ ಅಪ್ಪಚ್ಚು, ಬೊಟ್ಟೋಳಂಡ ರಮೇಶ್, ಕರವಂಡ ಲವ ನಾಣಯ್ಯ, ಕನ್ನಂಬಿರ ತಿಮ್ಮಯ್ಯ, ಬಾಳೆಯಡ ಪ್ರತೀಶ್, ಚೋಕಿರ ಬಾಬಿ ಭೀಮಯ್ಯ, ಎಂ.ಎಂ.ನರೇಂದ್ರ, ಸುಕುಮಾರ್ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ನೆರೆದಿದ್ದರು.

ಕಕ್ಕಬ್ಬೆ: ಕಕ್ಕಬ್ಬೆಯಲ್ಲಿ ನಡೆದ ಪ್ರತಿಭಟನೆಯ ನೇತೃತ್ವವನ್ನು ಕಕ್ಕಬ್ಬೆ ಸ್ಥಾನೀಯ ಸಮಿತಿ ಅಧ್ಯಕ್ಷ ಕಲಿಯಂಡ ಸುನಂದ ವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು. ಮೃತ ಡಿವೈಎಸ್‍ಪಿ ಮಾದಪಂಡ ಕೆ. ಗಣಪತಿ ಮರಣ ಪೂರ್ವ ಹೇಳಿಕೆಯಲ್ಲಿ ತಿಳಿಸಿರುವ ಮಂತ್ರಿ ಹಾಗೂ ಪೆÇಲೀಸ್ ಅಧಿಕಾರಿಗಳನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಬಿಜೆಪಿ ಸಮಿತಿ ಸದಸ್ಯ ಉದಿಯಂಡ ಸುರಾ ನಾಣಯ್ಯ, ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಬೊಳಿಯಾಡಿರ ಸಂತು ಸುಬ್ರಮಣಿ, ಕಲ್ಯಾಟಂಡ ಸುದಾ ಗಣಪತಿ, ಅಂಜಪರವಂಡ ಕುಶಾಲಪ್ಪ, ನಾಟೋಳಂಡ ದಿಲೀಪ್, ಚಂಡೀರ ಜಗದೀಶ್, ಕಲ್ಯಾಟಂಡ ಉಮೇಶ್, ಗಿರೀಶ್, ಕಣಿಯರ ಹರೀಶ್, ಬಾರಿಕೆ ನಂದ, ಬಟ್ಟೀರ ಜೀವನ್ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕೃತಿ ದಹಿಸಿ ರಾಜ್ಯ ಸರಕಾರ ಹಾಗೂ ಮಂತ್ರಿ ಕೆ.ಜೆ.ಜಾರ್ಜ್ ವಿರುದ್ಧ ಘೋಷಣೆ ಕೂಗಲಾಯಿತು.

ಅಂತೆಯೇ ನಾಪೆÇೀಕ್ಲು ವ್ಯಾಪ್ತಿಯ ನೆಲಜಿ, ಬಲ್ಲಮಾವಟಿ, ಪಾರಾಣೆ, ಚೆಯ್ಯಂಡಾಣೆಯಲ್ಲಿಯೂ ಸಂಪೂರ್ಣ ಅಂಗಡಿ, ಮುಂಗಟ್ಟುಗಳನ್ನು ಮುಚ್ಚಲಾಗಿದ್ದು, ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಲಾಯಿತು. ನಾಪೆÇೀಕ್ಲು ವ್ಯಾಪ್ತಿಯಲ್ಲಿ ಯಾವದೇ ಶಾಲಾ ಕಾಲೇಜುಗಳು, ಸರಕಾರಿ ಕಚೇರಿಗಳು ಕರ್ತವ್ಯ ನಿರ್ವಹಿಸಲಿಲ್ಲ.

ವರುಣ, ಭಾಸ್ಕರ ಬೆಂಬಲ: ನಾಪೆÇೀಕ್ಲು ವ್ಯಾಪ್ತಿಯಲ್ಲಿ ಕಳೆದ 22 ದಿನಗಳಿಂದ ಎಡೆಬಿಡದೆ ಮಳೆಯಾಗುತ್ತಿತ್ತು. ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ವಿವಿಧ ಸಂಘಟನೆಗಳು ಕೊಡಗು ಬಂದ್‍ಗೆ ಕರೆ ನೀಡಿರುವ ಕಾರಣ ವರುಣ ದೇವ ಕೂಡ ಇದಕ್ಕೆ ಬೆಂಬಲ ಸೂಚಿಸಿದಂತ್ತಿತ್ತು. ಬೆಳಿಗ್ಗೆ ಪ್ರತ್ಯಕ್ಷನಾದ ಭಾಸ್ಕರ ಪ್ರತಿಭಟನಾಕಾ ರರಿಗೆ ಹೆಚ್ಚಿನ ಹುರುಪು, ಪೆÇ್ರೀತ್ಸಾಹ ತೋರಿ ನಿಮ್ಮೊಂದಿಗೆ ನಾವಿದ್ದೇವೆ ಎಂಬ ಸಂದೇಶ ರವಾನಿಸಿದಂತ್ತಿತ್ತು.